Wednesday, September 11, 2024

ಕುಂದಾಪುರದಲ್ಲಿ ಲಯನ್ಸ್‌ ಕ್ಲಬ್‌ ವತಿಯಿಂದ ಇದೇ ಮೊದಲ ಬಾರಿಗೆ ಹಲಸು ಹಾಗೂ ಕೃಷಿ ಮೇಳ !

ಜನಪ್ರತಿನಿಧಿ (ಕುಂದಾಪುರ) : ಲಯನ್ಸ್‌ ಕ್ಲಬ್‌, ಕುಂದಾಪುರ ಕ್ರೌನ್‌, ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದಲ್ಲಿ ಇದೇ ಮೊದಲ ಬಾರಿಗೆ ʼಹಲಸು ಹಾಗೂ ಕೃಷಿ ಮೇಳ 2024ʼ 12.07.2024 ಶುಕ್ರವಾರದಿಂದ 14.07.2024 ಆದಿತ್ಯವಾರದ ತನಕ ಕುಂದಾಪುರದ ನೆಹರೂ ಮೈದಾನದಲ್ಲಿ ನಡೆಯಲಿದೆ.

ಬಯಲು ಸೀಮೆಯ ಸಿಹಿ ಕೆಂಪು ಹಲಸು, ಮಾವಿನ ಹಣ್ಣು, ರಂಬೂಟನ್‌, ಡ್ರ್ಯಾಗನ್ ಫ್ರೂಟ್ಸ್‌ ಹಾಗೂ ವಿವಿಧ ಹಣ್ಣುಗಳು ಮತ್ತು ಹಲಸಿನ ಹಾಗೂ ವಿವಿಧ ಹಣ್ಣಿನ ಐಸ್‌ಕ್ರೀಂ, ಜ್ಯೂಸ್‌, ಹಲಸಿನ ಹೋಳಿಗೆ, ದೋಸೆ ಹಾಗೂ ಹಲಸಿನ ವಿವಿಧ ತಾಜಾ ತಿಂಡಿಗಳು, ಹಲಸಿನ ಹಾಗೂ ವಿವಿಧ ಜಾತಿಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು, ಸಾವಯವ ಗೊಬ್ಬರ, ಆಯುರ್ವೇದಿಕ್‌ ವಸ್ತುಗಳು, ಕೃಷಿ ಯಂತ್ರೋಪಕರಣಗಳು, ಗೃಹ ತಯಾರಿಕಾ ವಸ್ತುಗಳು, ಸಾವಯವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ವಿಶೇಷ ಆಕರ್ಷಣೆಯಾಗಿ ಮೇಳದಲ್ಲಿ ಇರಲಿವೆ.

ತೋಟಗಾರಿಕಾ ಇಲಾಖೆಯಿಂದ ಮಾಹಿತಿ ಕಾರ್ಯಗಾರ ಕೂಡ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!