Saturday, October 12, 2024

ʼಹನುಮಾನ್‌ ಚಾಲೀಸಾʼ ಕೇಳುವುದು ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಅಪರಾಧವಾಗಿತ್ತು : ಮೋದಿ ಆರೋಪ

ಜನಪ್ರತಿನಿಧಿ (ಜೈಪುರ ) : ಕಾಂಗ್ರೆಸ್‌ ಅಧಿಕಾರದಲ್ಲಿ ಒಬ್ಬರ ನಂಬಿಕೆಯನ್ನು ಪಾಲಿಸುವುದು ಕಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ʼಹನುಮಾನ್‌ ಚಾಲೀಸಾ” ಕೇಳುವುದು ಅಪರಾಧವಾಗಿತ್ತು ಎಂದು ಇಂದು(ಮಂಗಳವಾರ) ಕಾಂಗ್ರೆಸ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೇ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ ಎಂದು ಹೇಳಿರುವುದನ್ನು ಸಮರ್ಥಿಸಿಕೊಂಡು ಮಾತನಾಡಿದ ಪ್ರಧಾನಿ, ʼಈ ಹೇಳಿಕೆ ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟವನ್ನು ಕೆರಳಿಸಿದೆ.  ಈಗ ಎಲ್ಲಾ ಕಡೆ ಮೋದಿಯನ್ನು ನಿಂದಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜಸ್ಥಾನದ ಟೊಂಕ್‌ ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಸಂಪತ್ತನ್ನು ಕಿತ್ತುಕೊಂಡು ಆಯ್ದ ಜನರಿಗೆ ಹಂಚಲು ಕಾಂಗ್ರೆಸ್‌ ಸಂಚು ರೂಪಿಸುತ್ತಿದೆ ಎಂಬ ಸತ್ಯವನ್ನು ನಾನು ಬಹಿರಂಗ ಮಾಡಿದ್ದೇನೆ ಎಂದು ಹೇಳಿದ್ದರು.

ಕಾಂಗ್ರೆಸ್‌ ಯಾಕೆ ಸತ್ಯವನ್ನು ಮರೆಮಾಚುತ್ತದೆ ? ತನ್ನ ನೀತಿಗಳನ್ನು ಏಕೆ ಮರೆಮಾಚುತ್ತದೆ ? ಸತ್ಯವನ್ನು ಹೇಳಿದರೇ ಕಾಂಗ್ರೆಸ್‌ ಯಾಕೆ ಹೆದರುತ್ತದೆ ? ಎಂದು ಎರಡು ಮೂರು ದಿನಗಳ ಹಿಂದೆ ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ರಾಜಕಾರಣವನ್ನು ಬಯಲುಗೊಳಸಿದ್ದೆ. ಈ ಬಳಿಕ ಕಾಂಗ್ರೆಸ್‌ ನನ್ನನ್ನು ನಿಂದಿಸಲು ದೇಶದೆಲ್ಲೆಡೆ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸಂಪತ್ತಿನ ಸಮೀಕ್ಷೆ ಮಾಡುತ್ತೇವೆ ಎಂದು ಹೇಳಿಕೊಂಡಿದೆ.  ಸಂಪತ್ತಿನ ಎಕ್ಸ್‌ ರೇ ಮಾಡುವುದಾಗಿ ಕಾಂಗ್ರೆಸ್‌ ನಾಯಕರೊಬ್ಬರು ತಮ್ಮ ಭಾಷಣದಲ್ಲಿ ಹೇಳಿಕೊಂಡಿದ್ದರು. ಈ ರಹಸ್ಯವನ್ನು ಬಯಲು ಮಾಡಿದಾಗ ಕಾಂಗ್ರೆಸ್ ಹಿಡೆನ್‌ ಅಜೆಂಡಾ ಹೊರಬಿತ್ತು. ಈಗ ಕಾಂಗ್ರೆಸ್‌ಗೆ ಭಯ ಆರಂಭವಾಗಿದೆ ಎಂದು ಪ್ರಧಾನಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!