spot_img
Friday, December 6, 2024
spot_img

ಪ್ರಜ್ವಲ್‌ ರೇವಣ್ಣ ಉಮೇಶ್‌ ರೆಡ್ಡಿಗಿಂತ ಹತ್ತು ಪಟ್ಟು ಹೆಚ್ಚು ವಿಕೃತಕಾಮಿ : ಪುಷ್ಪಾ ಅಮರನಾಥ್‌ ಆರೋಪ

ಜನಪ್ರತಿನಿಧಿ (ಬೀದರ್‌) : ಉಮೇಶ್‌ ರೆಡ್ಡಿಗಿಂತ ಹತ್ತು ಪಟ್ಟು ಹೆಚ್ಚು ವಿಕೃತಕಾಮಿ ಸಂಸದ ಪ್ರಜ್ವಲ್‌ ರೇವಣ್ಣ ಎಂದು ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಆರೋಪ ಮಾಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಒಬ್ಬ ನಾಲಾಯಕ್‌ ಸಂಸದ. ನಿರ್ಭಯಾ ಅತ್ಯಚಾರ, ವಿಕೃತಕಾಮಿ ಉಮೇಶ್‌ ರೆಡ್ಡಿ ಪ್ರಕರಣದ ಮಾದರಿಯಲ್ಲಿ ಅವರಿಗೆ ಕಾನೂನಿನ ಪ್ರಕಾರ ಶಿಕ್ಚೆ ವಿಧಿಸಬೇಕು. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು ಎಂದು ಆಗ್ರಹ ಮಾಡಿದ್ದಾರೆ.

ಪ್ರಧಾನಿ ಮೋದಿ ವಿಶ್ವಗುರು ಎಂದು ಅವರನ್ನು ಕರೆದುಕೊಳ್ಳುತ್ತಾರೆ. ಆದರೇ, ಸಂತ್ರಸ್ತೆಯ ಪರ ಮಾತನಾಡಿಲ್ಲ. ಅವರ ಜೊತೆ ನಾವಿದ್ದೇವೆ ಎಂದು ಬಿಜೆಪಿ ಮುಖಂಡರಾದರೂ ಹೇಳಬೇಕಿತ್ತು ಎಂದರು.

ಮೂರು ಸಾವಿರ ಹೆಣ್ಣು ಮಕ್ಕಳು ಇದ್ದೂ ಸತ್ತಂತಿದ್ದಾರೆ. ಅವರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಅವರ ಬಗ್ಗೆ ಬಿಜೆಪಿ ಅವರು ಯಾಕೆ ಮಾತನಾಡುತ್ತಿಲ್ಲ ? ಮೋದಿ ಪರಿವಾರದಲ್ಲಿ ಕೊಲೆಗಡುಕರು ಇದ್ದಾರೆಯೇ ? ಇಂತವರ ರಕ್ಷಣೆಗೆ ಕೇಂದ್ರ ಸರ್ಕಾರವಿದೆಯೇ ? ಬಿಲ್ಕಿಸ್‌ ಬಾನು, ಉನ್ನಾವ್‌ ದಲ್ಲಿ ಯುವತಿಯೋರ್ವಳನ್ನು ಜೀವಂತ ಸುಟ್ಟರೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದರು.

ಎಸ್‌ಐಟಿ ರಚನೆಗೂ ಮುನ್ನ ಪ್ರಜ್ವಲ್‌ ದೇಶ ಬಿಟ್ಟು ಹೋಗಿದ್ದಾನೆ. ಮನುಷ್ಯನ ಮನಸ್ಥಿತಿ ಈ ರೀತಿ ಇರುತ್ತದೆಯೇ ? ಒಬ್ಬ ಬಿಜೆಪಿ ನಾಯಕ ಇದರ ಬಗ್ಗೆ ಮಾನವೀಯತೆ ದೃಷ್ಟಿಯಿಂದ ಪ್ರತಿಕ್ರಿಯಿಸಿಲ್ಲ. ನಾರಿಶಕ್ತಿ, ಮಹಿಳಾ ಸಬಲೀಕರಣ, ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಬಿಜೆಪಿಯವರು ಹೇಳುತ್ತಾರೆ. ಪ್ರಧಾನಿ ಮೋದಿ ಅವರು ಅವರ ಭಾಷಣಗಳಲ್ಲಿ ಮಹಿಳೆಯರ ಬದುಕು ಬಂಗಾರ ಮಾಡುತ್ತೇವೆ ಎನ್ನುತ್ತಾರೆ. ಇದೆನಾ ? ಎಂದು ಪ್ರಶ್ನಿಸಿದದರು.

ಹಾಸನದ ಘಟನೆಯನ್ನು ಎನ್‌ಡಿಎ ನಾಯಕರು ಸುಳ್ಳು ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಇದು ಸುಳ್ಳಾಗಿದ್ದರೇ ಪ್ರಜ್ವಲ್‌ ರೇವಣ್ಣ ದೇಶಬಿಟ್ಟು ಯಾಕೆ ಹೋಗುತ್ತಿದ್ದರು. ಮಾಧ್ಯಮಗಳಲ್ಲಿ ತನ್ನ ವಿರುದ್ಧ ಸುದ್ದಿ ಪ್ರಕಟಿಸಬಾರದು ಎಂದು ಇಂಜೆಕ್ಷನ್‌ ಆರ್ಡರ್‌ ತಂದಿದ್ಯಾಕೆ ? ತಪ್ಪು ಮಾಡಿರದಿದ್ದರೇ ಪ್ರಜ್ವಲ್‌ನನ್ನು ಪಕ್ಷದಿಂದ ಉಚ್ಛಾಟಿಸಿದ್ಯಾಕೆ ? ಎಚ್‌. ಡಿ ರೇವಣ್ಣ ವಿರುದ್ಧವೂ ಆರೋಪ ಕೇಳಿ ಬಂದಿದ್ದು ಅವರ ವಿರುದ್ಧವೂ ತನಿಖೆ ನಡೆಸಬೇಕಿದೆ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!