Wednesday, September 11, 2024

ಸರ್ವಾಧಿಕಾರದ ಆಡಳಿತ ದೇಶದಲ್ಲಿದೆ, ನಮ್ಮ ಸಂವಿಧಾನವನ್ನು ಬದಲಾಯಿಸಲು ಪಿತೂರಿ ನಡೆಸಲಾಗುತ್ತಿದೆ : ಸೋನಿಯಾ ಆರೋಪ

ಜನಪ್ರತಿನಿಧಿ (ಜೈಪುರ) : ವಿಪಕ್ಷಗಳ ನಾಯಕರನ್ನು ಬಿಜೆಪಿಗೆ ಸೇರುವಂತೆ ಒತ್ತಾಯಿಸಲು ವಿವಿಧ ತಂತ್ರಗಳನ್ನು ಬಳಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆ ಹಾಗೂ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ ಎಂದು ಇಂದು(ಶನಿವಾರ) ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಎಂದು ಪ್ರಧಾನಿ ಮೋದಿ ನರೇಂದ್ರ ವಿರುದ್ಧ ಟೀಕೆ ಮಾಡಿದ್ದಾರೆ.

ಪಕ್ಷದ ಚುನಾವಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸೋನಿಯಾ, ಕಳೆದ 10 ವರ್ಷಗಳಿಂದ ದೇಶವು ನಿರುದ್ಯೋಗ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಹಾಗೂ ಅಸಮಾನತೆಯನ್ನೆ ಪ್ರೋತ್ಸಾಹಿಸುತ್ತಾ ಬಂದ ಸರ್ಕಾರ ಅಧಿಕಾರದಲ್ಲಿದೆ. ಇಂದು ನಮ್ಮ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ ಹಾಗೂ ನಮ್ಮ ಸಂವಿಧಾನವನ್ನು ಬದಲಾಯಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ನಾವೆಲ್ಲರೂ ಸೂಕ್ತ ಉತ್ತರ ನೀಡುತ್ತೇವೆ. ತಮ್ಮನ್ನು ತಾವು ಶ್ರೇಷ್ಠ ಎಂದು ಪರಿಗಣಿಸಿರುವ ಮೋದಿ ಅವರು ದೇಶದ ಘನತೆ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಹಾಳು ಮಾಡಿದ್ದಾರೆ. ಸರ್ವಾಧಿಕಾರದ ಆಡಳಿತ ದೇಶದಲ್ಲಿದೆ ಎಂದು ಸೋನಿಯಾ ದೂರಿದ್ದಾರೆ.

ಇನ್ನು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ತನಿಖಾ ಸಂಸ್ಥೆಗಳನ್ನು ಬಂಧಿಸಿರುವುದನ್ನು ಉಲ್ಲೇಖಿಸಿ ಮಾತನಾಡಿದ ಕೇಂದ್ರದ ಬಿಜೆಪಿ ಆಡಳಿತದಲ್ಲಿ ಪ್ರತಿಪಕ್ಷಗಳು ದಾಳಿಗೆ ಒಳಗಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

“ನಿರುದ್ಯೋಗ ಮತ್ತು ಹಣದುಬ್ಬರ ಉತ್ತುಂಗದಲ್ಲಿದೆ ಮತ್ತು ಪೇಪರ್ ಲೀಕ್ ಪ್ರತಿ ರಾಜ್ಯದಲ್ಲೂ ನಡೆಯುತ್ತಿದೆ. ಬಡವರು ಹಾಗೂ ರೈತರನ್ನು ಕೇಳಲು ಯಾರೂ ಇಲ್ಲ. ನಮ್ಮ ಪ್ರಣಾಳಿಕೆಗೆ ‘ನ್ಯಾಯ ಪತ್ರ’ ಎಂದು ಹೆಸರಿಟ್ಟಿದ್ದೇವೆ, ಈ ಪ್ರಣಾಳಿಕೆ ಚುನಾವಣೆಯ ನಂತರ ನಾವು ಮರೆತುಬಿಡುವ ಘೋಷಣೆಗಳ ಪಟ್ಟಿಯಲ್ಲ, ಇದು ನ್ಯಾಯವನ್ನು ಬಯಸುವ ರಾಷ್ಟ್ರದ ಧ್ವನಿಯಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

https://x.com/ANI/status/1776528867731402789

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!