Friday, November 8, 2024

ಪತ್ನಿ ಜೊತೆ ಪತಿ ನಡೆಸುವ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ! : ಮಧ್ಯಪ್ರದೇಶ ಹೈಕೋರ್ಟ್‌ ತೀರ್ಪು

ಜನಪ್ರತಿನಿಧಿ (ಇಂಧೋರ್) : ತನ್ನ ಪತ್ನಿ ಜತೆ ಪತಿ ನಡೆಸುವ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರ ಎಂದೆನ್ನಿಸಿಕೊಳ್ಳುವುದಿಲ್ಲ ಎಂದು ಮಧ್ಯ ಪ್ರದೇಶ ಹೈಕೋರ್ಟ್  ತೀರ್ಪು ನೀಡಿದೆ. ವೈವಾಹಿಕ ಅತ್ಯಾಚಾರವನ್ನು ಭಾರತದ ಕಾನೂನು ಪರಿಗಣಿಸಿಲ್ಲ. ಅಂತಹ ಪ್ರಕರಣಗಳಲ್ಲಿ ಪತ್ನಿಯ ಸಮ್ಮತಿ ಅಮುಖ್ಯವಾಗುತ್ತದೆ ಎಂದು ಅದು ಕೋರ್ಟ್‌ ಹೇಳಿದೆ.

ತನ್ನೊಂದಿಗೆ ಅನೇಕ ಬಾರಿ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿ ತನ್ನ ಪತಿಯ ವಿರುದ್ಧ ಸ್ವತಃ ಪತ್ನಿಯೇ ನೀಡಿದ್ದ ದೂರಿನ ಆಧಾರದಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಹೆಂಡತಿಯೊಂದಿಗೆ ಪತಿ ನಡೆಸಿದ ಗುದ ಸಂಭೋಗವು ಸಮ್ಮತಿ ಇಲ್ಲದೆ ನಡೆದಿದ್ದರೂ, ಪತ್ನಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಲ್ಲದ ಕಾರಣ ಅದು ಅತ್ಯಾಚಾರಕ್ಕೆ ಸಮನಾಗುವುದಿಲ್ಲ ಎಂದು ನ್ಯಾಯಮೂರ್ತಿ ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ಕೊಟ್ಟಿದೆ.

“ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ‘ಅತ್ಯಾಚಾರ’ದ ವ್ಯಾಖ್ಯಾನವನ್ನು ತಿದ್ದುಪಡಿ ಮಾಡಿದಾಗ, ಅತ್ಯಾಚಾರದ ವ್ಯಾಖ್ಯಾನದಲ್ಲಿ ಮಹಿಳೆಯ ಗುದಕ್ಕೆ ಶಿಶ್ನ ತೂರಿಸುವ ಅಂಶವನ್ನು ಕೂಡ ಸೇರ್ಪಡೆ ಮಾಡಲಾಗಿದೆ. 15 ವರ್ಷದ ಒಳಗಿನ ತನ್ನ ಪತ್ನಿ ಜತೆಗೆ ಗಂಡ ನಡೆಸುವ ಯಾವುದೇ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಈ ಸಂದರ್ಭಗಳಲ್ಲಿ ಅಸ್ವಾಭಾವಿಕ ಕ್ರಿಯೆಗೆ ಪತ್ನಿಯ ಸಮ್ಮತಿ ಬೇಕು ಎನ್ನುವುದು ಗೌಣವಾಗುತ್ತದೆ. ವೈವಾಹಿಕ ಅತ್ಯಾಚಾರವನ್ನು ಈವರೆಗೂ ಪರಿಗಣಿಸಲಾಗಿಲ್ಲ” ಎಂದು ಹೈಕೋರ್ಟ್ ಹೇಳಿದೆ.

ಪತಿ ನಡೆಸಿದ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಕಾನೂನಾತ್ಮಕವಾಗಿ ವಿವಾಹವಾದ ಪತ್ನಿಯೊಂದಿಗೆ ನಡೆದಿರುವುದರಿಂದ ಇದು ಐಪಿಸಿ ಸೆಕ್ಷನ್ 377ರ ಅಡಿ ಅಪರಾಧವಾಗುವುದಿಲ್ಲ. ಹೀಗಾಗಿ ಕ್ಷುಲ್ಲಕ ಆರೋಪದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆಯೇ ಎಂಬ ಚರ್ಚೆ ಅಗತ್ಯ ಬೀಳುವುದಿಲ್ಲ ಎಂದಿದೆ.

ಆದರೆ ಹೆಂಡತಿಯು ನ್ಯಾಯಾಂಗ ವಿಚ್ಚೇದನ ಅಥವಾ ಇತರೆ ಕಾರಣಗಳಿಂದ ಗಂಡನಿಂದ ಬೇರೆಯಾಗಿ ವಾಸವಿದ್ದಾಗ ಆತ ಪತ್ನಿ ಜತೆ ನಡೆಸುವ ಲೈಂಗಿಕ ಕ್ರಿಯೆಯನ್ನು ಸೆಕ್ಷನ್ 376ಬಿ ಅಡಿ ಅತ್ಯಾಚಾರ ಎಂದು ಪರಿಗಣಿಸಲು ಮಾತ್ರ ಅವಕಾಶವಿದೆ ಎಂಬುದನ್ನು ಕೋರ್ಟ್ ಉಲ್ಲೇಖ ಮಾಡಿ ಈ ತೀರ್ಪು ನೀಡಿದೆ.

ಏನಿದು ಪ್ರಕರಣ ? ಯಾವಾಗಿನ ಪ್ರಕರಣ ?

ತನ್ನ ಪತಿ ವಿರುದ್ಧ ಪತ್ನಿ 2019ರಲ್ಲಿ ದೂರು ನೀಡಿದ್ದಳು. ಮದುವೆ ಬಳಿಕ ತಾನು ಎರಡನೇ ಬಾರಿ ಪತಿಯ ಮನೆಗೆ ಬಂದಾಗ, ತನ್ನೊಂದಿಗೆ ಪತಿ ಅನೇಕ ಬಾರಿ ಅಸ್ವಾಭಾವಿಕ ಲೈಂಗಿಕ ಚಟುವಟಿಕೆ ನಡೆಸಿದ್ದಾಗಿ ದೂರಿನಲ್ಲಿ ಆರೋಪಿಸಿದ್ದಳು. ಪೊಲೀಸರು ಈ ಸಂಬಂಧ ಎಫ್ಐಆರ್ ದಾಖಲಸಿದ್ದರು. ತನ್ನ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ಪ್ರಶ್ನಿಸಿ ಪತಿ, ಮಧ್ಯ ಪ್ರದೇಶ ಹೈಕೋರ್ಟ್‌ ಮೆಟ್ಟಿಲೇರಿದ್ದ. ತನ್ನ ಹಾಗೂ ಹೆಂಡತಿ ನಡುವಿನ ಅಸ್ವಾಭಾವಿಕ ಲೈಂಗಿಕ ಕ್ರಿಯೆಯು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377ರ ಅಡಿ ಅತ್ಯಾಚಾರ ಅಪರಾಧ ಆಗುವುದಿಲ್ಲ ಎಂದು ಆತ(ಪತಿ) ವಾದಿಸಿದ್ದ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!