Sunday, September 8, 2024

ಕಾಂಗ್ರೆಸ್‌ನ ಬಿಟ್ಟಿ ಭಾಗ್ಯಗಳೆಂಬ ಮಾಯಾಜಿಂಕೆಯ ಮೋಹಕ್ಕೆ ಒಳಗಾಗದಿರಿ-ಚಿತ್ರನಟಿ ಶೃತಿ

ಬೈಂದೂರು ಬಿಜೆಪಿ ಬೃಹತ್ ‘ಶಕ್ತಿ ಸಿಂಧು’ ಮಹಿಳಾ ಸಮಾವೇಶ

ಬೈಂದೂರು, ಬಿಟ್ಟಿ ಭಾಗ್ಯಗಳು ಮಾಯಜಿಂಕೆ ಇದ್ದಂತೆ. ಲಕ್ಷ್ಮಣರೇಖೆಯ ದಾಟಿ ಮಾಯಜಿಂಕೆಯ ಮೋಹಕ್ಕೆ ಒಳಗಾದರೆ ಕಾಂಗ್ರೆಸ್‌ಗೆ ಬಲಿ ಬಿದ್ದಂತೆ. ಕಾಂಗ್ರೆಸ್ ಪಕ್ಷ ಬಣ್ಣ ಬಣ್ಣದ ಆಮಿಷ ಕೊಡುವ ಮೂಲಕ ಮಹಿಳೆಯರ ಮನಸನ್ನು ಕದಡುತ್ತಿದ್ದಾರೆ. ಯೋಜನೆಗಳು ಮಹಿಳೆಯರ ರಕ್ಷಣೆಗೆ ಇರಬೇಕು ಹೊರತು ಆಕರ್ಷಣೆ ಆಗಬಾರದು. ಈ ಹಿನ್ನೆಯಲ್ಲಿ ಮಹಿಳೆಯರು ಜಾಗೃತರಾಗಬೇಕು. ದೇಶ ರಕ್ಷಣೆ ಮಾಡುವ ಶಕ್ತಿ ನಾರಿಶಕ್ತಿಗಿದೆ ಎಂದು ಚಿತ್ರನಟಿ ಶೃತಿ ಹೇಳಿದರು.

ಅವರು ಕಿರಿಮಂಜೇಶ್ವರದಲ್ಲಿ ಬಿಜೆಪಿ ಬೈಂದೂರು ಮಂಡಲದ ವತಿಯಿಂದ ನೆಡೆದ  ಬೃಹತ್ ಶಕ್ತಿ ಸಿಂಧು ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಅಂಬೇಡ್ಕರ್ ಬಳಿಕ ಈ ದೇಶದಲ್ಲಿ ಮತ್ತೊಬ್ಬ ಸ್ತ್ರೀವಾದಿ ವ್ಯಕ್ತಿ ನರೇಂದ್ರ ಮೋದಿಯವರು. ಮಹಿಳೆಯರಿಗೆ ಸಿಂಹಪಾಲು ಯೋಜನೆಗಳನ್ನು ಅವರು ನೀಡಿದ್ದಾರೆ. ಆದರೆ ಇವತ್ತು ಓಟಿಗಾಗಿ ಬಿಟ್ಟಿ ಭಾಗ್ಯ ನೀಡುತ್ತಿರುವ ರಾಜ್ಯ ಸರ್ಕಾರ ಜನ ಸಾಮಾನ್ಯರನ್ನು ವಂಚಿಸುತ್ತಿದೆ. ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಹೆಮ್ಮೆ ಬಿಜೆಪಿಯದ್ದು, ಇಂತಹ ಮಹಿಳೆಯ ಬಗ್ಗೆ ಹಾಗೂ ನಮ್ಮ ಪ್ರಧಾನ ಮಂತ್ರಿ ಮೋದಿಯ ಬಗ್ಗೆ ಸಿದ್ದರಾಮಯ್ಯನವರು ಹಗುರವಾಗಿ ಮಾತನಾಡುತ್ತಾರೆ. ಅದೇ ರೀತಿ ಅವರ ಪಕ್ಷದ ಸೋನಿಯಾ ಗಾಂಧಿ ಬಗ್ಗೆ ಹಾಗೂ ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾರೆಯೇ? ಎಂದು ಚಿತ್ರನಟಿ ಶೃತಿ ಪ್ರಶ್ನಿದರು.

 

ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿಕೊಂಡು ರಾಜಕಾರಣ-ಬಿ.ವೈ.ರಾಘವೇಂದ್ರ:
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು, ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಶೇ.33ರಷ್ಟು ಸ್ಥಾನವನ್ನು ಮಹಿಳೆಯರಿಗೆ ನೀಡುವ ಮೂಲಕ ಮಹಿಳಾ ಸಮುದಾಯಕ್ಕೆ ಆದ್ಯತೆಯನ್ನು ನೀಡಿದವರು ಪ್ರಧಾನಿ ನರೇಂದ್ರ ಮೋದಿಯವರು. ರಾಜ್ಯದಲ್ಲಿ ಜಿ.ಪಂ-ತಾಪಂ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಶೇ. ೫೦ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಕೊಡುವ ಮೂಲಕ ಯಡಿಯೂರಪ್ಪನವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳಾ ಸಮುದಾಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ರಾಜ್ಯ ಸರ್ಕಾರ ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇಂತಹ ಸರ್ಕಾರ ಅಧಿಕಾರದಲ್ಲಿ ಇರಬೇಕಾ ಎಂಬುದನ್ನು ನಮ್ಮ ಮತದಾರರು ಯೋಚಿಸಬೇಕಾಗಿದೆ ಎಂದು ಹೇಳಿದರು.

ದೇಶದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಪ್ರತಿವರ್ಷ 1 ಲಕ್ಷ ನೀಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ 60 ಕೋಟಿ ಮಹಿಳೆಯರಿದ್ದಾರೆ. ಅವರೆಲ್ಲರಿಗೂ 1 ಲಕ್ಷ ಹಣ ನೀಡಿದರೆ ಪ್ರತಿ ವರ್ಷ 60 ಲಕ್ಷ ಕೋಟಿ ಹಣ ಬೇಕಾಗುತ್ತದೆ. ಹಾಗಾದರೆ ನಮ್ಮ ದೇಶದ ಬಜೆಟ್ ಇರುವುದೇ 45 ಲಕ್ಷ ಕೋಟಿ ಕುಟುಂಬದ ಓರ್ವ ಹೆಣ್ಣು ಮಗಳಿಗೆ 1 ಲಕ್ಷ ನೀಡಿದರೂ ಸಹ 32 ಲಕ್ಷ ಕೋಟಿ ಹಣ ಬೇಕಾಗುತ್ತದೆ. ದೇಶದ ಒಟ್ಟು ಬಜೆಟ್ 45 ಲಕ್ಷ ಕೋಟಿ. ಈ ರೀತಿ ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದೆ ಎಂದರು.

ಮೋದಿ ಸರ್ಕಾರ ಸ್ವಚ್ಛ ಭಾರತ್ ಹೆಸರಿನಲ್ಲಿ ಪ್ರತಿಮನೆಗೆ ಶೌಚಾಲಯ, ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಎಲ್.ಪಿ.ಜಿ. ಸಂಪರ್ಕ ಬಡವರಿಗೆ ಮನೆ, ಎಪಿ‌ಎಲ್ ಹಾಗೂ ಬಿಪಿ‌ಎಲ್ ಕಾರ್ಡ್‌ದಾರರಿಗೆ ಆಯುಷ್ಮಾನ್ ಕಾರ್ಡ್ ಯೋಜನೆ ನೀಡುವ ಮೂಲಕ ಬಡವರು ಮಧ್ಯಮ ವರ್ಗದವರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ ಎಂದರು.

ಕೊಲ್ಲೂರು ಕಾರಿಡಾರ್ ಮೂಲಕ ಬೈಂದೂರು ಅಭಿವೃದ್ಧಿ ಪರ್ವ-ಗಂಟಿಹೊಳೆ: ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಕೊಲ್ಲೂರು ಕಾರಿಡಾರ್ ಮೂಲಕ ಬೈಂದೂರು ಬೈಂದೂರು ಅಭಿವೃದ್ಧಿಯ ಪರ್ವವಾಗಲಿ. ಕೊಲ್ಲೂರು ದೇವಳದ ಅನುದಾನ ಕ್ಷೇತ್ರದ ಅಭಿವೃದ್ಧಿಗೆ ಬಳಕೆಯಾಗುವಂತಹ ಅವಕಾಶಗಳು ಲಭ್ಯವಾಗಲಿ. ಬೈಂದೂರಿನ ಸಮಗ್ರ ಅಭಿವೃದ್ದಿಯಾಗಬೇಕಾದರೆ ಹಾಗೂ ಬೈಂದೂರು ಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗಬೇಕಾದರೆ ರಾಘವೇಂದ್ರ ಅವರು ಮತ್ತೊಮ್ಮೆ ಸಂಸದರಾಗಲೇಬೇಕು. ಕ್ಷೇತ್ರದ ಮತದಾರರು 1 ಲಕ್ಷಕ್ಕೂ ಅಂತರದ ಮತವನ್ನು ರಾಘವೇಂದ್ರ ಅವರಿಗೆ ನೀಡಲಿದ್ದಾರೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ. ರಾಜನಂದಿನಿ ಕಾಗೋಡು ಲಿಂಗ ತಾರತಮ್ಯ ಸರಿದೂಗಿಸುವುದು ಕಷ್ಟಸಾಧ್ಯವಾಗಿದ್ದ ದಿನಗಳಲ್ಲಿ ನರೇಂದ್ರ ಮೋದಿಯವರು ಮಹಿಳಾಪರ ವಿಶೇಷ ಕಾಳಜಿಯಿಂದ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದ ಮೂಲಕ ಸಾಕಷ್ಟು ಸುಧಾರಣೆ ತಂದಿದೆ. ಮಹಿಳಾಪರ ಕಾಳಜಿ ವಹಿಸುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಭಾರತದೇಶದ ಇತಿಹಾಸದಲ್ಲಿ ನೆಹರು ಅವರಿಂದ ಮೋದಿಯವರ ತನಕ ಗಮನಿಸುವಾಗ ಮಹಿಳಾ ಸಬಲೀಕರಣದಲ್ಲಿ ದೊಡ್ಡ ಮೈಲಿಗಲ್ಲು ಹಾಕಿಕೊಟ್ಟವರು ನರೇಂದ್ರ ಮೋದಿಯವರು. ಮಹಿಳೆಯರಿಗೆ 33% ಮೀಸಲಾತಿ, ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಕಠಿಣ ಕಾನೂನು ಜ್ಯಾರಿಗೊಳಿಸಿದ್ದಾರೆ. ಇದಕ್ಕಿಂತ ದೊಡ್ಡ ಗ್ಯಾರಂಟಿ ಏನುಬೇಕು ಎಂದು ಪ್ರಶ್ನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರಾದ ದೀಪಕ ಕುಮಾರ್ ಶೆಟ್ಟಿ ವಹಿಸಿದ್ದರು. ಅರುಣಾದೇವಿ, ಭಾಗೀರಥಿ, ಶಿಲ್ಪಾ ಸುವರ್ಣ,, ಚುನಾವಣಾ ಉಸ್ತುವಾರಿ ಅಶೋಕ ಮೂರ್ತಿ, ಸಂಧ್ಯಾ ರಮೇಶ, ಶೋಭಾ ಪುತ್ರನ್, ದೀಪಾ ಶೆಟ್ಟಿ, ಗಾಯತ್ರಿ ಮಲ್ಲಪ್ಪ, ಮಂಗಳಾ, ಸದಾನಂದ ಉಪ್ಪಿನಕುದ್ರು, ಮಂಡಲದ ಕಾರ್ಯದರ್ಶಿ ಮಹೇಂದ್ರ ಪೂಜಾರಿ, ಉಮೇಶ ಶೆಟ್ಟಿ ಕಲ್ಗದ್ದೆ, ಸುರೇಶ ಬಟ್ವಾಡಿ, ಶೇಖರ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.

ಅನಿತಾ ಸ್ವಾಗತಿಸಿದರು. ಮಹಿಳಾ ಮೋರ್ಚ ಅಧ್ಯಕ್ಷೆ ಶ್ಯಾಮಲ ಕುಂದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!