Sunday, September 8, 2024

ಕಾಂಗ್ರೆಸ್‌ ಯುವರಾಜ ವಯನಾಡಿನಿಂದಲೂ ಹೊರನಡೆಯುತ್ತಾರೆ : ರಾಗಾ ಭವಿಷ್ಯ ನುಡಿದ ಮೋದಿ

ಜನಪ್ರತಿನಿಧಿ (ಮುಂಬೈ) : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಮೇಠಿ ಲೋಕಸಭಾ ಕ್ಷೇತ್ರದಿಂದ ತೆರಳಿದಂತೆ ಕೇರಳದ ವಯನಾಡಿನಿಂದಲೈ ಹೊರನಡೆಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು(ಶನಿವಾರ) ಭವಿಷ್ಯ ನುಡಿದಿದ್ದಾರೆ.

ಮಹರಾಷ್ಟ್ರದ ಮರಾಠವಾಡ ಪ್ರಾಂತ್ಯದ ನಾಂದೇಡ್‌ನಲ್ಲಿ ನಡೆದ ಚುನಾವಣಾ ಸಮಾಔಶದಲ್ಲಿ ಮಾತನಾಡಿದ ಮೋದಿ, ʼಕಾಂಗ್ರೆಸ್‌ ಯುವರಾಜ ಬೇರೆ ದಾರಿಯಿಲ್ಲದೇ ವಯನಾಡ್‌ನಿಂದ ಕಣಕ್ಕಿಳಿದಿದ್ದಾರೆ. ಆದರೇ, ಅವರು ಅಮೇಠಿಯಿಂದ ಹೊರ ನಡೆದಂತೆ ವಯನಾಡಿನಿಂದಲೂ ಹೊರನಡೆಯುತ್ತಾರೆ ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ʼಇಂಡಿಯಾ” ವಿರುದ್ಧವೂ ಕಿಡಿ ಕಾರಿದ್ದಾರೆ. ಲೋಕಸಭೆಗೆ ಮೊದಲ ಹಂತದಲ್ಲಿ ಶುಕ್ರವಾರ ನಡೆದ ಮತದಾನದ ಸಂದರ್ಭ, ಜನರು ಕಾಂಗ್ರೆಸ್‌ ಹಾಗೂ ಇಂಡಿಯಾ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ. ʼವಿಕಸಿತ ಭಾರತʼ ನಿರ್ಮಾಣಕ್ಕಾಗಿ ಮತದಾರರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಯನ್ನು ಅವರು ಬೆಂಬಲಿಸಿದ್ದಾರೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.

ದಲಿತರು, ಬಡವರು ಮತ್ತು ನಿರ್ಗತಿಕ ಏಳಿಗೆಗೆ ತಡೆಗೋಡೆಯಂತೆ ಕಾಂಗ್ರೆಸ್‌ ಇದೆ ಎಂದು ಆರೋಪಿಸಿದ ಮೋದಿ, ಇಂಡಿಯಾ ಮೈತ್ರಿಕೂಟ ಮತ ಬ್ಯಾಂಕ್‌ ರಾಜಕೀಯವನ್ನಷ್ಟೇ ನಂಬಿದೆ. ಕಾಂಗ್ರೆಸ್‌ ಇಂದಿಗೂ ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ.

ಮರಾಠವಾಡ ಮತ್ತು ವಿದರ್ಭ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್‌ ಈ ಪ್ರದೇಶಗಳ ಬಗ್ಗೆ ಮಲತಾಯಿ ಧೋಎಣೆ ಮಾಡಿದೆ. ಅಭಿವೃದ್ಧಿಯನ್ನು ದಶಕಗಳಿಂದ ಈ ಪ್ರದೇಶದಕ್ಕೆ ಕಡೆಗಣಿಸಿದೆ. ಮರಾಠವಾಡ ಹಾಗೂ ವಿದರ್ಭದಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದಕ್ಕೆ, ಇಲ್ಲಿನ ರೈತರು ಬಡವರಾಗಿಯೇ ಉಳಿದಿರುವುದಕ್ಕೆ ಕಾಂಗ್ರೆಸ್‌ ಯೋಜನೆಗಳೇ ಮುಖ್ಯ ಕಾರಣ. ಕೈಗಾರಿಕ ಅಭಿವೃದ್ಧಿಯನ್ನು ಕಾಂಗ್ರೆಸ್‌ನಿಂದ ನಿರೀಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ಗುಡುಗಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!