spot_img
Tuesday, March 31, 2026
spot_img

ವಂಡ್ಸೆ ಸಂಯೋಜಕ ವೃತ್ತ: ಪ್ರಥಮ ಸಮಾಲೋಚನಾ ಸಭೆ

ವಂಡ್ಸೆ: ವಂಡ್ಸೆ ಸಂಯೋಜಕ ವೃತ್ತದ ಪ್ರಥಮ ಸಮಾಲೋಚನಾ ಸಭೆಯು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲೂರು ಇಲ್ಲಿ ಜು.13ರಂದು ನಡೆಯಿತು.

ಈ ಸಭೆಯಲ್ಲಿ ವಿದ್ಯಾಪ್ರವೇಶ, ಸೇತುಬಂಧ, ಶಾಲಾ ಶೈಕ್ಷಣಿಕ ಯೋಜನೆ, ಎಫ್.ಎಲ್.ಎನ್, ತರಗತಿವಾರು ಕಾರ್ಡ್ ಜೋಡಣೆ, ತರಗತಿವಾರು ಮತ್ತು ವಿಷಯವಾರು ಕಲಿಕಾ ಫಲಗಳ ಪರಿಚಯ ಹಾಗೂ ಪ್ರಶ್ನೆ ಪತ್ರಿಕೆ ರಚನೆ ಇತ್ಯಾದಿ ವಿಷಯಗಳ ಕುರಿತಾಗಿ ಚರ್ಚಿಸಲಾಯಿತು.

ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕರಾಗಿ ವಂಡ್ಸೆ ಮತ್ತು ಕೆರಾಡಿ ಕ್ಲಸ್ಟರ್ ನ ಸಿ ಆರ್ ಪಿ ನಾಗರಾಜ ಶೆಟ್ಟಿ ಮತ್ತು ಕೊಲ್ಲೂರು ಕ್ಲಸ್ಟರ್ ನ ಪ್ರಭಾರ ಸಿ.ಆರ್.ಪಿ ಭಾಸ್ಕರ್ ನಾಯ್ಕ್ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಕರ್ಕುಂಜೆ ಕ್ಲಸ್ಟರ್ ನ ಸಿ.ಆರ್.ಪಿ ನಾರಾಯಣ ಕೊಠಾರಿ, ಆಜ್ರಿ ಮಾನಂಜೆ ಕ್ಲಸ್ಟರ್ ನ ಸಿ.ಆರ್.ಪಿ ರಾಘವೇಂದ್ರ, ಕದಳಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಘವೇಂದ್ರ ಗುಲ್ವಾಡಿ, ಮಾವಿನಗುಳಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ದೀಪಾ ಉಪಸ್ಥಿತರಿದ್ದರು.

ಕೊಲ್ಲೂರು, ಕೆರಾಡಿ, ವಂಡ್ಸೆ, ಕರ್ಕುಂಜೆ ಮತ್ತು ಆಜ್ರಿ ಮಾನಂಜೆ ಕ್ಲಸ್ಟರ್ ನ ಶಿಕ್ಷಕರು ಭಾಗವಹಿಸಿದ್ದರು. ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾರದಾ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಸಹಶಿಕ್ಷಕಿ ಸುಮಿತ್ರಾ ವಂದಿಸಿದರು. ಶೈಲಜಾ ಅವರು ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!