Friday, November 8, 2024

ಬಿ. ಬಿ. ಹೆಗ್ಡೆ ಕಾಲೇಜು: ಅಖಿಲ ಭಾರತ ಸಾಫ್ಟ್ ಬಾಲ್ ಪಂದ್ಯಾಟ: ಮಂಗಳೂರು ವಿ.ವಿ. ತಂಡ ಪ್ರಕಟ

ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 05 ರಿಂದ 10ರ ತನಕ ನಡೆದ ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜುಗಳ ಕ್ರೀಡಾಪಟುಗಾಗಿ ಆಯೋಜಿಸಿದ ಸಾಫ್ಟ್ಬಾಲ್ ಆಯ್ಕೆ ಶಿಬಿರದಲ್ಲಿ ೧೪ ಕ್ರೀಡಾಪಟುಗಳು ಆಯ್ಕೆಯಾಗಿ ಮಂಗಳೂರು ವಿ.ವಿ. ತಂಡವನ್ನು ಪ್ರತಿನಿಧಿಸಲಿದ್ದಾರೆ.

ಮೂಡುಬಿದಿರೆಯ ಮಹಾವೀರ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಕ್ಷಿತ್ ರೈ ಈ ಸಾಫ್ಟ್ಬಾಲ್ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಲ್ಲಿದ್ದು, ಬೆಂಗಳೂರು ವಿ.ವಿ. ಆಶ್ರಯದಲ್ಲಿ ಸೌಂದರ್ಯ ಕಾಲೇಜಿನಲ್ಲಿ ಮೇ ೧೩ ರಿಂದ ೧೭ರ ತನಕ ಅಖಿಲ ಭಾರತ ಮಟ್ಟದ ಸಾಫ್ಟ್ಬಾಲ್ ಪಂದ್ಯಾಟ ನಡೆಯಲಿದೆ.

ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಾರಾಯಣ ನಾಯಕ್, ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಮಂಗಳೂರು ವಿ.ವಿ. ತಂಡದ ತರಬೇತುದಾರ ಸಂದೀಪ್ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಂಜಿತ್ ಟಿ.ಎನ್. ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!