spot_img
Wednesday, January 22, 2025
spot_img

ದ್ರಾವಿಡ ಭಾಷಾ ಅನುವಾದಕರ ಸಂಘ: ಪ್ರಶಸ್ತಿಗೆ ಕಾದಂಬರಿಗಳ ಆಹ್ವಾನ

ಬೆಂಗಳೂರು: ದ್ರಾವಿಡ ಭಾಷಾ ಅನುವಾದಕರ ಸಂಘವು ಪಂಚದ್ರಾವಿಡ ಭಾಷೆಗಳ ಪರಸ್ಪರ ಕೊಡುಕೊಳ್ಳುವಿಕೆಯನ್ನು ಉತ್ತೇಜಿಸುವ ಸಂಸ್ಥೆಯಾಗಿದೆ. ಒಂದು ದ್ರಾವಿಡ ಭಾಷೆಯಿಂದ ಇನ್ನೊಂದಕ್ಕೆ ಅನುವಾದ ಮಾಡುವ ಕ್ರಿಯೆಯನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಈ ವರ್ಷದಿಂದ ಪ್ರಶಸ್ತಿಯೊಂದನ್ನು ನೀಡಲು ತೀರ್ಮಾನಿಸಿದೆ. ಪ್ರಸ್ತುತ ವರ್ಷದ ಪ್ರಶಸ್ತಿಗೆ, ಇತರ ದ್ರಾವಿಡ ಭಾಷೆಗಳಿಂದ ನೇರವಾಗಿ ತಮಿಳಿಗೆ ಅನುವಾದಗೊಂಡ, ಕಳೆದ ಎರಡು ವರ್ಷಗಳಲ್ಲಿ (2022 ಮತ್ತು 2023) ಪ್ರಕಟವಾದ 100 ಪುಟಗಳಿಗೆ ಕಡಿಮೆಯಿಲ್ಲದ ಕಾದಂಬರಿಗಳನ್ನು ಆಹ್ವಾನಿಸಿದೆ. ಅನುವಾದಿತ ಕೃತಿಯ ಮೂರು ಪ್ರತಿಗಳನ್ನು ಮೂಲ ಭಾಷೆಯ ಒಂದು ಪ್ರತಿಯೊಂದಿಗೆ ಜುಲೈ 15, 2024 ರ ಮೊದಲು ಅಧ್ಯಕ್ಷರು, ದ್ರಾವಿಡ ಭಾಷಾ ಅನುವಾದಕರ ಸಂಘ, ಶ್ರೀ ಭೈರವೇಶ್ವರ ನಿಲಯ, ಇಮ್ಮಡಿಹಳ್ಳಿ ಮುಖ್ಯ ರಸ್ತೆ, ಹಗದೂರು, ವೈಟ್‍ಫೀಲ್ಡ್, ಬೆಂಗಳೂರು-560066 ಗೆ ಕಳುಹಿಸಲು ವಿನಂತಿಸಲಾಗಿದೆ. ಪ್ರಶಸ್ತಿ ಮೊತ್ತ 11,111 (ಹನ್ನೊಂದು ಸಾವಿರದ ನೂರ ಹನ್ನೊಂದು). 2024 ಸೆಪ್ಟೆಂಬರ್ ನಲ್ಲಿ ನಡೆಯುವ ಸಂಘದ ಮೂರನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಡಿಬಿಟಿಎ ಅಧ್ಯಕ್ಷೆ ಡಾ.ಸುಷ್ಮಾ ಶಂಕರ್ ಹೇಳಿದ್ದಾರೆ. ಹೆಚ್ಚಿನ ವಿವರಗಳಿಗೆ : 9901041889; 8147212724 ಸಂಪರ್ಕಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!