Sunday, October 13, 2024

ಶ್ರೀ ಶಾರದಾ ಶಿಕ್ಷಣ ಸಂಸ್ಥೆ ಬಸ್ರೂರು : ಗದ್ದೆಯಲ್ಲಿ ಮಕ್ಕಳ ಸಂಭ್ರಮ

ಜನಪ್ರತಿನಿಧಿ (ಬಸ್ರೂರು) : ಆಧುನಿಕತೆಯತ್ತ ವಾಲುತ್ತಿರುವ ಇಂದಿನ ಯುವ ಪೀಳಿಗೆಗೆ ಗ್ರಾಮೀಣ ಕ್ರೀಡೆಗಳ, ರೈತ ಹಾಗೂ ಕೃಷಿಯ ಬಗೆಗೆ ಅರಿವನ್ನು ಮೂಡಿಸುವ ಸದುದ್ದೇಶದಿಂದ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ಸಂಭ್ರಮ ಗದ್ದೆಯಲ್ಲಿ ಎನ್ನುವ ವಿನೂತನ ಕಾರ್ಯಕ್ರಮವನ್ನು ಬಳ್ಕೂರಿನ ಸಮೀಪದ ಸುಬ್ರಾಯ ಭಟ್ ಅವರ ಗದ್ದೆಯಲ್ಲಿ ಆಯೋಜಿಸಲಾಯಿತು. ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪಾಲಕರಿಂದ ನಾಟಿಯನ್ನು ಮಾಡುವ ಮೂಲಕ ಕಾರ್ಯಕ್ರಮ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ರಾಜ್ಯಮಟ್ಟದ ಕಂಬಳ ವಿಜೇತ ಕೋಣಗಳ ಕೆಸರುಗದ್ದೆ ಓಟವು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿತು.

ಶಾಲಾ ಸಂಚಾಲಕರಾದ ಸಂತೋಷ್ ಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ಮಮತಾ ಪೂಜಾರಿ, ಆಡಳಿತ ಅಧಿಕಾರಿಯದ ಆಶಾ ಶೆಟ್ಟಿ, ಸಹಾ ಆಡಳಿತಾಧಿಕಾರಿಯಾದ ಸುಮಂತ್ ಹಾಗೂ ಅತಿಥಿಗಳಾಗಿ ದಿನಕರ ಶೆಟ್ಟಿ, ಬಸ್ರೂರು ಅಧ್ಯಕ್ಷರು ಗ್ರಾಮ ಪಂಚಾಯತ್ ಬಸ್ರೂರು,  ಕ್ರಾವ್ರಾಡಿ ವ್ಯವಸಾಯ ಸೇವಾ ಸಂಘದ ಸದಾನಂದ ಬಳ್ಕೂರು, ನಾಗೇಶ್ ಜೆ ಇ ಇ ಅಂಪಾರು , ಶ್ರೀ ಮಾಲಿಂಗೇಶ್ವರ ಪೆಟ್ರೋಲ್ ಪಂಪ್ ಬೈಂದೂರಿನ ರಾಜೇಶ್, ಸುಬ್ರಾಯ್ ಭಟ್ ಮತ್ತು ಮತ್ತಿತರು ಉಪಸ್ಥಿತರಿದ್ದರು.

ಮಕ್ಕಳಿಗೆ ಗದ್ದೆಯಲ್ಲಿ ತರಗತಿವಾರು ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ ,ಪಾಲಕರು ಮತ್ತು ಶಿಕ್ಷಕರ ನಡುವೆ ಹಗ್ಗ ಜಗ್ಗಾಟ, ಮಕ್ಕಳೊಂದಿಗೆ ಹಿಮ್ಮುಖ ನಡಿಗೆ ಸೇರಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಂಬಳದಲ್ಲಿ ಭಾಗವಹಿಸಿ ವಿಜೇತರಾದ ಗಣೇಶ್ ಉಳ್ಳೂರ್ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮವನ್ನು ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!