spot_img
Saturday, February 14, 2026
spot_img

ವಾದಿರಾಜ ಯತಿಗಳು ತಪೋಗೈದ ಪುಣ್ಯಭೂಮಿ ಹೂವಿನಕೆರೆಯಲ್ಲಿ ಮಿಯಾವಾಕಿ ವನ ನಿರ್ಮಾಣಕ್ಕೆ ಚಾಲನೆ

ಜನಪ್ರತಿನಿಧಿ (ವಕ್ವಾಡಿ) : ವಾದಿರಾಜ ಯತಿಗಳು ತಪೋಗೈದ ಪುಣ್ಯಭೂಮಿ ಹೂವಿನಕೆರೆಯಲ್ಲಿ ಸುತ್ತಮುತ್ತ ಮಿಯಾವಾಕಿ ವನ ನಿರ್ಮಾಣಕ್ಕೆ ನಾಂದಿ ಹಾಡಲಾಯಿತು.

ಉಡುಪಿ ಸೋದೆ ಮಠದ ಯತಿ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಗಿಡ ನೆಡುವುದರ ಮೂಲಕ ಮಿಯಾವಾಕಿ ವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಪರಿಸರ ಸ್ವಚ್ಛವಾಗಿರಬೇಕು ನಾವೆಲ್ಲರೂ ಪರಿಶುದ್ಧ ಗಾಳಿ ಸೇವಿಸಬೇಕು ಎಂದರೇ, ಪರಿಸರ ಸಮೃದ್ಧವಾಗಿರಬೇಕು. ಮನುಷ್ಯ ತಾನೊಬ್ಬ ಸ್ವಾರ್ಥಿಯಾಗಿರಬಾರದು, ಪ್ರಾಣಿ ಪಕ್ಷಗಳಿಗೂ ಯಥೇಚ್ಛವಾಗಿ ಆಹರ ಸಿಗುವಂತೆ ಮಾಡಬೇಕಾದದ್ದು ಮನುಷ್ಯನ ಕರ್ತವ್ಯ ಎಂದರು.

ವಾಸುದೇವ ಕಾಮತ್‌ ಹಾಗೂ ಮಹೇಶ್‌ ಶೆಣೈ ಅವರ ಸಹಕಾರದಲ್ಲಿ ಹೂವಿನಕೆರೆಯಲ್ಲಿ ಈ ವನ ನಿರ್ಮಾಣಕ್ಕೆ ಒಳ್ಳೆಯ ಸಂಕಲ್ಪಕ್ಕೆ ಮುಂದಾಗಿದ್ದೇವೆ ಎಂದು ಅವರು ಹೇಳಿದರು.

ಇನ್ನು, ಇದೇ ಸಂದರ್ಭದಲ್ಲಿ ಮಾತನಾಡಿದ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿ, ಪರಿಸರ ಕಾಳಜಿಯುಳ್ಳ ಮಿತ್ರರೊಂದಿಗೆ ಜೊತೆಗೂಡಿ ಮಿಯಾವಾಕಿ ವನ ನಿರ್ಮಾಣಕ್ಕೆ ಮುಂದಾಗಿರುವ ಸೋದೆ ಶ್ರೀಗಳ ಕಾರ್ಯ ಸ್ತುತ್ಯಾರ್ಹ. ಕಾಡು ಬೆಳೆಸುವ ಕಾರ್ಯ ಯಶಸ್ಸಾಗಲಿ ಎಂದು ಹಾರೈಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!