spot_img
Wednesday, January 22, 2025
spot_img

ಎಂ.ಜಿ.ಎಂ. : ವಾರ್ಷಿಕೇೂತ್ಸವ ಸಂಸ್ಥಾಪಕ ದಿನಾಚರಣೆ

ಜನಪ್ರತಿನಿಧಿ (ಉಡುಪಿ) : ಶಿಕ್ಷಣ ಅಂದರೆ ಬರೇ ಅಂಕಗಳಿಗೆ ಮಾತ್ರವಲ್ಲ ಇದರ ಜೊತೆಗೆ ಸ್ಪಧಾ೯ತ್ಮಕ ಜಗತ್ತನ್ನು ಎದುರಿಸುವ ಇಚ್ಛಾ ಶಕ್ತಿ, ಕೌಶಲಾಶಕ್ತಿ, ಜ್ಞಾನ ಶಕ್ತಿ ವಿದ್ಯಾರ್ಥಿಗಳಲ್ಲಿ ಮೂಡಿಸುವುದೆ ನಿಜವಾದ ಶಿಕ್ಷಣ. ಇಂತಹ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಪೂರಕವಾದ ಶಿಕ್ಷಣ ನೀಡುವಲ್ಲಿ ಉಡುಪಿ  ಎಂಜಿಎಂ. ಕಾಲೇಜು ಮುಂಚೂಣಿಯಲ್ಲಿನಿಂತಿದೆ ಎಂದು ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಪ್ರಕಾಶ್ಚಂದ್ರ ಶೆಟ್ಟಿ ಅಭಿಪ್ರಾಯಿಸಿದರು.

ಉಡುಪಿ ಎಂಜಿಎಂ.ಕಾಲೇಜಿನ ಎಪ್ಪತ್ತೈದರ ವಾರ್ಷಿಕ ಸಮಾರಂಭ ಮತ್ತು ಸಂಸ್ಥಾಪಕರ ದಿನಾಚರಣಾ ಸಮಾರಂಭದಲ್ಲಿ  ಮುಖ್ಯ  ಅತಿಥಿಗಳಾಗಿ ಮಾತನಾಡಿ ತನ್ನ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು. “ಇಂಗ್ಲಿಷ್ ಕನ್ನಡ  ಮಾಧ್ಯಮ ಎನ್ನುವ ಭಾಷಾ ಕೀಳರಿಮೆ ಬೇಡ ಎರಡು ಭಾಷೆಗಳಲ್ಲಿ  ಸುಲಲಿತವಾಗಿ ಮಾತನಾಡಬಲ್ಲ  ಸಾಮಥ್ಯ೯ ಇಂದಿನ ನಮ್ಮ  ವಿದ್ಯಾರ್ಥಿಗಳಲ್ಲಿ ಇದೆ” ಎಂದು ಪ್ರಕಾಶ್ಚಂದ್ರ ಶೆಟ್ಟಿ ಅಭಿಪ್ರಾಯಿಸಿದರು.

ಸಭಾಧ್ಯಕ್ಷತೆಯನ್ನು ಅಕಾಡೆಮಿ ಆಫ್  ಜನರಲ್ ಎಜುಕೇಶನ್ ಮಣಿಪಾಲ್ ಇದರ ಅಧ್ಯಕ್ಷರಾದ ಡಾ. ಎಚ್. ಎಸ್.ಬಲ್ಲಾಳ್ ವಹಿಸಿ ಕಾಲೇಜಿನ ಸಂಸ್ಥಾಪಕರಾದ ದಿ. ಡಾ. ಟಿ.ಎಂ.ಪೈ ಅವರ ದೂರದಶಿ೯ತ್ವ ಮತ್ತು ಪರಿಶ್ರಮದ ಫಲವಾಗಿ ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಪರಿಸರದಲ್ಲಿ ಪ್ರಪ್ರಥಮವಾಗಿ ಸ್ಥಾಪನೆಯಾಗಲು ಸಾಧ್ಯವಾಯಿತು. ದಿ. ಡಾ.ಟಿ.ಎಂ.ಎ.ಪೈ ಅವರ ಬದುಕು ಸಾಧನೆ ಚಿಂತನೆ ನಮಗೆಲ್ಲರಿಗೂ ಆದರ್ಶಪ್ರಾಯವೆಂದು ನೆನಪಿಸಿಕೊಂಡರು.

ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷೀನಾರಾಯಣ ಕಾರಂತ ವಾರ್ಷಿಕ ವರದಿ ವಾಚಿಸಿದರು.

ಅತಿಥಿಗಳಾಗಿ ಪದವಿ ಪೂರ್ವ ವಿಭಾದ ಪ್ರಾಂಶುಪಾಲೆ ಮಾಲತಿದೇವಿ, ಕಾಲೇಜಿನ  ಟಿ. ಮೇೂಹನದಾಸ ಪೈ ಸ್ಮಾರಕ ಕೌಶಲ್ಯಾಭಿವೃದ್ದಿ ಕೇಂದ್ರದ ನಿದೇ೯ಶಕ ಟಿ. ರಂಗ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ  ಅಧ್ಯಕ್ಷ ತ್ರಿಪತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅರುಣ ಕುಮಾರ್ ಬಿ. ಸ್ವಾಗತಿಸಿದರು. ಕಾಮರ್ಸ್ ವಿಭಾಗದ ಹಿರಿಯ ಪ್ರಾಧ್ಯಾಪಕಿ ಪ್ರೊ.‌ ಮಮತ, ಡಾ. ಟಿ.ಎಂ.ಎ.ಪೈ ಸಂಸ್ಮರಣಾ ಉಪನ್ಯಾಸ ನೀಡಿದರು. ಈ ಶೈಕ್ಷಣಿಕ ವಷ೯ದಲ್ಲಿ ವಿ.ವಿ.ಮಟ್ಟದಲ್ಲಿ ರ್ಯಾಂಕ್ ವಿಜೇತರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಂ. ವಿಶ್ವನಾಥ ಪೈ ವಂದನಾರ್ಪಣೆ ಗೈದರು. ವಿದ್ಯಾರ್ಥಿನಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!