Wednesday, September 11, 2024

ಜಿಲ್ಲೆಯ ಸಮಸ್ಯೆಗಳಿಗೆ ಜಿಲ್ಲೆಯ ಶಾಸಕರುಗಳೇ ಕಾರಣ-ವಿಕಾಸ್ ಹೆಗ್ಡೆ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಾಗ ಜಿಲ್ಲೆಯ ಬಿಜೆಪಿ ಶಾಸಕರುಗಳು ರಾಜ್ಯ ಸರ್ಕಾರವನ್ನು ಟೀಕಿಸುವುದು ಹಾಸ್ಯಸ್ಪದ. ಸರ್ಕಾರ ಎಂದರೆ ಕೇವಲ ಆಡಳಿತ ಪಕ್ಷ ಮಾತ್ರವಲ್ಲ್ಲ, ವಿರೋಧ ಪಕ್ಷಕ್ಕೆ ಕೂಡ ಜವಾಬ್ದಾರಿಯಿದೆ ಹಾಗೂ ಯಾವುದೇ ಪಕ್ಷದ ಶಾಸಕರು ಇರಲಿ ಅವರು ಸರ್ಕಾರದ ಒಂದು ಭಾಗ. ಜಿಲ್ಲೆಯ ಬಿಜೆಪಿ ಶಾಸಕರುಗಳಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಇವರುಗಳು ಬಿಜೆಪಿಗೆ ಮತ ಹಾಕಿದವರಿಗೆ ಮಾತ್ರ ಶಾಸಕರುಗಳಲ್ಲ್ಲ, ಇವರಿಗೆ ಮತ ಹಾಕದವರಿಗೆ ಕೂಡ ಇವರುಗಳು ಶಾಸಕರು ಎನ್ನುವುದು ಇವರುಗಳು ತಿಳಿದುಕೊಳ್ಳುವುದು ಉತ್ತಮ. ಮತದಾರರು ವಿಧಾನಸಭೆಯಲ್ಲಿ ತಮ್ಮ ಧ್ವನಿಯಾಗಲಿ ಎಂದು ಇವರನ್ನು ಆಯ್ಕೆ ಮಾಡಿದ್ದು, ಆದರೆ ಜಿಲ್ಲೆಯ ಬಿಜೆಪಿ ಶಾಸಕರುಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಬಿಟ್ಟು ಜಿಲ್ಲೆಯ ಎಲ್ಲಾ ಆಗುಹೋಗುಗಳಲ್ಲಿ ರಾಜಕಾರಣ ಮಾಡುವುದು ಮಾತ್ರ ತಮ್ಮ ಕೆಲಸ ಎಂದು ತಿಳಿದಿದ್ದಾರೆ. ಇನ್ನಾದರೂ ಜಿಲ್ಲೆಯ ಬಿಜೆಪಿ ಶಾಸಕರುಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!