Friday, November 8, 2024

ಪಡುಬಿದ್ರೆ ಕಾಡಿಪಟ್ನ ನಡಿಪಟ್ಣ ವಿದ್ಯಾ ಪ್ರಚಾರಕ ಸಂಘ: ಬೆಳ್ಳಿ ಹಬ್ಬದ ಸ್ಮಾರಕ ಕಟ್ಟಡಕ್ಕೆ ಭೂಮಿ ಪೂಜೆ

ಉಡುಪಿ: ಪಡುಬಿದ್ರೆ ಕಾಡಿಪಟ್ನ ನಡಿಪಟ್ಣ ವಿದ್ಯಾ ಪ್ರಚಾರಕ ಸಂಘದ ಅಮೃತ ಮಹೋತ್ಸವ ಹಾಗೂ ಇದರ ಆಡಳಿತದ ಸಾಗರ ವಿದ್ಯಾ ಮಂದಿರ ಶಾಲೆಯ ಬೆಳ್ಳಿ ಹಬ್ಬದ ಸ್ಮಾರಕ ಕಟ್ಟಡದ ಶಿಲಾನ್ಯಾಸ ಮತ್ತು ಭೂಮಿ ಪೂಜೆಯು ಇತ್ತೀಚೆಗೆ ಸಂಘದ ಅಧ್ಯಕ್ಷ ಸುಕುಮಾರ್ ಸಿ ಶ್ರೀಯಾನ್ ಅವರ ಮುಂದಾಳತ್ವದಲ್ಲಿ ನಡೆಯಿತು.

ಶಿಲಾನ್ಯಾಸ ಕಾರ್ಯಕ್ರಮವನ್ನು  ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಇದರ ಪ್ರವರ್ತಕರಾದ ನಾಡೋಜ ಜಿ ಶಂಕರ್ ನೆರವೇರಿಸಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾಜಿ ಶಾಸಕ ಲಾಲಾಜಿ ಮೆಂಡನ್, ವಿನಯ್ ಕುಮಾರ್ ಸೊರಕೆ, ದಕ್ಷಿಣ ಕನ್ನಡ ಮೊಗವೀರ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ ಕೋಟ್ಯಾನ್ ರತ್ನಾಕರ್ ರಾಜ್ ಅರಸು ಕಿನ್ಯಕ್ಕ ಬಲ್ಲಾಳ್ ಪಡುಬಿದ್ರಿ ಬೀಡು ಅನಂತೇಶ ವಿ ಪ್ರಭು (ಮ್ಯಾನೇಜಿಂಗ್ ಪಾರ್ಟ್ನರ್ ಅರುಣ ಇಂಡಸ್ಟ್ರೀಸ್ ಮಂಗಳೂರು) ನವೀನ್ ಚಂದ್ರ ಜೆ ಶೆಟ್ಟಿ (ಸಂಯೋಜಕರು ಕೆಪಿಸಿಸಿ) ವೈ ಸುಧೀರ್ ಕುಮಾರ್ (ಅಧ್ಯಕ್ಷರು ಸಿ‌ಎ ಬ್ಯಾಂಕ್ ಪಡುಬಿದ್ರಿ )ಶ್ರೀಪತಿ ಭಟ್ (ವಿದ್ಯುತ್ ಗುತ್ತಿಗೆದಾರರು ಉಡುಪಿ) ಪ್ರಕಾಶ್ ಶೆಟ್ಟಿ ಪಾದೆ ಬೆಟ್ಟು (ಉಪಾಧ್ಯಕ್ಷರು ಬಿಜೆಪಿ ಉಡುಪಿ) ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಶಶಿಕಾಂತ್ ಪಡುಬಿದ್ರಿ ( ಅಧ್ಯಕ್ಷರು ಅಮೃತ ಮತ್ತು ರಜತ ಮಹೋತ್ಸವ ಸಮಿತಿ) ಶ್ರೀಮತಿ ಪದ್ಮಶ್ರೀ ಸುರೇಶ್ ರಾವ್ (ಮುಖ್ಯ ಶಿಕ್ಷಕರು ಸಾಗರ ವಿದ್ಯಾ ಮಂದಿರ ಪಡುಬಿದ್ರಿ) ನಡಿ ಪಟ್ನ ಮೊಗವೀರ ಮಹಾಸಭಾನಾರಾಯಣ ಕರ್ಕೇರ (ಉಪಾಧ್ಯಕ್ಷರು knvp ಸಂಘ) ಹರೀಶ್ ಪುತ್ರನ್ (ಕಾರ್ಯದರ್ಶಿ knvp ಸಂಘ) ಶ್ರೀಮತಿ ಪವಿತ್ರ ಗಿರೀಶ್( ಅಧ್ಯಕ್ಷರು ರಕ್ಷಕ ಶಿಕ್ಷಕ ಸಂಘ) ನಡಿ ಪಟ್ನ ಮೊಗವೀರ ಮಹಾಸಭಾ ಅಧಧ್ಯಕ್ಷ ಗಂಗಾಧರ್ ಕರ್ಕೆರ, ಕಾಡಿಪಟ್ನ ಮೊಗವೀರ ಮಹಾಸಭಾ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್, ಕಾಡಿಪಟ್ಣ ಮಹಿಳಾ ಮೊಗವೀರ ಸಭಾ ಅಧ್ಯಕ್ಷೆ ವಿಜಯ ಮೆಂಡನ್, ನಡಿಪಟ್ಣ ಮಹಿಳಾ ಮೊಗವೀರ ಸಭಾ ಅಧ್ಯಕ್ಷೆ ಮಲ್ಲಿಕಾ ದಿನಕರ್, ಅಮೃತ ಮತ್ತು ರಜತ ಮಹೋತ್ಸವ ಸಮಿತಿಯ ಧನ ಸಂಗ್ರಹಣ ಸಮಿತಿಯ ಚೆಯರ್ಮೆನ್ ಹರಿಪ್ರಸಾದ್ ಎಚ್, ಪ್ರಶಾಂತ್ ಕಾಂಚನ್ ಅಮೃತ ಮತ್ತು ರಜತ ಮಹೋತ್ಸವದ ಸ್ಮರಣ ಸಂಚಿಕೆ ಸಮಿತಿಯ ಚೆಯರ್ಮೆನ್, ಪವನ್ ಕುಮಾರ್ ಕಟ್ಟಡ ಗುತ್ತಿಗೆದಾರರು, ಅರುಣ್ ಶೆಟ್ಟಿ ಕಟ್ಟಡ ವಿನ್ಯಾಸಕರು ಉಪಸ್ಥಿತರಿದ್ದರು.

ಕೆ ಎನ್ ವಿ ಪಿ ಸಂಘದ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕರಾದ ಸುಕುಮಾರ್ ಸಿ ಶ್ರೀಯಾನ್ ಸ್ವಾಗತಿಸಿದರು.  ಶಾಲಾ ಮುಖ್ಯೋಪಾಧ್ಯಾಯನಿ ಪದ್ಮಶ್ರೀ ಸುರೇಶ್ ವಂದಿಸಿದರು. ಶಾಲಾ ಶಿಕ್ಷಕಿ ವಿನುತಾ ಶೆಟ್ಟಿ, ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!