Tuesday, April 30, 2024

ಜಾತಿ, ಧರ್ಮ, ಬದುಕಿಗಿಂತ ನನ್ನ ದೇಶ ಮೊದಲು ಎನ್ನುವ ರಾಷ್ಟ್ರಭಕ್ತರು ದೇಶದಲ್ಲಿ ಒಗ್ಗೂಡಿದ್ದಾರೆ : ಕೋಟ ಶ್ರೀನಿವಾಸ ಪೂಜಾರಿ

ಜನಪ್ರತಿನಿಧಿ(ಕೋಟೇಶ್ವರ) : ನೀವು ಚಲಾಯಿಸುವ ಮತಗಳು ದೇಶದ ಭವಿಷ್ಯಕ್ಕೆ ಸುರಕ್ಷೆಯಾಗಬೇಕು. ಈ ಜಗತ್ತಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ, ಆಂತರಿಕ ಕಲಹ ಆಗುತ್ತಿವೆ ಈ ನಡುವೆ ನಮ್ಮ ಭಾರತ ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವ ಸಮರ್ಥ ನಾಯಕನನ್ನು ಆರಿಸುವ ಈ ಚುನಾವಣೆ ಎಂದು ಭಾವಿಸಿ ನಿಮ್ಮ ಮತಗಳು ಚಲಾವಣೆಯಾಗಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಭಾರತೀಯ ಜನತಾ ಪಾರ್ಟಿಯ ಕೋಟೇಶ್ವರ ಮಹಾಶಕ್ತಿ ವ್ಯಾಪ್ತಿಯ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸದೃಢ ಮಿಲಿಟರಿ ಶಕ್ತಿ, ಆರ್ಥಿಕ ಸುವ್ಯವಸ್ಥೆ ನಮ್ಮ ದೇಶದಲ್ಲಿ ಇದೆ ಎಂದರೇ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವೇ ಕಾರಣ. ನನ್ನ ಜಾತಿ, ಬದುಕು, ಧರ್ಮಕ್ಕಿಂತ ನನ್ನ ದೇಶ ಮೊದಲು ಎನ್ನುವ ರಾಷ್ಟ್ರಭಕ್ತರು ನಮ್ಮ ದೇಶದಲ್ಲಿ ಒಗ್ಗೂಡಿದ್ದಾರೆ. ಇದು ರಾಷ್ಟ್ರಭಕ್ತರು ಹಾಗೂ ರಾಷ್ಟ್ರದ್ರೋಹಿಗಳ ನಡುವಿನ ಚುನಾವಣೆ ಎಂದು ಅವರು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ರಾಮನೇ ಇಲ್ಲ, ರಾಮ ಕಾಲ್ಪನಿಕ ಎಂದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಕೊಟ್ಟ ಕಾಂಗ್ರೆಸ್ ಪಕ್ಷದ ಆಡಳಿತವನ್ನು ನೋಡುವ ದೌರ್ಭಾಗ್ಯ ಬರಬಾರದು ಎಂದಾದರೇ ‘ಜೈ ಶ್ರೀರಾಮ್’ ಘೋಷಣೆಯೊಂದಿಗೆ ನಾವೆಲ್ಲರೂ ನಮ್ಮ ಮತ ಚಲಾಯಿಸಬೇಕಿದೆ. ಸಮೃದ್ಧ ಭಾರತದ ಸಂಕಲ್ಪ ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕಿದೆ ಎಂದು ಅವರು ಮತದಾರಲ್ಲಿ ವಿನಂತಿಸಿಕೊಂಡರು.

ಕೋಟ ಶ್ರೀನಿವಾಸ ಪೂಜಾರಿ ಮೊದಲೂ ಎಂಪಿ, ಮುಂದೆಯೂ ಎಂಪಿ : ಮಧ್ವರಾಜ್‌ ವಿಶ್ವಾಸ 

ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಇಷ್ಟು ಜನಶಕ್ತಿಯನ್ನು ನೋಡುವುದಕ್ಕೆ ಸಾಧ್ಯ. ಇದು ಭಾರತ ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ. ಕಾಂಗ್ರೆಸ್ ಪಕ್ಷದ ‌ಪ್ರಧಾನ ಮಂತ್ರಿ ಅಭ್ಯರ್ಥಿ ಯಾರೆಂದು ಹೇಳಲಿ, ಆಮೇಲೆ ಚುನಾವಣೆ ಎದುರಿಸಲಿ. ಯಜಮಾನನಿಲ್ಲದ ಪಕ್ಷದ(ಕಾಂಗ್ರೆಸ್) ಆಡಳಿತ ಬೇಕೋ, ಅಥವಾ ಈ ದೇಶವನ್ನು ಸಮರ್ಥವಾಗಿ ಕೊಂಡೊಯ್ಯುವ ಸಮರ್ಥ ಯಜಮಾನನಿರುವ ಪಕ್ಷದ(ಬಿಜೆಪಿ) ಆಡಳಿತ ಬೇಕೋ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರೇ ನಮ್ಮ ಕ್ಷೇತ್ರದ ಸಂಸದ ಅಭ್ಯರ್ಥಿ ಎಂದು ಭಾವಿಸಿ ಎಲ್ಲರೂ ಮತ ಚಲಾಯಿಸಬೇಕಿದೆ. ಶ್ರೀನಿವಾಸ ಪೂಜಾರಿ ಅವರು ಮೊದಲೇ ಎಂಪಿ (ಮೆಂಬರ್ ಆಫ್ ಪಂಚಾಯತ್) ಆಗಿದ್ದರು, ಈಗ ಮತ್ತೊಮ್ಮೆ ಎಂಪಿ (ಮೆಂಬರ್ ಆಫ್ ಪಾರ್ಲಿಮೆಂಟ್ ) ಆಗುವುದಕ್ಕೆ ನಿಮ್ಮೆಲ್ಲರ ಮತ ಚಲಾವಣೆ ಮಾಡಿ ಎಂದು ಅವರು ಮನವಿ ಮಾಡಿಕೊಂಡರು.

ಕುಂದಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಬೀಜಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ಸೇರಿ ವಿವಿಧ ಮೋರ್ಚಾದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!