spot_img
Wednesday, January 22, 2025
spot_img

ಸಾರ್ವಜನಿಕರ ಮನವಿಗೆ ತುರ್ತಾಗಿ ಸ್ಪಂದಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕುಂದಾಪುರ: ಪುರಸಭಾ ವ್ಯಾಪ್ತಿಯ ಚಿಕ್ಕನ್ ಸಾಲ್ ರಸ್ತೆಯ ಜೈಹಿಂದ್ ಹೋಟೆಲ್ ಹತ್ತಿರದ ಅಶ್ವತ್ಥ ಮರದ ಕೊಂಬೆಗಳು ಅಗಲವಾಗಿ ರಸ್ತೆಯ ಕಡೆಗೆ ವಾಲಿಕೊಂಡಿದ್ದು, ಮಳೆಗಾಲ ಪ್ರಾರಂಭಗೊಂಡಿರುವುದರಿಂದ ರಸ್ತೆಗೆ ಬಿದ್ದು ಜೀವ ಹಾನಿಯಾಗುವ ಸಂದರ್ಭವಿದ್ದು, ಶಾಲಾ ವಿದ್ಯಾರ್ಥಿಗಳು ತಿರುಗುವಾಗ ವಾಹನಗಳು ಅಧಿಕವಾಗಿ ಈ ರಸ್ತೆಯಲ್ಲಿ ತಿರುಗುತ್ತಿದ್ದು ಹತ್ತಿರದ ಮನೆಗಳು ಅಂಗಡಿಗಳು ಹಾಗೂ ಹೋಟೆಲ್ ಗಳು ಇದ್ದು ದುರಂತ ಸಂಭವಿಸಿದರೆ ಅಪಾರ ಹಾನಿ ನಷ್ಟ ಆಗುತ್ತದೆ.ಆದ್ದರಿಂದ ದುರಂತ ನಡೆಯುವ ಮೊದಲೇ ಮರವನ್ನು ತೆರವುಗೊಳಿಸುವುದರ ಬಗ್ಗೆ ಸಾರ್ವಜನಿಕರ ಸಹಿ ಸಂಗ್ರಹದ ಮನವಿಯನ್ನು ಪುರಸಭಾ ಸದಸ್ಯರಾದ ಸಂತೋಷ್ ಶೆಟ್ಟಿಯವರು ಸಾರ್ವಜನಿಕರೊಂದಿಗೆ ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಶಾಸಕರು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿ ತುರ್ತಾಗಿ ಮರ ತೆರವುಗೊಳಿಸುವಂತೆ ಸೂಚನೆ ನೀಡಿದ್ದು 24 ಗಂಟೆ ಒಳಗೆ ಅಪಾಯಕಾರಿ ಮರ ತೆರವುಗೊಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!