Saturday, May 18, 2024

ಸಮುದಾಯ ಕುಂದಾಪುರ: ‘ರಂಗ ರಂಗು’ ರಜಾ ಮೇಳ ಸಮಾರೋಪ

ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಇವರು ಸುಮಾರು 17 ವರ್ಷಗಳಿಂದಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ದಾನಿಗಳ ಮತ್ತು ಪೋಷಕರ ಸಹಕಾರದೊಂದಿಗೆ ಪ್ರತಿ ವರ್ಷವೂ ಸರಕಾರಿ ಶಾಲೆಯ ಹಾಗೂ ವಲಸೆ ಕಾರ್ಮಿಕರ ಮಕ್ಕಳಿಗೆ ಹತ್ತು ದಿನಗಳ ಕಾಲ ಉಚಿತವಾಗಿ ರಂಗ ರಂಗು ಬೇಸಿಗೆ ರಜಾ ಮೇಳವನ್ನು ಹಮ್ಮಿಕೊಂಡು ಬರುತ್ತಿದ್ದು ೨೦೨೪ನೇ ಸಾಲಿನ ರಂಗ ರಂಗು ರಜಾ ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆಯ ಮಾತುಗಳನ್ನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ, ಸಿನಿಮಾ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅವರು, ಮಹಾತ್ಮಾ ಗಾಂಧಿ ಪಾರ್ಕಿನ ಈ ಸುಂದರ ಪರಿಸರದಲ್ಲಿ ೧೦ ದಿನಗಳ ಕಾಲ ಮಕ್ಕಳು ವೈವಿಧ್ಯಮಯವಾದ ಸೃಜನಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವುದಕ್ಕೇ ಈ ಸಂಭ್ರಮದ ವಾತಾವರಣವೇ ಸಾಕ್ಷಿಯಾಗಿದೆ. ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವಲ್ಲಿ ಸಮುದಾಯ ಸಂಘಟನೆ ಮಹತ್ವದ ಪಾತ್ರ ನಿರ್ವಹಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ನಮ್ಮೆಲ್ಲರ ಸಹಕಾರ ನಿಮ್ಮ ಜೊತೆಗಿದೆ ಎಂದರು.

ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಮ್ ದಿನೇಶ್ ಹೆಗ್ಡೆ ಮಾತನಾಡುತ್ತಾ ಕುಂದಾಪುರ ಸಮುದಾಯ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ರಾಜ್ಯದಾದ್ಯಂತ ಗುರುತಿಸಲ್ಪಟ್ಟಿದೆ. ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಅದರ ಒಂದು ಭಾಗವೇ ಪ್ರತಿ ವರ್ಷ ನಡೆಸುತ್ತಿರುವ ಉಚಿತ ರಂಗರಂಗು ಬೇಸಿಗೆ ರಜಾ ಮೇಳ ಎಂದರು.

ರಜಾ ಮೇಳವು ವೈವಿಧ್ಯಮಯವಾದ ವಿನ್ಯಾಸವನ್ನು ಹೊಂದಿದ್ದು ಮುಖ್ಯವಾಗಿ ರಂಗಭೂಮಿಯನ್ನು ಆಧರಿಸಿ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರ ನಿರ್ದೇಶಕರಾಗಿ ಕುಂದಾಪುರ ಸಮುದಾಯದ ಕಾರ್ಯದರ್ಶಿ ವಾಸುದೇವ ಗಂಗೇರ ಮತ್ತು ಚಿನ್ನ ಗಂಗೇರ ಅವರು ನಿರ್ವಹಿಸಿದ್ದಾರೆ.
ಮೇಳದ ಸಂಪನ್ಮೂಲ ವ್ಯಕ್ತಿಗಳಾಗಿ ರಂಗಾಟಗಳಿಗಾಗಿ ರೋಹಿತ್ ಬೈಕಾಡಿ, ಕ್ರಾಫ್ಟ್ ತರಬೇತಿಗಾಗಿ ಡಾ ಸದಾನಂದ ಬೈಂದೂರು ಹಾಗೂ ಅಶೋಕ ತೆಕ್ಕಟ್ಟೆ, ಜೇಡಿ ಮಣ್ಣಿನ ಆಕೃತಿಗಳಿಗಾಗಿ ಕೆ ಎಂ ಹೊಸೇರಿ ಜೊತೆಗಿದ್ದರು. ಮೇಳದ ದಿನಗಳಂದು ಅಂಬೇಡ್ಕರ್ ಜಯಂತಿ ಆಕಾಶ ವೀಕ್ಷಣೆ ಮತ್ತು ಮಕ್ಕಳ ಸಂತೆ ಕಾರ್ಯಕ್ರಮಗಳನ್ನು ನಿರ್ವಹಿಸಲಾಯಿತು.

ಅಂಬೇಡ್ಕರ್ ಜಯಂತಿಯಂದು ಡಾ ಎಂ ದಿನೇಶ್ ಹೆಗ್ಡೆ ಅವರು ಮಕ್ಕಳಿಗೆ ಅಂಬೇಡ್ಕರ್ ಅವರ ಬಾಲ್ಯದ ಜೀವನದ ಘಟನೆಗಳನ್ನು ಮನಮುಟ್ಟುವಂತೆ ವಿವರಿಸಿದರು. ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಟೆಲಿಸ್ಕೋಪ್ ಬಗ್ಗೆ ಮಾಹಿತಿ ಹಾಗೂ ಆಕಾಶ ವೀಕ್ಷಣೆಯನ್ನು ಮನೋಹರ ಮಣಿಪಾಲ ನಡೆಸಿಕೊಟ್ಟರು.ರಜಾ ಮೇಳದ ಮಕ್ಕಳೇ ಬರೆದ ಚುಟುಕು ಕತೆ ಕವನ ಸೃಜನಶೀಲ ಬರಹಗಳ ಸಂಚಿಕೆಯ ತಯಾರಿಯ ಜವಾಬ್ದಾರಿಯನ್ನು ತಿಮ್ಮಪ್ಪ ಗುಲ್ವಾಡಿ, ಗಣೇಶ ಶೆಟ್ಟಿ ಹಾಗೂ ಉದಯ ಶೆಟ್ಟಿಯವರು ನಿರ್ವಹಿಸಿದ್ದರು. ಮಕ್ಕಳ ಸಂತೆಯ ದಿನದಂದು ಅದನ್ನು ಬಿಡುಗಡೆ ಮಾಡಲಾಯಿತು. ಮಕ್ಕಳ ಸಂತೆಯ ದಿನದಂದು ಮಕ್ಕಳೇ ವ್ಯವಹಾರ ನಿರ್ವಹಿಸಿ ವಿವಿಧ ಬಗೆಯ ತರಕಾರಿ, ವಿವಿಧ ಬಗೆಯ ಹಣ್ಣು ಹಂಪಲು, ಬರಹ ಸಾಮಗ್ರಿ, ಮನೆಯಿಂದ ಮಾಡಿ ತಂದ ಸಿಹಿ ತಿಂಡಿ, ತಿನಿಸುಗಳು, ತರಕಾರಿಗಳು ಹಪ್ಪಳ, ಉಪ್ಪಿನಕಾಯಿ, ಮಾವಿನ ಕಾಯಿ, ಗರಚನ ಕಾಯಿ, ಪಪ್ಪಾಯಿ ಅಕ್ವೇರಿಯಂ ಮೀನುಗಳು ಕಾಸ್ಮೆಟಿಕ್ಸ್, ಗೋಲಿ ಸೋಡಾ, ಹೂವು ಮತ್ತು ಹಣ್ಣಿನ ಗಿಡಗಳು, ವಿವಿಧ ಬಗೆಯ ಜ್ಯೂಸ್ ಗಳು ಹೀಗೆ ಹತ್ತು ಹಲವು ಬಗೆಯ ವಸ್ತುಗಳನ್ನು ಮಕ್ಕಳೇ ವ್ಯಾಪಾರಸ್ಥರಾಗಿ ಪೋಷಕರೇ ಗ್ರಾಹಕರಾಗಿ ಮಕ್ಕಳ ಸಂತೆ ನಡೆಸಲಾಯಿತು

ರಜಾ ಮೇಳದ ದಿನಗಳಲ್ಲಿ ಹುಟ್ಟಿದ ಮಕ್ಕಳ ಹುಟ್ಟು ಹಬ್ಬಗಳನ್ನು ಮೇಳದ ಮಕ್ಕಳೊಂದಿಗೆ ಪೋಷಕರು, ಸಮುದಾಯದ ಸದಸ್ಯರು ಸಂಭ್ರಮದಿಂದ ಆಚರಿಸಿದರು.

ಇಡೀ ರಜಾ ಮೇಳದ ನಿರ್ವಹಣೆಯನ್ನು ಕುಂದಾಪುರ ಸಮುದಾಯದ ಕೋಶಾಧಿಕಾರಿ ಬಾಲಕೃಷ್ಣ ಕೆ ಎಂ ಮತ್ತು ವಿಕ್ರಂ ಅವರು ನಿರ್ವಹಿಸಿದ್ದರು. ಜೊತೆಯಲ್ಲಿ ಉತ್ಕಲಾ, ಚಂದ್ರಶೇಖರ್ ವಿ, ನರಸಿಂಹ ಎಚ್,ಪ್ರಭಾಕರ್ ನೆರಳಕಟ್ಟೆ, ರವಿ ವಿ ಎಂ, ರಾಜೇಶ ವಡೇರಹೋಬಳಿ, ಭಾಗ್ಯವತಿ, ಶ್ರಾವ್ಯ, ನಿರಂಜನ, ಭಾಗ್ಯ, ಮಾನಸ, ಸುಧಾಕರ ಕಾಂಚನ್, ಪೋಷಕರು ಹಾಗೂ ಮುಂತಾದವರು ಸಹಕರಿಸಿದರು.

ವೇದಿಕೆಯಲ್ಲಿ ಡಾ ಎಂ ದಿನೇಶ್ ಹೆಗ್ಡೆ, ಯಾಕೂಬ್ ಖಾದರ್ ಗುಲ್ವಾಡಿ ಪ್ರಭಾಕರ ನೇರಳೆ ಕಟ್ಟೆ ಕುಂದಾಪುರ ಸಮುದಾಯದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರು ಬಾಲಕೃಷ್ಣ ಕೆ ಎಂ ವಾಸುದೇವ ಗಂಗೇರ ಉಪಸ್ಥಿತರಿದ್ದರು.

ಶಿಬಿರ ನಿರ್ದೇಶಕರಾದ ವಾಸುದೇವ ಗಂಗೇರ ಅವರು ಮಕ್ಕಳೊಂದಿಗೆ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಹತ್ತು ದಿನಗಳ ತಮ್ಮ ರಜಾ ಮೇಳದ ಅನುಭವಗಳನ್ನು ವ್ಯಕ್ತಪಡಿಸಿದರು. ರಂಗ ರಂಗು ರಜಾ ಮೇಳದ ಹಿರಿಯ ವಿದ್ಯಾರ್ಥಿಗಳು ಮೇಳದುದ್ದಕ್ಕೂ ಸ್ವಯಂಸೇವಕರಾಗಿ ಸಹಕರಿಸಿದರು.

ಡಾ. ಸದಾನಂದ ಬೈಂದೂರು ಪ್ರಾಸ್ತಾವಿಕ ಸ್ವಾಗತಿಸಿದರು. ಗಣೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!