Wednesday, September 11, 2024

ಎನ್‌ಇಪಿ ಗೊಂದಲಗಳಿಗೆ ತೆರೆ | ಮೂರು ವರ್ಷಗಳ ಪದವಿ ವ್ಯಾಸಂಗಕ್ಕೆ ರಾಜ್ಯ ಸರ್ಕಾರ ಅಸ್ತು !

ಜನಪ್ರತಿನಿಧಿ (ಬೆಂಗಳೂರು) : ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಭಾಗವಾಗಿದ್ದ ನಾಲ್ಕು ವರ್ಷಗಳ ಪದವಿ ಸ್ಥಗಿತಗೊಳಿಸಿ, ಮೂರು ವರ್ಷಗಳ ಪದವಿ ವ್ಯಾಸಂಗ ಮುಂದುವರಿಸಲು ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳಿಗೆ ಸೂಚನೆ ನೀಡಿರುವ ಉನ್ನತ ಶಿಕ್ಷಣ ಇಲಾಖೆ, ಎನ್‌ಇಪಿ ಗೊಂದಲಗಳಿಗೆ ತೆರೆ ಎಳೆದಿದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗ ನೀಡಿದ ಸಲಹೆಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ತೆಗೆದುಕೊಂಡಿದೆ.

2023ರಲ್ಲಿ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP 2020) ರದ್ದುಗೊಳಿಸಿದೆ. ಇಲಾಖೆಯ ಮೂಲಗಳ ಪ್ರಕಾರ, ತಮ್ಮ ಪದವಿಯ ಮೂರನೇ ವರ್ಷದ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಅಡ್ಡಿಯಾಗದಂತೆ ನಾಲ್ಕನೇ ವರ್ಷವನ್ನು ಮುಂದುವರಿಸಲು ಅನುಮತಿಸಲಾಗುವುದು. ಆದಾಗ್ಯೂ, ಇದು ಕರ್ನಾಟಕದಲ್ಲಿ ಕೊನೆಯ ಎನ್‌ಇಪಿ ಬ್ಯಾಚ್ ಆಗಿರುತ್ತದೆ.

ಮೇ 7 ರಂದು ನಡೆಯಲಿರುವ ಮೂರನೇ ಹಂತದ ಮತದಾನಕ್ಕಾಗಿ ಕಾಯುತ್ತಿದ್ದೇವೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು (ಎಚ್‌ಇಐಗಳು) ಹಾಗೂ ಉಪಕುಲಪತಿಗಳಿಗೆ ಅಧಿಕೃತ ಆದೇಶ ಹೊರಡಿಸಲು ಪತ್ರಿಕಾಗೋಷ್ಠಿ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

ಇನ್ನು, ಈ ನಡುವೆ 2024-25ರ ಹೊಸ ಪ್ರವೇಶಾತಿಗೆ ನಾಲ್ಕು ವರ್ಷಗಳ ಪದವಿ ಕೋರ್ಸ್‌ಗೆ ಹೊಸ ಅರ್ಜಿಗಳನ್ನು ಅನುಮತಿಸದಂತೆ ಈಗಾಗಲೇ ಎಲ್ಲಾ ವಿಶ್ವವಿದ್ಯಾಲಯಗಳ ವಿಸಿಗಳಿಗೆ ನಿರ್ದೇಶನ ಕೊಡಲಾಗಿದೆ. ಎನ್‌ಇಪಿ 2020 ಜಾರಿಯಾದಾಗಿನಿಂದ, ಶುಲ್ಕ ಹೆಚ್ಚಳ, ಮೂಲಸೌಕರ್ಯಗಳ ಕೊರತೆ, ಅಧ್ಯಾಪಕರ ಕೊರತೆ ಹಾಗೂ ಅಸಮರ್ಪಕ ಶೈಕ್ಷಣಿಕ ಸಂಪನ್ಮೂಲ ಹಾಗೂ ಬದಲಾವಣೆಯ ವಿರುದ್ಧ ವಿದ್ಯಾರ್ಥಿ ಸಮುದಾಯಗಳು ಹಲವು ಪ್ರತಿಭಟನೆ ನಡೆಸಿದ್ದವು. ಆಯೋಗವು ಸಲ್ಲಿಸಿರುವ ಮಧ್ಯಂತರ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!