spot_img
Wednesday, January 22, 2025
spot_img

ಸಂಸ್ಕೃತಿ ರಕ್ಷಣೆಗೆ ಸಂಘಟನೆ ಅಗತ್ಯ-ಉಪ್ಪುಂದ ಚಂದ್ರಶೇಖರ ಹೊಳ್ಳ

100ನೇ ವಿಪ್ರವಾಣಿ ಸಂಚಿಕೆ ಬಿಡುಗಡೆ
ಕುಂದಾಪುರ: ವೇದಗಳ ಅನುಷ್ಠಾನ ಮತ್ತು ಸನಾತನ ಸಂಸ್ಕೃತಿಯ ಅನುಸಾರವಾಗಿ ಬದುಕುವುದು ಬ್ರಾಹ್ಮಣರ ಕರ್ತವ್ಯವಾಗಿದೆ. ನಮ್ಮ ಯುವಕರು ಸಂಸ್ಕೃತಿಯ ಆಚಾರ ವಿಚಾರಗಳನ್ನು ಅರಿತುಕೊಂಡು ಪಾಲಿಸಬೇಕು. ಇಲ್ಲವಾದರೆ ಮುಂದಿನ ಜನಾಂಗವು ಪಶ್ಚಾತಾಪ ಪಡಬೇಕಾಗುತ್ತದೆ. ಯಾವುದೇ ಉದ್ಯೋಗ ವ್ಯವಹಾರ ಇರಲಿ ನಮ್ಮತನವನ್ನು ಬಿಡದೆ ಶ್ರದ್ಧೆಯಿಂದ ಬ್ರಾಹ್ಮಣರು ಕರ್ತವ್ಯ ನಿರತರಾಗಬೇಕೆಂದು ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಉಪ್ಪುಂದ ಚಂದ್ರಶೇಖರ ಹೊಳ್ಳ ಕರೆ ನೀಡಿದರು.

ಅವರು ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಆಯೋಜಿಸಿದ್ದ 100 ನೇ ವಿಪ್ರವಾಣಿ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಅನಾವರಣಗೊಳಿಸಿ ಮಾತನಾಡಿದರು.

ಕಿರಿಮಂಜೇಶ್ವರದ ಉದ್ಯಮಿ ಉಮೇಶ್ ಶಾನುಭಾಗ್ ಶುಭ ಹಾರೈಸಿದರು. ಶುಭಚಂದ್ರ ಹತ್ವಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂಘಟನೆಯ ಮಹತ್ವವನ್ನು ವಿವರಿಸಿದರು ಮತ್ತು ಬ್ರಾಹ್ಮಣರು ಸಂಘಟನೆಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ವಿಪ್ರವಾಣಿ ಸಂಪಾದಕ ಶಂಕರರಾವ್ ಕಾಳಾವರ ಪ್ರಾಸ್ತಾವಿಕ ಮಾತುಗಳೊಂದಿಗೆ ಬ್ರಾಹ್ಮಣ ಸಂಘಟನೆ ನಡೆದು ಬಂದ ದಾರಿಯನ್ನು ವಿವರಿಸಿದರು. ವಿಪ್ರವಾಣಿ ವಿಶೇಷ ಸಂಚಿಕೆಯ ವೈಶಿಷ್ಟ್ಯಗಳನ್ನು ತಿಳಿಸಿದರು. ವೇದಿಕೆಗೆ ವಿಶೇಷ ರೀತಿಯಲ್ಲಿ ವಿಪ್ರವಾಣಿಯನ್ನು ತರಲಾಯಿತು. ಕರ್ನಾಟಕ ರಾಜ್ಯ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ ಶುಭ ಕೋರಿದರು. ತಾಲೂಕು ಗೌರವಾಧ್ಯಕ್ಷ ಅನಂತ ಪದ್ಮನಾಭ ಬಾಯಿರಿ, ಕೋಶಾಧಿಕಾರಿ ರಘುರಾಮ ರಾವ್, ಮಹಿಳಾ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಉಡುಪ, ಕೋಟೇಶ್ವರ ವಲಯ್ಯಾಧ್ಯಕ್ಷ ವಾದಿರಾಜ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಪ್ರವಾಣಿಯ ಪೂರ್ವ ಸಂಪಾದಕರು, ಸಹಸಂಪಾದಕರು, ಎಲ್ಲ ವಲಯಗಳ ಅಧ್ಯಕ್ಷರು ಮತ್ತು ಪ್ರಾಯೋಜಕರನ್ನು ಗೌರವಿಸಲಾಯಿತು. ಆದರ್ಶ ದಂಪತಿಗಳು 2024 ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಬಸ್ರೂರು ವಲಯದ ಭಾಸ್ಕರ ಉಡುಪ ಮತ್ತು ನಿರ್ಮಲಾ ಉಡುಪ ದ್ವಿತೀಯ ಸ್ಥಾನವನ್ನೂ ಕೊಲ್ಲೂರು ವಲಯದ ರಾಘವೇಂದ್ರ ಐತಾಳ್ ಮತ್ತು ಲಕ್ಷ್ಮೀ ಐತಾಳ್ ಪಡೆದರು.

ಕಾರ್ಯಕ್ರಮದ ಮೊದಲು ಶಂಕರ ಜಯಂತಿ ಪ್ರಯುಕ್ತ ಆದಿ ಗುರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಮಹಿಳಾ ಘಟಕದ ವತಿಯಿಂದ ಆದರ್ಶ ದಂಪತಿ ಸ್ಪರ್ಧೆ ನೆರವೇರಿತು. ಪರಿಷತ್ತಿನ ಮಹಿಳಾ ವೇದಿಕೆಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಭರತನಾಟ್ಯ ಪ್ರದರ್ಶನ ಜರುಗಿತು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ರತ್ನಾಕರ ಉಡುಪ ನಾಗೂರು ಅತಿಥಿಗಳನ್ನು ಸ್ವಾಗತಿಸಿದರು. ಯುವ ವೇದಿಕೆಯ ಅಧ್ಯಕ್ಷ ಅವನೀಶ ಹೊಳ್ಳ ವೇದಘೋಷ ಗೈದರು. ಕುಮಾರಿ ಪಾವನಿ ಮತ್ತು ಅಶ್ವಿನಿ ಪ್ರಾರ್ಥಿಸಿದರು ಸಂಘಟನಾ ಕಾರ್ಯದರ್ಶಿ ಸತೀಶ ಅಡಿಗ ವಂದಿಸಿದರು. ಡಾ. ವೆಂಕಟರಾಮ್ ಭಟ್ ನೆಂಪು ಕಾರ್ಯಕ್ರಮ ನಿರ್ವಹಿಸಿದರು

 

 

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!