Sunday, September 8, 2024

ಸುಳ್ಳು ಎಕ್ಸಿಟ್ ಪೋಲ್ ಬರುವ ಮೊದಲು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಮಾಡಿಕೊಂಡ ಶಂಕಿತ ವಿದೇಶಿ ಹೂಡಿಕೆದಾರರಿಗೂ ಬಿಜೆಪಿಗೂ ಏನು ಸಂಬಂಧ ? : ರಾಗಾ ಖಡಕ್‌ ಪ್ರಶ್ನೆ

ಜನಪ್ರತಿನಿಧಿ (ನವ ದೆಹಲಿ) : ಲೋಕಸಭಾ ಚುನಾವಣಾ ಫಲಿತಾಂಶದ ಸುಳ್ಳು ಎಕ್ಸಿಟ್ ಪೋಲ್ ಘೋಷಣೆಯ ಒಂದು ದಿನ ಮೊದಲು ಶೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿ, ಕೋಟಿಗಟ್ಟಲೆ ಲಾಭ ಮಾಡಿಕೊಂಡ ಶಂಕಿತ ವಿದೇಶಿ ಹೂಡಿಕೆದಾರರಿಗೂ ಹಾಗೂ ಬಿಜೆಪಿಗೂ ಏನು ಸಂಬಂಧ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಖಡಕ್‌ ಆಗಿ ಪ್ರಶ್ನಿಸಿದ್ದಾರೆ.

ಇಂದು (ಗುರುವಾರ) ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿದ ಮಾತನಾಡಿದ ರಾಗಾ, “ಇದೇ ಮೊದಲ ಬಾರಿಗೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ, ಗೃಹ ಸಚಿವ, ವಿತ್ತ ಸಚಿವೆ ಶೇರು ಮಾರುಕಟ್ಟೆಯ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಸುಮಾರು ನಾಲ್ಕು ಬಾರಿ ಶೇರು ಮಾರುಕಟ್ಟೆಯನ್ನು ಉಲ್ಲೇಖಿಸಿ, ಅದು ವೇಗವಾಗಿ ಬೆಳೆಯಲಿದೆ, ಹೂಡಿಕೆ ಮಾಡಿ ಎಂದು ಸಲಹೆ ನೀಡಿದ್ದರು” ಎಂದು ಹೇಳಿದ್ದಾರೆ.

https://x.com/RahulGandhi/status/1798697624461328742

ಜೂನ್ 4ಕ್ಕಿಂತ ಮೊದಲು ಶೇರು ಖರೀದಿಸಿ ಎಂದು ಮೇ 13 ರಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಮೇ 19ಕ್ಕೆ ಅಮಿತ್ ಶಾ ಶೇರು ಮಾರುಕಟ್ಟೆ ಜೂನ್ 4 ಕ್ಕೆ ದಾಖಲೆ ನಿರ್ಮಿಸಲಿದೆ ಎಂದಿದ್ದರು. ಜೂನ್ 1 ಕ್ಕೆ ಕೊನೆಯ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಮಾಧ್ಯಮಗಳಲ್ಲಿ ಸುಳ್ಳು ಎಕ್ಸಿಟ್ ಪೋಲ್ ಗಳು ಬರಲಾರಂಭಿಸಿದವು. ಬಿಜೆಪಿಯ ಅಧಿಕೃತ ಸಮೀಕ್ಷೆಗಳು 220 ಕ್ಷೇತ್ರಗಳನ್ನು ಅವರಿಗೆ(ಬಿಜೆಪಿ) ನೀಡಿದ್ದವು. ಈ ಮಾಹಿತಿ ಬಿಜೆಪಿ ನಾಯಕರ ಕೈಯಲ್ಲಿತ್ತು. ಆದರೂ ಸುಳ್ಳು ಸಮೀಕ್ಷೆಗಳು ಹೊರಬಂದವು. ಪರಿಣಾಮವಾಗಿ ಜೂನ್ 3ಕ್ಕೆ ಶೇರು ಮಾರುಕಟ್ಟೆಯ ವಹಿವಾಟು ಒಮ್ಮೇಲೆ ಗಗನಕ್ಕೇರಿತು” ಎಂದು ರಾಹುಲ್ ಗಾಂಧಿ ಅಂಕಿ ಅಂಶಗಳನ್ನು ವಿವರಿಸಿದ್ದಲ್ಲದೇ, ಬಿಜೆಪಿಗೂ ಹಾಗೂ ಶಂಕಿತ ವಿದೇಶಿ ಹೂಡಿಕೆದಾರರಿಗೂ ಇರುವ ಸಂಬಂದದ ಬಗ್ಗೆ  ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ನಡೆಸಬೇಕು ಎಂದು ರಾಗಾ ಒತ್ತಾಯಿಸಿದ್ದಾರೆ.

ಅಷ್ಟಲ್ಲದೆ, ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವ ಐದು ಕೋಟಿ ಕುಟುಂಬಗಳಿಗೆ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ನಿರ್ದಿಷ್ಟ ಹೂಡಿಕೆ ಸಲಹೆಯನ್ನು ನೀಡಿದ್ದಾರೆ ಯಾಕೆ?  ಎಂದು ಪ್ರಶ್ನಿಸಿದ್ದಲ್ಲದೇ, ಹೂಡಿಕೆ ಸಲಹೆ ನೀಡುವುದು ಪ್ರಧಾನಿ ಹಾಗೂ ಗೃಹ ಮಂತ್ರಿಗಳ ಕೆಲಸವೇ? ಆ ಸಂದರ್ಶನಗಳನ್ನು ಶೇರು ಮಾರುಕಟ್ಟೆಯಲ್ಲಿ ಸ್ಟಾಕ್ಗಳನ್ನು ತಿರುಚಿದ್ದಕ್ಕಾಗಿ SEBI ತನಿಖೆಗೆ ಒಳಪಟ್ಟಿರುವ ಉದ್ಯಮಿಯ ಒಡೆತನದ ಮಾಧ್ಯಮಕ್ಕೆ ನೀಡಲಾಗಿತ್ತು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಮನ ಸೆಳೆದಿದ್ದಾರೆ.

https://x.com/ANI/status/1798689728310706398

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!