spot_img
Saturday, March 28, 2026
spot_img

ಮಂದಾರ ವಿರಾಸತ್ ಸಾಂಸ್ಕೃತಿಕ ಸಡಗರ: “ವಿಲಕ್ಷ” ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಬ್ರಹ್ಮಾವರ: ಉಡುಪಿಯ ಶಬರಿ ಫಿಲಂಸ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ “ಮಂದಾರ ವಿರಾಸತ್” ಸಾಂಸ್ಕೃತಿಕ ವೈಭವವು ಕೀರ್ತಿಶೇಷ ಕೊರಗಪ್ಪ ವೇದಿಕೆಯಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು.

“ವಿಲಕ್ಷ” ಚಿತ್ರದ ಫಸ್ಟ್ ಲುಕ್ ಅನಾವರಣ ಮತ್ತು ಇದೇ ಸಂದರ್ಭದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಶ್ರೀ ಲಕ್ಷ್ಮಿ ಚನ್ನಕೇಶವ ಭಜನಾ ಮಂಡಳಿ ಎಂಬ ತಂಡ ಕಟ್ಟಿ ಹತ್ತಾರು ಮಕ್ಕಳಿಗೆ ತರಬೇತಿ ನೀಡಿ ಕಿರಿಯ ಭಜಕರೆಂದು ಹಕ್ಲಾಡಿ ಗ್ರಾಮದ ಬಟ್ಟೆಕುದ್ರು ನಿವಾಸಿ ಶ್ರೀಶ ಆರ್ ಬಂಗೇರ ಇವರಿಗೆ ಮಂದಾರ್ತಿ ಅಮ್ಮನ ಸನ್ನಿಧಿ ಯಲ್ಲ ಮಂದಾರ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಸಕರಾಮ ಸ್ವಾಮಿಜಿ, ಚಿತ್ರನಟರಾದ ರಘು ಪಾಂಡೇಶ್ವರ, ನಿರ್ದೇಶಕ ಸಂಜಯ್ ಕಾಡೂರು, ನಂದೀಶ್ ಬಿಲ್ಲಾಡಿ, ಐರ್ ಬೈಲ್ ಆನಂದ ಶೆಟ್ಟಿ, ಪಶು ವೈದ್ಯರಾದ ಖುಷಿ ಮೆಂಡನ್, ಯಕ್ಷಗಾನ ಕಲಾವಿದ ನರಾಡಿ ಭೋಜರಾಜ ಶೆಟ್ಟಿ, ಕರಾಟೆ ಕೋಚ್ ಅಶೋಕ್ ಕುಳಲ, ಇಂಜಿನಿಯರ್ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.

“ತೆರೆಮರೆಯ ನೇಪಥ್ಯ ಕಲಾವಿದರಿಗೆ ಗೌರವ ನೀಡುವುದೇ ಮಂದಾರ ವಿರಾಸತ್‌ನ ಮೂಲ ಉದ್ದೇಶ” ಎಂದು ಸಂಘಟಕರು ಈ ಸಂದರ್ಭದಲ್ಲಿ ತಿಳಿಸಿದರು.

ಸಾಂಸ್ಕೃತಿಕ ರಸದೌತಣ:
ಅಂತರರಾಷ್ಟ್ರೀಯ ಗಾಳಿಪಟ ಉತ್ಸವ, ಸಾಧಕರಿಗೆ ಯಕ್ಷ ಮಂದಾರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಾ ಚಿಗುರು ನೈಲ್ಯಾಡಿ ತಂಡದಿಂದ “ಹೆಂಗ್ಸ್ರ ಪಂಚಿತಿ” ಹಾಸ್ಯ ಕಾರ್ಯಕ್ರಮ ಹಾಗೂ ನಂದಗೋಕುಲ ಕಲಾವಿದರಿಂದ “ಕೊಲ್ಲೂರು ಶ್ರೀ ಮೂಕಾಂಬಿಕಾ” ನೃತ್ಯ ರೂಪಕಗಳು ಪ್ರೇಕ್ಷಕರ ಮನಗೆದ್ದವು. ವಿರಾಸತ್ ವೈಭವದ ಮೆರವಣಿಗೆಯು ಕಾರ್ಯಕ್ರಮದ ಅದ್ದೂರಿತನವನ್ನು ಹೆಚ್ಚಿಸಿತು.

 

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!