spot_img
Thursday, December 5, 2024
spot_img

ಮತಗಟ್ಟೆಗಳಲ್ಲಿ ಬ್ರೆತ್‌ ಅನಾಲೈಸರ್‌ ಪರೀಕ್ಷೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌ !

ಜನಪ್ರತಿನಿಧಿ (ನವ ದೆಹಲಿ) : ಮತದಾನದ ವೇಳೆ ಮತಗಟ್ಟೆಯ ಸರತಿ ಸಾಲಿನಲ್ಲಿ ಬ್ರೆತ್‌ ಅನಾಲೈಸರ್‌ ಪರೀಕ್ಷೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ನ್ಯಾಯಮೂರ್ತಿ ಸಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿ ವಜಾಗೊಳಿಸಿ, ಆಂಧ್ರಪ್ರದೇಶದ ಹೈಕೋರ್ಟ್‌ ನೀಡಿದ್ದ ಆದೇಶದ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ಪ್ರಚಾರದ ಹಿತಾಸಕ್ತಿಯಿಂದ ಸಲ್ಲಿಸಲಾಗಿರುವ ಅರ್ಜಿ ಎಂದು ಹೇಳಿದೆ.

ಈ ಬಗ್ಗೆ ತನ್ನ ತೀರ್ಪನ್ನು ಸಮರ್ಥಿಸಿಕೊಂಡ ನ್ಯಾಯಪೀಠ, ಇದು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯೇ ? ಚುನಾವಣಾ ಮಧ್ಯ ಮಾರಾಟ ಇರುವುದಿಲ್ಲ. ಎಲ್ಲಾ ಕಡೆ ಪೊಲೀಸರ ನಿಯೋಜನೆ ಇರುತ್ತದೆ. ಇಂತಹ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸುವುದಿಲ್ಲ ಎಂದು ಹೇಳಿದೆ.

ಈ ಕುರಿತಾಗಿ ಜನವಾದಿ ಪಕ್ಷದ ಆಂಧ್ರಪ್ರದೇಶದ ಘಟಕವು ಹೈಕೋರ್ಟ್‌ ಮೆಟ್ಟಿಲೇರಿತ್ತು. ಹೈಕೋರ್ಟ್‌ ಅರ್ಜಿ ವಜಾಗೊಳಿಸಿದ ಬಳಿಕ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು.

ಮತಗಟ್ಟಗೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಮೊದಲು ಉಸಿರಾಟದ ಪರೀಕ್ಷೆಗೆ ಒಳಪಡಿಸುವುದನ್ನು ಕಡ್ಡಾಯಗೊಳಿಸಲು ಚುನಾವಣಾ ಆಯೋಗಕ್ಕೆ ಸೂಚಿಸುವ ಯಾವುದೇ ನಿರ್ದಿಷ್ಟ ಕಾನೂನು ನಿಬಂಧನೆಗಳ ಬಗ್ಗೆ ಗಮನ ಸೆಳೆಯುವಲ್ಲಿ ಅರ್ಜಿದಾರರಯ ವಿಫಲರಾಗಿದ್ದಾರೆ ಎಂದು ಹೈಕೋರ್ಟ್‌ ಹೇಳಿತ್ತು.

ಯಾವುದೇ ವ್ಯಕ್ತಿ ಮದ್ಯದಿಂದ ಉತ್ತೇಜನಗೊಂಡು ಮತ ಹಾಕುವುದನ್ನು ತಡೆಯಲು ಮತಗಟ್ಟೆಗಳ ಪ್ರವೇಶ ದ್ವಾರದಲ್ಲಿ ಬ್ರೆತ್‌ ಅನಾಲೈಸರ್‌ ಪರೀಕ್ಷೆ ನಡೆಸಲು ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಅರ್ಜಿಧಾರರು ಮನವಿ ಮಾಡಿಕೊಂಡಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!