Saturday, October 12, 2024

ನಾವಷ್ಟೇ ಕೈ ಬೀಸುತ್ತಿಲ್ಲ, ಜನರೂ ಕೂಡ ಕೈ ಬೀಸುತ್ತಿದ್ದಾರೆ : ಈಶ್ವರಪ್ಪಗೆ ಪರೋಕ್ಷ ಟಾಂಗ್‌ ನೀಡಿದ ಬಿ.ವೈ.ರಾ

ಜನಪ್ರತಿನಿಧಿ (ಶಿವಮೊಗ್ಗ) : ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯೂ ಹಾಗೂ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಗುರುದತ್‌ ಹೆಗಡೆ ಅವರಿಗೆ ಬಿ. ವೈ ರಾಘವೇಂದ್ರ ಅವರು ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್, ಮಾಜಿ ಶಾಸಕ ಹರತಾಳು ಹಾಲಪ್ಪ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಬಿ. ವೈ ರಾಘವೇಂದ್ರ ಅವರು, ನಾಮಪತ್ರ ಸಲ್ಲಿಕೆಯ ಮೆರವಣಿಗೆ ಸಂದರ್ಭದಲ್ಲಿ ಸೇರಿದಂತಹ ಜನಸ್ತೋಮದ ಜಾತ್ರೆಯನ್ನು ನೂರಕ್ಕೆ ನೂರಷ್ಟು ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಚುನಾವಣೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಣೆ ಮಾಡುವುದಕ್ಕೆ ಈಗಾಗಲೇ ಇಲ್ಲಿನ ಮತದಾರರು ಶತಸಿದ್ಧ ಎಂದು ತಮ್ಮ ಸಂದೇಶವನ್ನು ರವಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಗೆ ಜೆಡಿಎಸ್‌ ಪಕ್ಷದ ಸಹಕಾರ ಸಿಕ್ಕಿರುವುದು ನಮ್ಮ ಸೌಭಾಗ್ಯ. ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ.  ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌ ಯಡಿಯೂರಪ್ಪ ಅವರು ಹಾಗೂ ಎಚ್‌. ಡಿ ಕುಮಾರಸ್ವಾಮಿ ಅವರು ಒಂದೇ ವೇದಿಕೆಯಲ್ಲಿ ನೋಡುವಂತಹ ಅವಕಾಶವನ್ನು ಶಿವಮೊಗ್ಗದ ಜನರಿಗೆ ಅವಕಾಶ ಸಿಕ್ಕಿದೆ ಎಂದರು.

ತುಂಬಾ ಒಳ್ಳೆಯ ಸ್ಪಂದನೆ ಜನರಿಂದ ದೊರಕುತ್ತಿದೆ. ಇಲ್ಲಿ ನಾವಷ್ಟೇ ಕೈ ಬೀಸುತ್ತಿಲ್ಲ, ಜನರೂ ಕೂಡ ಕೈ ಬೀಸುತ್ತಿದ್ದಾರೆ ಎಂದು ಪ್ರತಿಸ್ಪರ್ಧಿ ಈಶ್ವರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಲ್ಲದೇ, ಒಳ್ಳೆಯ ಭಾವನೆ ಜನರಲ್ಲಿ ಮೂಡಿದೆ. ಎಲ್ಲಿ ಭಾವನೆಗಳಿರುತ್ತದೋ ಅಲ್ಲಿ ಕೆಲಸ ಆಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಳೆದ ಲೋಕಸಭಾ ಚುನಾವಣೆಗಿಂತ ಈ ಭಾರಿಯ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇವತ್ತು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರಿರುವುದರಿಂದ ಮೂಡಿದೆ. ನಾವು ಮಾಡಿದ ಕೆಲಸಗಳು, ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ನೀಡಿದ ಯೋಜನೆಗಳು ಜನರ ಮನಸ್ಸಿನಲ್ಲಿವೆ. ಎದುರಾಳಿ ಯಾರೇ ಇರಲಿ ಜನರು ಬಿಜೆಪಿಗೆ, ಮೋದಿಗೆ ಮತ ಚಲಾಯಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಅವರು  ಹೇಳಿದರು.

ವಿರೋಧ ಪಕ್ಷದವರಿಗೆ ಅಪಪ್ರಚಾರ ಮಾಡುವುದೇ ಕೊನೆಯ ಅಸ್ತ್ರವಾಗಿದೆ. ನಮ್ಮ ಬಗ್ಗೆ ಹಗುರವಾಗಿ ಮಾತನಾಡುವಂತಹ ಕೆಲಸಗಳು ಆಗುತ್ತಿವೆ. ವಿರೋಧ ಪಕ್ಷದ ಟೀಕೆಗಳಿಗೆ ಜನರು ಮತದಾನದ ಮೂಲಕ ಉತ್ತರಿಸುತ್ತಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು, ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದು ನೋಡಿದರೇ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವ ಲಕ್ಷಣಗಳು ಕಾಣುತ್ತಿದೆ ಎಂದವರು, ʼವಿರೋಧ ಪಕ್ಷಗಳಿಂದ ಟೀಕೆಗಳು ತಮ್ಮ ಬಗ್ಗೆ ಬರುತ್ತಿವೆ, ಇದಕ್ಕೆ ನೀವೇನು ಹೇಳುತ್ತೀರಿʼ ಎಂದು ಮಾಧ್ಯಮದ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!