Sunday, September 8, 2024

‘ಮತದಾನ’ದ ಮಮತೆಯ ಕರೆಯೋಲೆ

ಕುಂದಾಪುರ: ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಭಾರತ ಚುನಾವಣಾ ಆಯೋಗ ಭಾರತ ಸರಕಾರ ಗರಿಷ್ಠ ಮತದಾನಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಿದೆ. ಜಿಲ್ಲಾಡಳಿತದ ಜೊತೆಯಲ್ಲಿ ಸ್ವಯಂಸೇವಾ ಸಂಸ್ಥೆಗಳು ಕೂಡಾ ಮತದಾನದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರಿಗೆ ಮತದಾನದ ಮಹತ್ವದ ಅರಿವು ಮೂಡಿಸಲು ಭಿನ್ನ, ವಿಭಿನ್ನ ಕಾರ್ಯತಂತ್ರಗಳನ್ನು ಅನುಸರಿಸಲಾಗುತ್ತಿದೆ. ಒಟ್ಟು ಆಶಯ ಸಾರ್ವಜನಿಕ ಗಮನವನ್ನು ಮತದಾನದ ಮಹತ್ವದತ್ತ ಸೆಳೆದು ಮತದಾನದ ಪ್ರಮಾಣ ವೃದ್ಧಿಸುವುದು.

ಆ ಹಿನ್ನೆಲೆಯಲ್ಲಿ ಇಲ್ಲೊಬ್ಬರು ಮತದಾನದ ಬಗ್ಗೆ ಅರಿವು ಮೂಡಿಸಲು ಮದುವೆ ಆಮಂತ್ರಣ ಪತ್ರಿಕೆಯಂತೆ ಆಮಂತ್ರಣ ಪತ್ರಿಕೆ ಸಿದ್ದ ಪಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಂಡ್ಸೆಯ ಆರ್.ಕೆ ಗ್ರಾಫಿಕ್ಸ್ ನ ರಕ್ಷಿತ ಕುಮಾರ್ ಎನ್ನುವವರು ಈ ಆಮಂತ್ರಣ ಪತ್ರಿಕೆ ಸಿದ್ದಪಡಿಸಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಕೂಡಾ ಅವರು ಇಂತಹದ್ದೆ ಮತದಾನ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು. ಈ ಬಾರಿಯೂ ಕೂಡಾ ಅಂತಹದ್ದೇ ಪ್ರಯೋಗ ಸಾರ್ವಜನಿಕನ ನೆಲೆಯಲ್ಲಿ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳ ಮೂಲಕ ಯುವಮತದಾರರನ್ನು ತಲುಪಿದೆ.

ಚುನಾವಣಾ ಆಯೋಗದ ಮಮತೆಯ ಕರೆಯೋಲೆ
ಭಾರತ ಚುನಾವಣಾ ಆಯೋಗ ಭಾರತ ಸರಕಾರ ಇವರಿಂದ ಪವಿತ್ರ ಮತದಾನಕ್ಕಾಗಿ ಆತ್ಮೀಯ ಆಮಂತ್ರಣ
ಎನ್ನುವ ಪ್ರಾರಂಭಿಕ ಸಾಲುಗಳೊಂದಿಗೆ ಸಾಗುತ್ತದೆ.
……….ಈ ಚುನಾವಣಾ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿಸುವಂತೆ ಭಾರತದ ಸಂವಿಧಾನ ನೀಡಿರುವ ಅಧಿಕಾರದ ಅನ್ವಯ ಚುನಾವಣಾ ಆಯೋಗ ನಿಶ್ಚಯಿಸಿರುವುದರಿಂದ ತಾವು ತಮ್ಮ ಕುಟುಂಬದ ಎಲ್ಲಾ ಸದಸ್ಯರು ಆಗಮಿಸಿ ತಮ್ಮ ಸ್ವಂತ ಇಚ್ಛೆಯಂತೆ ನಿರ್ಭೀತರಾಗಿ ತಮ್ಮ ಅಮೂಲ್ಯವಾದ ಮತದಾನ ಚಲಾಯಿಸಿ ಕರ್ನಾಟಕದ ಭವಿಷ್ಯವನ್ನು ರೂಪಿಸಬೇಕೆಂದು ಕೋರುತ್ತೇವೆ.

ಸ್ಥಳ : ನಿಮಗೆ ನಿಯೋಜಿಸಿದ ಮತದಾನ ಕೇಂದ್ರ ತಮ್ಮ ಆಗಮನಾಭಿಲಾಷಿಗಳು ಭಾರತದ ಕೇಂದ್ರ ಚುನಾವಣಾ ಆಯೋಗ
ವಿ.ಸೂ. ಹಣ ಕೇಳದೇ ನಿಮ್ಮ ಹಕ್ಕು ಚಲಾಯಿಸಿ ಮತ ನೀಡಿ ಆಶೀರ್ವದಿಸಿ

ಸುಖಾಗಮನ ಬಯಸುವ:- ಬೂತ್ ಮಟ್ಟದ ಎಲ್ಲಾ ಪಕ್ಷದ ಕಾರ್ಯಕರ್ತರು

ತಪ್ಪದೇ ಗಮನಿಸಿ:
ನನ್ನ ಮತ ನನ್ನ ಹಕ್ಕು ಬಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಸಾರ್ವಭೌಮ ಮತದಾನ ಮಾಡುವುದು ಜವಾಬ್ದಾರಿಯುತ ಪ್ರಜೆಯ ಆದ್ಯ ಕರ್ತವ್ಯ ಹಾಗೆಯೇ ಮತವನ್ನು ಆಸೆ ಆಮಿಷಗಳಿಗೆ ಮಾರಿಕೊಳ್ಳಬಾರದು. ೧೮ ವರ್ಷ ದಾಟಿದ ಪ್ರತಿಯೊಬ್ಬರು ಮತದಾನ ಮಾಡುವ ಅವಕಾಶ. ತಪ್ಪದೇ ಮತದಾನ ಮಾಡಿ ನಿಮ್ಮ ಮುಂದಿನ 5 ವರ್ಷಗಳ ಕಾಲ ಭವಿಷ್ಯವನ್ನು ನಿರ್ಧರಿಸಿಕೊಳ್ಳಿ ಎನ್ನುವ ಹಾಗೆ ಉಲ್ಲೇಖಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!