spot_img
Wednesday, January 22, 2025
spot_img

ಮೇ ದಿನಾಚರಣೆ 2024 : ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಮಿಕರ ಶಕ್ತಿಯನ್ನು ಕುಂದಿಸುವ ಪ್ರಯತ್ನ ಮಾಡುತ್ತಿದೆ : ಕೆ. ಶಂಕರ್‌ ಆಕ್ರೋಶ

ಜನಪ್ರತಿನಿಧಿ (ಕುಂದಾಪುರ) : ಸಾಮ್ರಾಜ್ಯಶಾಹಿಗಳನ್ನು ವಿರೋಧಿಸುವ ಅಗತ್ಯವನ್ನು ಕಾರ್ಮಿಕ ವರ್ಗ ತುರ್ತಾಗಿ ಅರ್ಥೈಸಿಕೊಳ್ಳಬೇಕಾಗಿದೆ‌. ದೇಶದಲ್ಲಿ ನರೇಂದ್ರ ಮೋದಿ ಸರ್ವಾಧಿಕಾರ ಧೋರಣೆಯ ಆಡಳಿತವಿದೆ. ದೇಶದಲ್ಲಿ ಹಣದುಬ್ಬರ, ಬೆಲೆ ಏರಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮೋದಿ ನೇತೃತ್ವದ ಸರ್ಕಾರದ ಇಂತಹ ನೀತಿಯ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು  ಸೆಂಟರ್ ಆಫ್ ಇಂಡಿಯನ್ ಟ್ರೇಡ್  ಯೂನಿಯನ್ ನ ಜಿಲ್ಲಾಧ್ಯಕ್ಷ ಕೆ. ಶಂಕರ್ ಹೇಳಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್  ಯೂನಿಯನ್ ವತಿಯಿಂದ ನಡೆದ ‘ಮೇ ದಿನಾಚರಣೆ 2024’ ಅಂಗವಾಗಿ ಪ್ರತಿಭಟನಾ ಮೆರವಣಿಗೆ ಬಳಿಕ ನಡೆದ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದುಡಿದವನಿಗೆ ಸಂಬಳ ಕೊಡುವುದು ಮಾಲೀಕನಾದರೆ ಆ ಸಂಬಳ ಕೊಡುವ ಮಟ್ಟಕ್ಕೆ ಮಾಲೀಕನನ್ನು ಬೆಳಿಸಿದವನು ಕಾರ್ಮಿಕ. ಇಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಮಿಕರ ಶಕ್ತಿಯನ್ನು ಕುಂದಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸರ್ಕಾರದ ಈ ಪ್ರಯತ್ನ ಸೋಲುವುದಕ್ಕಾಗಿ ನಾವೆಲ್ಲಾ ಕಾರ್ಮಿಕ ಸಂಘಟನೆಗಳು ಮತ್ತಷ್ಟು  ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಅವರು ಹೇಳಿದರು.

ಸಿಐಟಿಯ ಮುಖಂಡ ಎಚ್. ನರಸಿಂಹ ಮಾತನಾಡಿ, ‘ಬಿಜೆಪಿ ನೇತೃತ್ವದ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆಗಳನ್ನೇ ಜಾರಿಗೆ ತಂದು ಪ್ರತಿಗಾಮಿ ನೀತಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ತೀರ್ಮಾನಗಳು ಕಾರ್ಪೋರೇಟ್‌ ಕಂಪನಿಗಳ ಪರವಾಗಿವೆ. ಸಾಮಾಜಿಕ ಭದ್ರತೆಗಾಗಿ ಹೋರಾಟಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದಲ್ಲದೇ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೇ ಸಂವಿಧಾನ ಬದಲಿಸಿ ಮನುಸ್ಮೃತಿ ಹೇರುವ ಪ್ರಯತ್ನ ಮಾಡುವುದು ಖಚಿತ ಎಂದು ಅವರು ಹೇಳಿದರು.

‘ಕಾರ್ಮಿಕರ ದಿನಾಚರಣೆ’ ಅಂಗವಾಗಿ ಮೇ ದಿನ ಸೆಂಟರ್ ಆಫ್ ಇಂಡಿಯನ್ ಟ್ರೇಡ್  ಯೂನಿಯನ್ ಆಯೋಜಿಸಿದ್ದ ʼಮೇ ದಿನʼ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಸದಸ್ಯರು ನಗರದ ಶಾಸ್ತ್ರಿ ಸರ್ಕಲ್‌ ನಿಂದ ಮೊದಲ್ಗಿಂಡು ಪೇಟೆಯ ಸುತ್ತ ನಡಿಗೆಯ ಜಾಥ ಮೂಲಕ ಮೇ ದಿನಾಚರಣೆಯ ಸಂದೇಶ ಸಾರಿದರು. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!