Tuesday, October 8, 2024

ಡಾ| ಜಿಶಂಕರ್ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ: 127 ವಿದ್ಯಾರ್ಥಿನಿಯರು ಆಯ್ಕೆ

ಉಡುಪಿ: ಡಾ| ಜಿಶಂಕರ್ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶ, ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಮತ್ತು ಅವಸಾರ್ ಎಚ್.ಆರ್ ಸರ್ವೀಸಸ್ ಬೆಂಗಳೂರು ಇವರ ವತಿಯಿಂದ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ನಡೆಸಲಾಯಿತು.

೧೯೫ ವಿದ್ಯಾರ್ಥಿನಿಯರು ಉದ್ಯೋಗ ಮೇಳಕ್ಕೆ ನೋಂದಾಯಿಸಿದ್ದು, ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮಾಡಿ ಕೊನೆಯಲ್ಲಿ ೧೨೭ವಿದ್ಯಾರ್ಥಿನಿಯರಿಗೆ ಆಯ್ಕೆ ಮಾಡಿ ಆಫರ್ ಲೆಟರನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಭಾಸ್ಕರ ಶೆಟ್ಟಿ ಎಸ್ ವಹಿಸಿ, ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಸುಧಾಪಿಳೈ ಇವರು ಉದ್ಘಾಟಿಸಿದರು.

ಮಾನವ ಸಂಪನ್ಮೂಲ ವಿಭಾಗದ ಚಂದುವಿ. ಆಯ್ಕೆ ಪಕ್ರಿಯೆ ನಡೆಸಿದರು. ಐಕ್ಯೂ‌ಎಸಿ ಸಹಸಂಚಾಲಕರಾದ ಜ್ಯೋತಿ ಎಲ್ ಆರ್ಜನ್ನೆ ಉಪಸ್ಥಿತರಿದ್ದರು.

ಪ್ಲೇಸ್ಮೆಂಟ್ ಸಂಚಾಲಕರಾದ ಡಾ.ಉಮೇಶ್ ಮಯ್ಯ ಪ್ರಾಸ್ತಾವಿಕ ನುಡಿಯನ್ನು ನೀಡಿದರು. ಅಂತಿಮ ಬಿ.ಬಿ.ಎ ವಿದ್ಯಾರ್ಥಿನಿಯರಾದ ಫರೀನಾ ನಿರೂಪಿಸಿ, ಕು. ಮಾನಸ ಸ್ವಾಗತಿಸಿ, ರುದ್ವಿನಾ ತನುಜಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!