spot_img
Friday, January 17, 2025
spot_img

ಕಾರ್ಕಡದ ಮನೆಯಂಗಳದಲ್ಲಿ ಸಾಹಿತ್ಯ, ಸಂಗೀತ, ಯಕ್ಷಗಾನ: ಸಾಧಕರಿಗೆ ಸನ್ಮಾನ

ಕೋಟ: ಕನ್ನಡ ಸಾಹಿತ್ಯ ಪರಿಷತ್ ,ಬ್ರಹ್ಮಾವರ ಘಟಕ, ಉಡುಪಿ ಜಿಲ್ಲೆ ಕರ್ನಾಟಕ ಯಕ್ಷಧಾಮ, ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ, ಮಂಗಳೂರು ಮತ್ತು ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ. ಇವರ ಸಂಯುಕ್ತ ಆಶ್ರಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಮತ್ತು ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ ಕನಕಾಂಗಿ ಕಲ್ಯಾಣ ಏ. 22ರ ಸೋಮವಾರ ಭೂಮಿಕಾ ಮನೆಯಂಗಳ ಕಾರ್ಕಡದಲ್ಲಿ ಜರುಗಿತು.

ಸಮಾರಂಭದಲ್ಲಿ ಮಾಸ್ಟರ್ ಅತ್ಲೆಟಿಕ್ಸ್ ಪಟು ದಿನೇಶ ಗಾಣಿಗ,ಡಾಕ್ಟರೇಟ್ ಪದವೀಧರ ಡಾ.ಕೆ. ಕೃಷ್ಣಮೂರ್ತಿ ಮಯ್ಯ, ಸಾಹಿತಿ ಕಲಾವಿದೆ ಸುಮನಾ ಆರ್ ಹೇರ್ಳೆ,ಲೇಖಕಿ ಸವಿತಾ ಶಾಸ್ತ್ರಿ ಇವರುಗಳ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಜಿ. ರಾಮಚಂದ್ರ ಐತಾಳ ವಹಿಸಿದ್ದರು.
ಕಾರ್ಯಕ್ರಮವನ್ನು ಮಂಗಳೂರಿನ ಕಲಾ ಸಾಹಿತಿ ಕೋಟ ಜನಾರ್ದನ ಹಂದೆ ದೀಪ ಪ್ರಜ್ವಲನೆಗೈದು ಮಾತನಾಡಿ ಘರ್ಷಣೆಯಿಂದಲೇ ಬೆಳಕಿನ ಹುಟ್ಟು ಸಾಧ್ಯವಾಗುವುದು. ಅಂತಯೇ ಮನಸ್ಸು ಮತ್ತು ಹೃದಯದ ಭಾವದೀಪದ ತಾಕಲಾಟದಿಂದ ಸಾಹಿತ್ಯದ ಹುಟ್ಟು, ದೀಪದಿಂದ ದೀಪ ಬೆಳಗುವ ಹಾಗೆ ಮನೆ ಅಂಗಳದ ಮೂಲಕ ಸಾಹಿತ್ಯದ ದೀಪ ಕನ್ನಡ ಸಾಹಿತ್ಯ ಜ್ಯೋತಿಯನ್ನು ಬೆಳಗಬಲ್ಲದು. ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳರ ಮನೆಯಂಗಳದಲ್ಲಿ ನಡೆಯುತ್ತಿರುವ ಸತತ ಸಾಹಿತ್ಯಾರಾಧನೆ ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಬ್ರಹ್ಮಾವರ ತಾಲೂಕಿನ ಹಾಗೂ ಉಡುಪಿ ಜಿಲ್ಲಾ ಕ ಸಾ ಪ ಪದಾಧಿಕಾರಿಗಳು,ಗೆಳಯರ ಬಳಗದ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

ಕ.ಸಾ.ಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಇವರು ಸುಮನಾ ಆರ್ ಹೇರ್ಳೆ ಅವರ ದಡ ಸೇರದ ಅಲೆಗಳು ಎನ್ನುವ ಗಝಲ್ ಸಂಕಲನ ಮತ್ತು ಸುಮನಸಾರ ಎನ್ನುವ ಷಡ್ದಳ ಮುಕ್ತಕಗಳ ಸಂಕಲನಗಳನ್ನು ಬಿಡುಗಡೆ ಮಾಡಿದರು.

ಸನ್ಮಾನ ಪತ್ರ ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ,ಕೆ. ಶ್ರೀಕಾಂತ ಐತಾಳ ,ಕೆ .ಚಂದ್ರಶೇಖರ ಸೋಮಯಾಜಿ ಹಾಗೂ ಕೆ. ಶೇಖರ ವಾಚಿಸಿದರು.ಗೆಳೆಯರ ಬಳಗ ಕಾರ್ಕಡ ಇದರ ಅಧ್ಯಕ್ಷ ಕೆ. ತಾರನಾಥ ಹೊಳ್ಳ, ಪ್ರಾಸ್ತಾವಿಕ ಮಾತನಾಡಿದರು. ಬಳಗದ ಉಪಾಧ್ಯಕ್ಷ ಕೆ.ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಬಳಗದ ಕಾರ್ಯದರ್ಶಿ ಕೆ. ಶೀನ ವಂದಿಸಿದರು.

ಪ್ರಾರಂಭದಲ್ಲಿ ಕೆ. ಚಂದ್ರಕಾಂತ ನಾಯರಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಭಾವಗೀತೆ, ಕನ್ನಡ ನಾಡು ನುಡಿ ಬಿಂಬಿಸುವ ಹಾಡು , ನೃತ್ಯ‌ಇತ್ಯಾದಿ ಜರುಗಿದವು. ಕೊನೆಯಲ್ಲಿ ಮಯ್ಯ ಯಕ್ಷಬಳಗ, ಹಾಲಾಡಿ ಇವರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ‘ಕನಕಾಂಗಿ ಕಲ್ಯಾಣ’ ಜನಮನ ರಂಜಿಸಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!