spot_img
Saturday, December 7, 2024
spot_img

ರಸ್ತೆ ಅಪಘಾತ: ಭಾಗವತ ಕೆ.ಜಿ ವೇಣುಗೋಪಾಲ ಕೆಳಮನೆ ನಿಧನ

ಸಿಗಂದೂರು ಯಕ್ಷಗಾನ ಮೇಳದ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಜಿ ವೇಣುಗೋಪಾಲ ಕೆಳಮನೆ (44ವ) ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಜೂ.25ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಜೂನ್ ೨೪ರಂದು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿ ತಲೆಗೆ ತೀವ್ರ ಗಾಯವಾಗಿತ್ತು. ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ನಿಧನರಾದರು.
ಮೃತರು ತಂದೆ ಭಾಗವತರಾದ ಕೆ.ಜಿ ರಾಮರಾವ್, ತಾಯಿ ಹಾಗೂ ಸಹೋದರರನ್ನು ಅಗಲಿದ್ದಾರೆ.

ಉತ್ತಮ ಕಂಠಸಿರಿ ಹೊಂದಿದ್ದ ಇವರು ವೇಣುಗೋಪಾಲ್ ಪುರಪ್ಪೆಮನೆ ಎಂದೇ ಪ್ರಸಿದ್ಧಿ ಪಡೆದಿದ್ದರು. ಪೌರಾಣಿಕ ಪ್ರಸಂಗಗಳು, ಸಾಮಾಜಿಕ ಪ್ರಸಂಗಗಳ ಭಾಗವತಿಕೆಯಲ್ಲಿ ಯುವ ಪ್ರೇಕ್ಷಕ ವರ್ಗವನ್ನು ಯಕ್ಷಗಾನದತ್ತ ಸೆಳೆಯುತ್ತಿದ್ದ ಅವರು ಹಳೆಯ ಹೊಸ ರಾಗಗಳಲ್ಲಿ ಪ್ರಬುದ್ಧತೆ ಹೊಂದಿದ್ದರು. ದೇವಿ ಮಹಾತ್ಮೆಯ ಭಾಗವತಿಕೆ ಅದ್ಭುತವಾಗಿ ಮಾಡುತ್ತಿದ್ದರು. ಮಾತ್ರವಲ್ಲ ಉತ್ತಮ ನಿರ್ದೇಶಕರಾಗಿ, ಇಡೀ ಆಟವನ್ನು ಅತ್ಯಂತ ವ್ಯವಸ್ಥಿತವಾಗಿ ಆಡಿಸುತ್ತಿದ್ದರು. ಹಿರಿ-ಕಿರಿಯ ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಸಾಗರ ಸಮೀಪದ ಹೆಗ್ಗೋಡು ಕೆಳಮನೆ ಕಲಾವಿದರ ಕುಟುಂಬವೆಂದೇ ಪರಿಭಾವಿಸಬಹುದು. ಈ ಪ್ರತಿಷ್ಠಿತ ಕುಟುಂಬದರಾಗಿದ್ದ ಇವರು ಉಡುಪಿ ಕಲಾಕೇಂದ್ರದಲ್ಲಿ ಭಾಗವತಿಕೆ, ಯಕ್ಷಗಾನದ ಶಿಕ್ಷಣ ಪಡೆದಿದ್ದರು. ಕೆಲಕಾಲ ಉಡುಪಿ ಕಲಾಕೇಂದ್ರದಲ್ಲಿ ಗುರುಗಳಾಗಿಯೂ ಸೇವೆ ಸಲ್ಲಿಸಿದ್ದರು. ಸಾಲಿಗ್ರಾಮ ಮೇಳದಲ್ಲಿ ಸಂಗೀತಗಾರರಾಗಿಯೂ ಸೇವೆ ಸಲ್ಲಿಸಿದ್ದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!