spot_img
Friday, March 6, 2026
spot_img

ಉಪ್ಪುಂದ: ಶ್ರೀ ನಾಗರಬಲ್ಲೆ ಶ್ರೀರಾಮ ಭಜನಾ ಮಂದಿರದಲ್ಲಿ ಶಿಲಾಮಯ ಮಂದಿರದಲ್ಲಿ ಶ್ರೀ ರಾಮ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ

ಉಪ್ಪುಂದ: ಉಪ್ಪುಂದ ಜನತಾ ಕಾಲೋನಿಯ ಶ್ರೀ ನಾಗರಬಲ್ಲೆ ಶ್ರೀರಾಮ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಮಂದಿರದಲ್ಲಿ ಶ್ರೀ ರಾಮ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಬ್ರಹ್ಮಕಲಶೋತ್ಸವ ಮಾರ್ಚ್ 13 ಶುಕ್ರವಾರದಿಂದ ಮಾರ್ಚ್ 16 ಸೋಮವಾರ ಮಧ್ಯಾಹ್ನ ಪರ್ಯಂತ ನಡೆಯಲಿದೆ.

ಮಾ.13ರಂದು ಬೆಳಿಗ್ಗೆ 8 ಗಂಟೆಯಿಂದ ಭವ್ಯ ಮೆರವಣಿಗೆಯಲ್ಲಿ ಶ್ರೀರಾಮ ದೇವರು ಹಾಗೂ ಶ್ರೀ ಮಹಾಗಣಪತಿ ದೇವರ ರಜತ ಭಾವಚಿತ್ರ ರಾಮ ಮಂದಿರಕ್ಕೆ ತರುವುದು. ಸಂಜೆ 6.30ರಿಂದ ಶ್ರೀ ನಾಗದೇವರಿಗೆ ಫಲಪ್ರಾರ್ಥನೆ, ವಿವಿಧ ಧಾರ್ಮಿಕ ವಿಧಿವಿಧಾನಗಳು, ಆಶ್ಲೇಷಾಬಲಿ, ಮಹಾಪೂಜೆ ನಡೆಯಲಿದೆ.

ಮಾ.14 ಶನಿವಾರ ಬೆಳಿಗ್ಗೆ 8ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಹೋಮಾದಿಗಳು ನಡೆಯಲಿದೆ. ಮಾ.15 ಭಾನುವಾರ ಬೆಳಿಗ್ಗೆ 8ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು, ಬೆಳಿಗ್ಗೆ 11-15ರಿಂದ 11-45ರ ತನಕ ಶ್ರೀರಾಮ ದೇವರ ಪ್ರತಿಷ್ಠಾ ಮಹೋತ್ಸವ, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭೀಷೇಕ, ಮಹಾಪೂಜೆ ನಡೆಯಲಿದೆ. ಸಂಜೆ 6.30ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಮಾ.16 ಸೋಮವಾರ ಬೆಳಿಗ್ಗೆ 8.30ರಿಂದ ಧಾರ್ಮಿಕ ವಿಧಿವಿಧಾನಗಳು, ರಾಮ ತಾರಕ ಹೋಮ, ಮಧ್ಯಾಹ್ನ 11 ಗಂಟೆಯಿಂದ ಶ್ರೀರಾಮ ದೇವರಿಗೆ ಬ್ರಹ್ಮಕಲಶಾಭೀಷೇಕ, ಕಲ್ಪೋಕ್ತ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12-30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ:
ಮಾ.15 ಭಾನುವಾರ ಸಂಜೆ 6 ಗಂಟೆಯಿಂದ ಧಾರ್ಮಿಕ ಪ್ರವಚನ ನಡೆಯಲಿದ್ದು, ಶ್ರೀ ನಿಜಗುಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸಿಪುರ ಇಲ್ಲಿನ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ನಾಗರಬಲ್ಲೆ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ವಾಸುದೇವ ಖಾರ್ವಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ್ ಎಸ್.ವೈದ್ಯ ಪ್ರಧಾನ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ನಾಡೋಜ ಡಾ.ಜಿ.ಶಂಕರ್, ಆನಂದ್ ಸಿ.ಕುಂದರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಾ.16 ಸೋಮವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಪುರ ಮಠ ಇಲ್ಲಿನ ಶ್ರೀ ಮದ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಹೆಚ್.ಮಂಜುನಾಥ ಖಾರ್ವಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದರಾದ ಬಿ.ವೈ.ರಾಘವೇಂದ್ರ ಪ್ರಧಾನ ಉಪಸ್ಥಿತರಿರಲಿದ್ದಾರೆ. ಶಾಸಕ ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಗಣಪತಿ ದುಮ್ಮಾ ಉಳ್ವೇಕರ್ ಕಾರವಾರ, ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾಂಸ್ಕøತಿಕ ಕಾರ್ಯಕ್ರಮ:
ಮಾ.15ರಂದು ರಾತ್ರಿ 9 ಗಂಟೆಯಿಂದ ಸ್ಥಳೀಯ ಪ್ರತಿಭೆಗಳಿಂದ ಡ್ಯಾನ್ಸ್ ಧಮಾಕಾ, ಮಾ.16ರಂದು ರಾತ್ರಿ 9 ಗಂಟೆಯಿಂದ ಅರೆಹೊಳೆ ಪ್ರತಿಷ್ಠಾನದ ಕಲಾವಿದರಿಂದ ‘ಬಾರ್ಕೂರಿನ್ ಹಡ್ಗ್’ ನೃತ್ಯ ರೂಪಕ ನಡೆಯಲಿದೆ.

ಅಖಂಡ ಏಕಾಹ ಭಜನಾ ಕಾರ್ಯಕ್ರಮ:
ಮಾ.20 ಶುಕ್ರವಾರ ಬೆಳಿಗ್ಗೆ 7-05ಕ್ಕೆ ಅಖಂಡ ಏಕಾಹ ಭಜನಾ ಕಾರ್ಯಕ್ರಮದ ದೀಪ ಸ್ಥಾಪನೆ ನಡೆಯಲಿದೆ. ಮಾ.26 ಗುರುವಾರ ಬೆಳಿಗ್ಗೆ 7-15ಕ್ಕೆ ಅಖಂಡ ಏಕಾಹ ಭಜನೆ ಪ್ರದೀಪ ಸ್ಥಾಪನೆ ನಡೆಯಲಿದೆ. ಅಂದು ಮಧ್ಯಾಹ್ನ 12-30ರಿಂದ ಅನ್ನಸಂತರ್ಪಣೆ, ಸಂಜೆ 4ರಿಂದ ಪುರ ಮೆರವಣಿಗೆ, ಮಾ.27ರಂದು ಬೆಳಿಗ್ಗೆ 10-45ಕ್ಕೆ ಭಜನಾ ಮಂಗಲೋತ್ಸವ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!