Wednesday, September 11, 2024

ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಗಣಪತಿ ಟಿ.ಶ್ರೀಯಾನ್ ಆಯ್ಕೆ

ತೆಕ್ಕಟ್ಟೆ: ತೆಕ್ಕಟ್ಟೆ ರೋಟರಿ ಕ್ಲಬ್ ಇದರ ೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷರಾಗಿ ಉಡುಪಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಹೋಟೆಲ್ ಉದ್ಯಮಿ ಟಿ.ಕೃಷ್ಣ ಮೊಗವೀರ ಆಯ್ಕೆಯಾಗಿದ್ದಾರೆ.

ಗಣಪತಿ ಟಿ.ಶ್ರೀಯಾನ್ ಅವರು ಸಮಾಜಸೇವೆಯ ಮೂಲಕ ಗುರುತಿಸಿಕೊಂಡವರು. ರಸ್ತೆ ಅಪಘಾತ, ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ, ದುರ್ಬಲರಿಗೆ ನೆರವು ಹೀಗೆ ಸಮಾಜಮುಖಿಯಾಗಿ ಬೆಳೆದು ಬಂದ ಅವರು ಮೊಗವೀರ ಯುವ ಸಂಘಟನೆಯ ಮೂಲಕ ತನ್ನ ಸಂಘಟನಾ ಚಾತುರ್ಯತೆಯನ್ನು ಇನ್ನಷ್ಟು ಬೆಳೆಸಿಕೊಂಡವರು. ಮಂಜುಶ್ರೀ ಇಂಜಿನಿಯರಿಂಗ್ ವರ್ಕ್ಸ್ ಮೂಲಕ ವೃತ್ತಿ ಜೀವನ ನಡೆಸುತ್ತಿರುವ ಇವರ ಸಂಸ್ಥೆ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿದೆ.

ಕೆಲಸದ ಒತ್ತಡದ ನಡುವೆಯೂ ಕಲೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಒಲವು ಇರಿಸಿಕೊಂಡವರು. ಉತ್ತಮ ಹವ್ಯಾಸಿ ಕಲಾವಿದ. ಯಕ್ಷಗಾನದಲ್ಲಿ ಹಾಸ್ಯ ಪಾತ್ರಗಳನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಪ್ರತಿಭಾನ್ವಿತ ಹವ್ಯಾಸಿ ಕಲಾವಿದರಾಗಿ ಗುರುತಿಸಿಕೊಂಡವರು. ರಂಗಭೂಮಿಯಲ್ಲಿಯೂ ಕೂಡಾ ಪಾತ್ರಗಳ ನಿರ್ವಹಿಸಿದ್ದಾರೆ.

ಈ ಹಿಂದೆ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ತನ್ನ ಕಾರ್ಯವೈಖರಿಯ ಮೂಲಕವೇ ಗಮನ ಸಳೆದವರು. ಈ ಅವಧಿಯಲ್ಲಿ ಅವರು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕೂಡಾ ಗುರುತರವಾದ ಸೇವೆ ಸಲ್ಲಿಸಿದ್ದಾರೆ.

ರಸ್ತೆ ಅಪಘಾತ, ಅಗ್ನಿ ಅವಘಡದಂತಹ ಸಂದರ್ಭದಲ್ಲಿ ತುರ್ತು ಧಾವಿಸಿ ಪರಿಹಾರ ಕಾರ್ಯದಲ್ಲಿ ನಿರತರಾಗುವ ವ್ಯಕ್ತಿತ್ವ ಇವರದ್ದು. ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಕೂಡಾ ವಿವಿಧ ಮಹತ್ವದ ಜವಬ್ದಾರಿಯನ್ನು ನಿರ್ವಹಿಸುತ್ತಾ ಬಂದವರು. ದೇವಸ್ಥಾನಗಳ ಜೀರ್ಣೋದ್ಧಾರ, ಆಡಳಿತ ಸಮಿತಿಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ಕೂಡಾ ಗುರುತಿಸಿಕೊಂಡಿದ್ದಾರೆ.

ಇದೀಗ ಅವರ ಸೇವಾ ಮನೋಭಾವ ಇನ್ನಷ್ಟು ವಿಸ್ತರಿಸಲು ರೋಟರಿ ಕ್ಲಬ್ ಅಧ್ಯಕ್ಷ ಸ್ಥಾನ ಆರ್ಹವಾಗಿಯೇ ಲಭಿಸಿದೆ. ಜುಲೈ 9ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!