spot_img
Wednesday, January 22, 2025
spot_img

ರಸ್ತೆ ಸುರಕ್ಷತೆ, ಸಂಚಾರ ನಿಯಮಗಳನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ಪೊಲೀಸರ ಒತ್ತಾಯ

ಜನಪ್ರತಿನಿಧಿ (ಬೆಂಗಳೂರು) : ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹಾಗೂ ಹೀರೋ ಮೋಟೋಕಾರ್ಪ್ ಬೆಂಗಳೂರು ನಗರದಲ್ಲಿ ಆಯೋಜಿಸಿದ್ದ ರೈಡ್ ಸೇಫ್ ಇಂಡಿಯಾ ಅಭಿಯಾನದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಪಾಠಗಳನ್ನು ಅಳವಡಿಸುವಂತೆ ಬೆಂಗಳೂರು ಪೊಲೀಸರು ಶಿಕ್ಷಣ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.

ಪೊಲೀಸರು, ತಜ್ಞರ ಜೊತೆಗೂಡಿ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದು, ಆ ಪಠ್ಯಕ್ರಮವನ್ನು ಶೈಕ್ಷಣಿಕ ಪುಸ್ತಕಗಳಲ್ಲಿ ಅಳವಡಿಸಬಹುದಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ರಸ್ತೆ ಸುರಕ್ಷತೆ, ಸಂಚಾರ ನಿಯಮಗಳು, ಪಾದಚಾರಿ ನಿಯಮಗಳು, ಹೆಲ್ಮೆಟ್‌ಗಳ ಪ್ರಾಮುಖ್ಯತೆ, ಸರಿಯಾದ ಶಿರಸ್ತ್ರಾಣ ಮತ್ತು ಸೀಟ್ ಬೆಲ್ಟ್‌ಗಳು, ಟ್ರಾಫಿಕ್ ಸಿಗ್ನಲ್‌ಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅತಿ ವೇಗದ ಚಾಲನೆಯಿಂದ ಉಂಟಾಗುವ ಅಪಾಯಗಳು ಸೇರಿದಂತೆ ವಿವಿಧ ಅಂಶಗಳನ್ನು ಪಾಠಗಳು ಒಳಗೊಂಡಿವೆ ಎಂದು ಹೇಳಿದರು.

ಇತ್ತೀಚೆಗಿನ ದಿನಗಳಲ್ಲಿ ಬೆಂಗಳೂರಿನ ನಗರದಲ್ಲಿ ಸಂಭವಿಸುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತಗಳ ಪ್ರಮಾಣವು ಸಂಚಾರ ನಿಯಮಗಳನ್ನು ಪಾಲಿಸಿದರೆ ಪ್ರತಿ ರಸ್ತೆ ಅಪಘಾತ ಮತ್ತು ಗಾಯಗಳನ್ನು ತಡೆಯಬಹುದು ಎಂದು ಸೂಚಿಸುತ್ತದೆ. ‘ಜವಾಬ್ದಾರಿಯುತ ಭವಿಷ್ಯದ ಪೀಳಿಗೆಯನ್ನು ನಿರ್ಮಿಸುವಲ್ಲಿ ಸಂಚಾರ ನಿಯಮಗಳ ಅನುಸರಣೆಯ ಮಹತ್ವದ ಕುರಿತು ಯುವಜನರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದರು.

ಬೆಂಗಳೂರು ಪೊಲೀಸರು ರಸ್ತೆ ಸುರಕ್ಷತೆಯ ಮೇಲೆ ಕೇಂದ್ರೀಕರಿಸಿದ ಸಮಗ್ರ ಪಠ್ಯಕ್ರಮವನ್ನು ಸಿದ್ಧಪಡಿಸುವ ಮೂಲಕ ಪೂರ್ವಭಾವಿ ಹೆಜ್ಜೆ ಇಟ್ಟಿದ್ದಾರೆ, ವಿದ್ಯಾರ್ಥಿಗಳು ಸಂಚಾರ ನಿಯಮಗಳು ಮತ್ತು ರಸ್ತೆಗಳಲ್ಲಿ ಸುರಕ್ಷಿತ ನಡವಳಿಕೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಸುರಕ್ಷಿತ ಸವಾರಿ ಅಭ್ಯಾಸವನ್ನು ಉತ್ತೇಜಿಸುವ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ರೈಡ್ ಸೇಫ್ ಇಂಡಿಯಾ ಅಭಿಯಾನವು ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರದ ಸಚಿವರುಗಳು ಸೇರಿದಂತೆ ಹಲವು ವರ್ಗಗಳಿಂದ ವ್ಯಾಪಕ ಬೆಂಬಲವನ್ನು ಪಡೆದಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!