spot_img
Tuesday, March 31, 2026
spot_img

ಬಿಲ್ಲವರ ಮನವೊಲಿಸಲು ದ.ಕದಲ್ಲಿ ಮೋದಿ ರೋಡ್‌ ಶೋ | ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್‌ ಶೋ ಆರಂಭ !

ಜನಪ್ರತಿನಿಧಿ (ಮಂಗಳೂರು) : ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ  ಪರ ಪ್ರಧಾನಿ ನರೇಂದ್ರ ಮೋದಿ ಏ.14 ರಂದು ಸಂಜೆ 5 ಗಂಟೆಗೆ ರೋಡ್‌ ಶೋ ನಡೆಸಲಿದ್ದಾರೆ. ಎಸ್‌ಪಿಜಿ ಅಧಿಕಾರಿಗಳು ನಗರದಲ್ಲಿ ಈಗಾಗಲೇ ಭದ್ರತೆಗಳನ್ನು ಪರಿಶೀಲಿಸಿದ್ದಾರೆ.

ಭದ್ರತಾ ದೃಷ್ಟಿಯಿಂದ ಸಿಟಿಯ ನಾರಾಯಣ ಗುರು ಸರ್ಕಲ್‌ನಿಂದ ನವ ಭಾರತ್‌ ಸರ್ಕಲ್‌ವರೆಗೆ ಮಾತ್ರ ರೋಡ್‌ ಶೋ ನಡೆಸಲು ಎಸ್‌ಪಿಜಿ ಭದ್ರತಾ ವಿಭಾಗದ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಪ್ರಧಾನಿ ರೋಡ್‌ ಶೋ ನಡೆಯಲಿರುವ ಮಾರ್ಗಗಳನ್ನು ಬಿಜೆಪಿ ಸಿದ್ಧಪಡಿಸಿದೆ. ಈ ಪ್ರಕಾರ ಸಿಟಿಯ ನಾರಾಯಣ ಗುರು ಸರ್ಕಲ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಕ ರೋಡ್‌ ಶೋ ಪ್ರಾರಂಭ ಆಗಲಿದೆ. ಲಾಲ್‌ ಬಾಗ್‌, ಪಿವಿಎಸ್‌ ಸರ್ಕಲ್‌ ಮಾರ್ಗವಾಗಿ ನವಭಾರತ್‌ ಸರ್ಕಲ್‌ ಮೂಲಕ ಕೆಎಸ್‌ ರಾವ್‌ ರಸ್ತೆಯಲ್ಲಿ ಮುಂದುವರಿದು ಹಂಪನಕಟ್ಟೆಯಲ್ಲಿ ರೋಡ್‌ ಶೋ ಮುಕ್ತಾಯಗೊಳ್ಳಲಿದೆ.

ರೋಡ್‌ ಶೋ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ, ರೋಡ್‌ ಶೋ ನಡೆಸಲು ಉದ್ದೇಶಿಸಿರುವ ಮಾರ್ಗಸೂಚಿಗಳನ್ನು ಭದ್ರತಾ ವಿಭಾಗದ ಅಧಿಕಾರಿಗಳಿಗೆ ನೀಡಲಾಗಿದೆ. ಮೋದಿ ಅವರ ಸುರಕ್ಷತೆ ದೃಷ್ಟಿಯಿಂದ ಅವರು ನೀಡಿದ ಸಲಹೆಯನ್ನು ಒಪ್ಪಿಕೊಳ್ಳಲಾಗುವುದು. ಪ್ರಧಾನಿ ಮೋದಿ ಅವರ ರೋಡ್‌ ಶೋ ಸಂದರ್ಭದಲ್ಲಿ ಮೋದಿ ಸಂಚರಿಸಲಿರುವ ವಾಹನ ಇಂದು(ಶುಕ್ರವಾರ) ಸಿಟಿಗೆ ಬಂದು ತಲುಪಲಿದೆ. ರೋಡ್‌ ಶೋ ಅಲ್ಲಿ ಕಾರ್ಯಕರ್ತರನ್ನು ಒಳಗೊಂಡು ಸಹಸ್ರಾರು ರಾಷ್ಟ್ರಭಕ್ತರು ಸೇರುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!