spot_img
Saturday, June 21, 2025
spot_img

ಲಯನ್ಸ್ ಪ್ರಾಂತೀಯ ಅಧ್ಯಕ್ಷರಾಗಿ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ ಆಯ್ಕೆ

ಕುಂದಾಪುರ: ಲಯನ್ಸ್ ಜಿಲ್ಲೆ 317ಸಿ, ಪ್ರಾಂತ್ಯ V ರ ಪ್ರಾಂತೀಯ ಅಧ್ಯಕ್ಷರಾಗಿ, ಕುಂದಾಪುರ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಲಯನ್ Adv.. ಬನ್ನಾಡಿ ಸೋಮನಾಥ ಹೆಗ್ಡೆ ಇವರನ್ನು ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಮಹಮ್ಮದ್ ಹನೀಫ್ ನಿಯುಕ್ತಿಗೊಳಿಸಿದ್ದಾರೆ.

ಬನ್ನಾಡಿ ಸೋಮನಾಥ ಹೆಗ್ಡೆ ಅವರು ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಸ್ಥಾಪಕಧ್ಯಕ್ಷರಾಗಿ, ಲಯನ್ಸ್ ರೀಜನ್ ಕೋ-ಆರ್ಡಿನೇಟರ್ ಆಗಿ, ಲಯನ್ಸ್ ವಲಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು.

ಪ್ರಾಂತೀಯ ಕಾರ್ಯದರ್ಶಿಯಾಗಿ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ನಿವೃತ್ತ ಮ್ಯಾನೇಜರ್ ಹಾಗೂ ಬ್ರಹ್ಮಾವರ ಲಯನ್ಸ್ ಕ್ಲಬ್‌ನ ಲಯನ್ ಆನಂದ ಶೆಟ್ಟಿ ಕಬ್ಬೈಲ್ ಇವರನ್ನು ನೇಮಿಸಲಾಗಿದೆ.

ಪ್ರಾಂತ್ಯ V , ವಲಯ I ರ ವಲಯಾಧ್ಯಕ್ಷರನ್ನಾಗಿ ತೆಕ್ಕಟ್ಟೆ ಲಯನ್ಸ್ ಕ್ಲಬ್‌ನ ಲಯನ್ ಧರ್ಮರಾಜ್ ಮುದಲಿಯಾರ್ ಮತ್ತು ವಲಯ ಕಾರ್ಯದರ್ಶಿಯಾಗಿ ಲಯನ್ ಅರುಣ್ ಕುಮಾರ್ ಶೆಟ್ಟಿ, ವಲಯ II ರ ವಲಯಾಧ್ಯಕ್ಷರನ್ನಾಗಿ ಹಂಗಳೂರು ಲಯನ್ಸ್ ಕ್ಲಬ್‌ನ ಲಯನ್ ಬಾಲಕೃಷ್ಣ ಶೆಟ್ಟಿ ಮತ್ತು ವಲಯ ಕಾರ್ಯದರ್ಶಿಯಾಗಿ ಲಯನ್ ವಿಲ್‌ಫ್ರೆಡ್ ಮೆನೆಜಸ್ ಹಾಗೂ ವಲಯ III ರ ವಲಯಾಧ್ಯಕ್ಷರನ್ನಾಗಿ ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್‌ನ ಲಯನ್ ಬೆಳ್ವೆ ವಂಸತ್ ಶೆಟ್ಟಿ ಮತ್ತು ವಲಯ ಕಾರ್ಯದರ್ಶಿಯಾಗಿ ಲಯನ್ ಪಟ್ಟಾಭಿರಾಮ್ ಭಟ್ ಇವರನ್ನು ನೇಮಿಸಲಾಗಿದೆ.

ಲಯನ್ಸ್ ಕ್ಲಬ್ ತೆಕ್ಕಟ್ಟೆ, ಲಯನ್ಸ್ ಕ್ಲಬ್ ಬನ್ನಾಡಿ- ವಡ್ಡರ್ಸೆ, ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು, ಲಯನ್ಸ್ ಕ್ಲಬ್ ಕೋಟ-ಗಿಳಿಯಾರು ಪ್ರಾಂತ್ಯ V ವಲಯ I ರ ವ್ಯಾಪ್ತಿಗೆ, ಲಯನ್ಸ್ ಕ್ಲಬ್ ಹಂಗಳೂರು, ಲಯನ್ಸ್ ಕ್ಲಬ್ ಕೋಟೇಶ್ವರ, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಪ್ರಾಂತ್ಯ ಗಿ ವಲಯ II ರ ವ್ಯಾಪ್ತಿಗೆ ಹಾಗೂ ಲಯನ್ಸ್ ಕ್ಲಬ್ ಆರ್ಡಿ-ಬೆಳ್ವೆ-ಗೋಳಿಯಂಗಡಿ, ಲಯನ್ಸ್ ಕ್ಲಬ್ ಮೊಳಹಳ್ಳಿ ಶಿವಶಾಂತಿ, ಲಯನ್ಸ್ ಕ್ಲಬ್ ಹಾಲಾಡಿ-ಬಿದ್ಕಲ್‌ಕಟ್ಟೆ, ಲಯನ್ಸ್ ಕ್ಲಬ್ ಕೊರ್ಗಿ-ಕಾಳವಾರ ಪ್ರಾಂತ್ಯ V ವಲಯ III ರ ವ್ಯಾಪ್ತಿಗೆ ಸೇರಿದ್ದು, ಒಟ್ಟು 12 ಲಯನ್ಸ್ ಕ್ಲಬ್‌ಗಳು ಪ್ರಾಂತ್ಯ v ರ ವ್ಯಾಪ್ತಿಗೆ ಒಳಪಟ್ಟಿವೆ.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!