Wednesday, September 11, 2024

ಕಂಡ್ಲೂರು ಹೊಳೆಗೆ ಹಾರಿದ ವ್ಯಕ್ತಿಯ ಮೃತದೇಹ ಪತ್ತೆ

ಕುಂದಾಪುರ: ಮಂಗಳವಾರ ಕಂಡ್ಲೂರು ಸೇತುವೆಯಿಂದ ಹೊಳೆಗೆ ಹಾರಿ ಕೊಚ್ಚಿಕೊಂಡು ಹೋಗಿದ್ದ ಹರೀಶ್ ಕಾಳಾವರ (44ವ) ಅವರ ಮೃತದೇಹ ಗುರುವಾರ ಪತ್ತೆಯಾಗಿದೆ. ಮೂರು ದಿನಗಳ ತೀವ್ರ ಹುಡುಕಾಟದ ಬಳಿಕ ಆನಗಳ್ಳಿ ಸಮೀಪ ಮೃತದೇಹ ಪತ್ತೆಯಾಗಿದೆ.

ನದಿಗೆ ಹಾರಿದ ಕೂಡಲೇ ಹುಡುಕಾಟ ಆರಂಭಿಸಲಾಗಿತ್ತು. ನದಿ ತುಂಬಿ ಹರಿಯುತ್ತಿದ್ದು ಹುಡುಕಾಟ ಕಷ್ಟಕರವಾಗಿತ್ತು. ಕುಂದಾಪುರದ ಅಗ್ನಿಶಾಮಕ ದಳದ ಸಿಬಂದಿಗಳು ಶೌರ್ಯ ತಂಡದ ಸದಸ್ಯರು, ಮುಳುಗುತಜ್ಞ ಈಶ್ವರ್ ಮಲ್ಪೆ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು.

ಹರೀಶ ಅವರ ಕೌಟುಂಬಿಕ ಜಗಳ ಠಾಣೆಯ ಮೆಟ್ಟಿಲೇರಿತ್ತು. ಮಂಗಳವಾರ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಇತ್ಯರ್ಥವಾಗಿ ಇಬ್ಬರನ್ನು ಮನೆಗೆ ಕಳಿಸಲಾಗಿತ್ತು. ಅಟೋ ಕಂಡ್ಲೂರು ಗ್ರಾಮದ ಕಂಡ್ಲೂರು ಸೇತುವೆಯ ಮೇಲೆ ಸಂಚರಿಸುತ್ತಿರುವಾಗ  ಹರೀಶ್‌ ರಿಕ್ಷಾ ಚಾಲಕನಲ್ಲಿ ತಾನು ಮನೆಯಿಂದ ತಂದಿದ್ದ ದೇವರ ತಾಯತ ಮತ್ತು ನೂಲುಗಳನ್ನು ಕಂಡ್ಲೂರು ವಾರಾಹಿ ನದಿಗೆ ಬಿಸಾಡಲು ರಿಕ್ಷಾವನ್ನು ನಿಲ್ಲಿಸುವಂತೆ ಹೇಳಿದ್ದು ಅದರಂತೆ ರಿಕ್ಷಾ ಚಾಲಕನು ರಿಕ್ಷಾದ ವೇಗವನ್ನು ಕಡಿಮೆ ಮಾಡಿದಾಗ ಹರೀಶ್‌ನು ಒಮ್ಮೇಲೆ ರಿಕ್ಷಾದಿಂದ ಕೆಳಕ್ಕೆ ಇಳಿದು ಸೇತುವೆಯ ತಡೆಬೇಲಿಯನ್ನು ಹಾರಿ ಕಂಡ್ಲೂರು ವಾರಾಹಿ ನದಿಗೆ ದುಮುಕಿದ್ದು ಹೊಳೆಯ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.

ಠಾಣಾಧಿಕಾರಿ ನೂತನ ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆದಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!