spot_img
Wednesday, January 22, 2025
spot_img

ಗೃಹ ಪ್ರವೇಶದಂದು ತಾಳಮದ್ದಳೆಯಂತಹ ಕಲಾಪ್ರಕಾರದ ಆಯೋಜನೆ ಸ್ತುತ್ಯರ್ಹವಾದುದು-ಬಿ.ಅಪ್ಪಣ್ಣ ಹೆಗ್ಡೆ

ತೆಕ್ಕಟ್ಟೆ: ಧಾರ್ಮಿಕ ವಿಧಿ ವಿಧಾನಗಳನ್ನು ಅರಿತ ಸುಧಾಕರ ಶೆಟ್ಟಿಯವರು ಗುರು ಹಿರಿಯರ ಮೇಲಿನ ಅಪಾರ ಗೌರವವನ್ನು ಹೊಂದಿದವರು. ಜೀವನದಲ್ಲಿ ಬಹು ಕಷ್ಟದಿಂದ ಏಳ್ಗೆಯನ್ನು ಸಾಧಿಸಿದವರು. ಅಪಾರ ಜನಸ್ನೇಹಿಯಾಗಿ ಸಮಾಜದಲ್ಲಿ ಚಿರಪರಿಚಿತರಾಗಿ ಸಾಂಸ್ಕೃತಿಕ ವಲಯಕ್ಕೂ, ಸಮಾಜ ಸೇವಾ ಸಂಸ್ಥೆಗಳಿಗೂ, ಧಾರ್ಮಿಕ ಕ್ಷೇತ್ರಗಳಿಗೂ ನೆರವನ್ನು ನೀಡುತ್ತಾ ಬೆಳೆದವರು. ಕಲಾಪ್ರೇಮಿಯಾಗಿರುವ ಇವರು ತಾಳಮದ್ದಳೆಯಂತಹ ಅಪೂರ್ವ ಕಲಾವಿದರ ತಾಳಮದ್ದಳೆಯನ್ನು ಏರ್ಪಡಿಸಿ, ಗೃಹಪ್ರವೇಶ ಎನ್ನುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಜೊತೆಗೂಡಿಸಿರುವುದು ಮೆಚ್ಚುವಂತಹದ್ದು ಎಂದು ಬಸ್ರೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗಡೆ ಸುಧಾಕರ ಶೆಟ್ಟಿ ದಂಪತಿಗಳನ್ನು ಗೌರವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ತೆಕ್ಕಟ್ಟೆಯ ಪಟೇಲರ ಬೆಟ್ಟುವಿನಲ್ಲಿ ಶಾಂತಾ ಸುಧಾಕರ ಶೆಟ್ಟಿ ಮನೆಯಂಗಳದಲ್ಲಿ ಜುಲೈ 7ರಂದು, ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಸಿನ್ಸ್ 1999 ಶ್ವೇತಯಾನ-41 ಕಾರ್ಯಕ್ರಮದಡಿಯಲ್ಲಿ ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ನಡೆದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿನ ತಾಳಮದ್ದಳೆ ಶ್ರೀ ರಾಮ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಸುಧಾಕರ ಶೆಟ್ಟಿ, ಶಾಂತಾ ಶೆಟ್ಟಿ, ಕು| ಮಾನ್ವಿಯವರನ್ನು ಅಭಿನಂದಿಸಿ ಅಪ್ಪಣ್ಣ ಹೆಗಡೆ ಮಾತನ್ನಾಡಿದರು.

ಕಲಾಪ್ರಜ್ಞೆಯುಳ್ಳವನು ಸಂಸ್ಕಾರವಂತನಾಗಿರುತ್ತಾನೆ. ಯಶಸ್ವೀ ಸಂಸ್ಥೆಯ ಶ್ವೇತಯಾನ ಯೋಜನೆಯಡಿಯಲ್ಲಿ ತೊಡಗಿಸಿಕೊಳ್ಳುವುದು ಸುಯೋಗವೂ ಹೌದು. ತನ್ಮೂಲಕ ಪ್ರಯೋಜಕರೆಲ್ಲರೂ ಸಮಾರೋಪದಲ್ಲಿ ಯಕ್ಷಗಾನ ವೇಷ ತೊಟ್ಟು ರಂಗವೇರುವ ಸೌಭಾಗ್ಯ ದೊರಕುವಂತಾಗಲಿ ಎಂದು ಮಲ್ಯಾಡಿ ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ರೊ| ಗಣಪತಿ ಟಿ. ಶ್ರೀಯಾನ್, ರೊ| ಕೃಷ್ಣ ಮೊಗವೀರ, ರೊ| ಸುರೇಶ್ ಬೇಳೂರು, ಉಪಸ್ಥಿತರಿದ್ದರು. ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ‘ಶ್ರೀ ರಾಮ ಪಟ್ಟಾಭಿಷೇಕ’ ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!