spot_img
Friday, January 17, 2025
spot_img

ಪರಶುರಾಮ ಥೀಂ ಪಾರ್ಕ್‌ ವಿವಾದ | ಸಿಐಡಿ ತನಿಖೆಯಿಂದ ಶಾಸಕರ ನಿಜ ಬಣ್ಣ ಬಯಲು : ಮುನಿಯಾಲು | ಜನಾಗ್ರಹ ಸಭೆಗೆ ಅನುಮತಿಯಿಲ್ಲ : ಜಿಲ್ಲಾಧಿಕಾರಿ

ಜನಪ್ರತಿನಿಧಿ (ಕಾರ್ಕಳ) : ಪರಶುರಾಮ ಮೂರ್ತಿಯ ಬಗೆಗಿನ ವಿವಾದದಿಂದಾಗಿ ರಾಜ್ಯ ಸರ್ಕಾರ ಸಿಓಡಿ ತನಿಖೆಗೆ ಆದೇಶಿಸಿತ್ತು. ತನಿಖೆಯ ಸಂದರ್ಭದಲ್ಲಿ ಮೂರ್ತಿಯನ್ನು ತೆರವುಗೊಳಿಸುವ ಮೂಲಕ ಉಳಿದ ಸಾಕ್ಷಿಯನ್ನು ಕೂಡ ನಾಶಪಡಿಸುವ ಹುನ್ನಾರವನ್ನು ಶಾಸಕ ಸುನೀಲ್ ಕುಮಾರ್‌ ನಿರ್ದೇಶನದಲ್ಲಿ ಮಾಡಲಾಗಿದೆ. ನಿರ್ಮಿತಿ ಕೇಂದ್ರದ ಮೂಲಕ ನ್ಯಾಯಾಲಯದ ನಿರ್ದೇಶನ ಇದೆ ಎಂಬ ಸುಳ್ಳು ಮಾಹಿತಿ ನೀಡಿ ಮೂರ್ತಿಯ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಕಂಚಿನ ಮೂರ್ತಿಗೆ ಗೋಲ್ಡನ್‌ ಕಲರ್‌ ಪೈಂಟ್‌ ಹಾಕಿ ಇದು ಕಂಚಿನ ಪ್ರತಿಮೆ ಎಂದು ಹೇಳಿದ್ದು ಎಲ್ಲಿಯಾದರೂ ಇದೆಯಾ ? ಧಾರ್ಮಿಕ ಭಾವನೆಯನ್ನು ಚುನಾವಣೆಗೆ ಬಳಸಿಕೊಂಡು ಶಾಸಕರು ಇಲ್ಲಿನ ಜನರಿಗೆ ಮೋಸ ಮಾಡಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಆಕ್ರೋಶ ಹೊರ ಹಾಕಿದ್ದಾರೆ.

ಜನಪ್ರತಿನಿಧಿ ಪತ್ರಿಕೆಯೊಂದಿಗೆ ಮಾತನಾಡಿದ ಉದಯ್‌ ಕುಮಾರ್‌ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಸರಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರು ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರೂ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ಅನುಮತಿ ನೀಡಿದ್ದು ಮಾತ್ರವಲ್ಲದೆ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಟ್ಟಿದ್ದರು. ಮೂರ್ತಿ ನಕಲಿ ಎಂಬ ವಿಚಾರ ತಿಳಿದ ಮೇಲೂ ನಿರ್ಮಾಣ ಕಾರ್ಯವನ್ನು ಮತ್ತೆ ನಿರ್ಮಿತಿ ಕೆಂದ್ರದದಿಂದ ಕ್ರಿಶ್‌ ಆರ್ಟ್‌ ಅವರಿಗೆ ಕೊಡುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದ್ದಲ್ಲದೇ, ಶಾಸಕರು ಸೇರಿ, ನಿರ್ಮಿತಿ ಕೆಂದ್ರದ ಅಧಿಕಾರಿಗೆ ಹಾಗೂ ಈ ಭ್ರಷ್ಟಾಚಾರದಲ್ಲಿ ಯಾರೆಲ್ಲಾ ಪಾಲುದಾರರಾಗಿದ್ದಾರೋ ಅವರಿಗೆ ಶೀಘ್ರವಾಗಿ ಶಿಕ್ಷೆ ನೀಡುವುದೇ ನಮ್ಮ ಸರ್ಕಾರದ ಉದ್ದೇಶ ಎಂದು ಹೇಳಿದರು.

ಮೂರ್ತಿ ನಿರ್ಮಾಣಕ್ಕೆ ರಾಜ್ಯದಲ್ಲಿ ನುರಿತ ಶಿಲ್ಪಿಗಳಿದ್ದಾರೆ. ಜಿಲ್ಲಾಧಿಕಾರಿಗಳು ಟೆಂಡರ್ ಕರೆದು ಸೂಕ್ತ ಶಿಲ್ಪಿಗಳಿಗೆ ಕೆಲಸ ವಹಿಸಿಕೊಡಲಿ. ಕೃಶ್‌ ಆರ್ಟ್‌ನವರು ನಕಲಿ ಮೂರ್ತಿ ಮಾಡಿದ್ದಾರೆಂದು ತಿಳಿದ ಮೇಲೂ ಅವರಿಗೆ ಮತ್ತೆ ಮೂರ್ತಿಯ ಕೆಲಸ ನೀಡುವ ಉದ್ದೇಶವೇನು ? ಎಂದು ಪ್ರಶ್ನಿಸಿದ್ದಾರೆ. ನಮ್ಮ ಸರ್ಕಾರ ಧಾರ್ಮಿಕ ವಿಚಾರವನ್ನು ಚುನಾವಣೆಗೆ ಬಳಸಿಕೊಂಡ ಉದಾಹರಣೆಯೇ ಇಲ್ಲ. ಸಿಐಡಿ ತನಿಖೆ ಆರಂಭವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ತನಿಖೆಯಿಂದ ಶಾಸಕರು ಸೇರಿ ಈ ಅವ್ಯವಹಾರದಲ್ಲಿ ತೊಡಗಿಕೊಂಡ ಎಲ್ಲರ ನಿಜ ಬಣ್ಣ ಬಯಲಾಗುತ್ತದೆ ಎಂಬ ಪೂರ್ಣ ವಿಶ್ವಾಸವಿದೆ ಎಂದರು.

ಟೆಂಡರ್‌ ಬದಲಾಯಿಸಲು ಸಾಧ್ಯವಿಲ್ಲ | ಜನಾಗ್ರಹ ಸಭೆಗೆ ಅನುಮತಿಯಿಲ್ಲ : ಜಿಲ್ಲಾಧಿಕಾರಿ

ಪರಶುರಾಮ ಮೂರ್ತಿಯ ಕೆಲಸವನ್ನು ಬೇರೆಯವರಿಗೆ ಒಪ್ಪಿಸಬೇಕು ಎಂಬ ಕಾಂಗ್ರೆಸ್‌ನ ಆಗ್ರಹಕ್ಕೆ ಪ್ರತಿಕ್ರಿಯಿಸಿ ಜನಪ್ರತಿನಿಧಿ ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಪರಶುರಾಮ ಮೂರ್ತಿಯ ಟೆಂಟರ್‌ನನ್ನು ಈಗಾಗಲೇ ನಿರ್ಮಿತಿ ಕೇಂದ್ರದಿಂದ ಕೊಟ್ಟಾಗಿದೆ. ಮತ್ತೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅದು ಸರ್ಕಾರದ ಮಟ್ಟದಲ್ಲೇ ಆಗಬೇಕಿದೆ. ಅಂದು ಇಷ್ಟು ಕಡಿಮೆ ಮೊತ್ತಕ್ಕೆ ಕೃಶ್‌ ಆರ್ಟ್‌ ಅವರು ಟೆಂಡರ್‌ ಒಪ್ಪಿರುವ ಕಾರಣಕ್ಕೆ ಅವರಿಗೆ ಮೂರ್ತಿಯ ಕೆಲಸವನ್ನು ನೀಡಲಾಗಿದೆ. ಯಾರೂ ಇಷ್ಟು ಕಡಿಮೆ ಟೆಂಡರ್‌ಗೆ ಒಪ್ಪಿಲ್ಲದ ಕಾರಣ ಅವರಿಗೇ ನಿರ್ಮಿತಿ ಕೇಂದ್ರದಿಂದ ವರ್ಕ್‌ ಆರ್ಡರ್‌ ನೀಡಲಾಗಿದೆ. ಈಗ ಮತ್ತೆ ಬೇರೆಯವರಿಗೆ ವಹಿಸುವುದು ಅಷ್ಟು ಸುಲಭವಿಲ್ಲ. ಮತ್ತೆ ಹಣ ಹೆಚ್ಚು ಬೇಕಾಗುತ್ತದೆ. ಇಲಾಖೆಗಳಿಂದ ಹಣ ಬರಬೇಕಾಗುತ್ತದೆ. ಹಾಗಾಗಿ ಈ ಟೆಂಡರ್‌ ಮುಂದುವರಿಯುತ್ತದೆ. ಮೂರ್ತಿ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಬಿಜೆಪಿ ಪರಶುರಾಮ ಥೀಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಜನಾಗ್ರಹ ಸಭೆಗೆ ಜಿಲ್ಲಾಡಳಿತದಿಂದ ಹಾಗೂ ತಹಶೀಲ್ದಾರರು ಅನುಮತಿಸಿಲ್ಲ. ನೀತಿ ಸಂಹಿತೆ ಇರುವಾಗ ಜನಾಗ್ರಹ ಸಭೆಯನ್ನು ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಸಿಐಡಿ ತನಿಖೆ ಆರಂಭವಾಗಿದೆ. ತನಿಖೆಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!