spot_img
Saturday, February 14, 2026
spot_img

ಭಾರತೀಯ ಜನಸಂಘ ಮುಸ್ಲೀಂ ಲೀಗ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು ! ಮೋದಿಗೆ ಚರಿತ್ರೆಯ ಅರಿವು ಕಡಿಮೆ ಇದೆ : ಕಾಂಗ್ರೆಸ್‌ ಟೀಕೆ

ಜನಪ್ರತಿನಿಧಿ (ನವ ದೆಹಲಿ) : ಕಾಂಗ್ರೆಸ್‌ ನಿನ್ನೆ(ಶುಕ್ರವಾರ) ಬಿಡುಗಡೆಗೊಳಿಸಿರುವ ಲೋಕಸಭಾ ಚುನಾವಣೆಯ ಪ್ರಣಾಳಿಕೆ ʼನ್ಯಾಯ ಪತ್ರʼ ದಲ್ಲಿ ಮುಸ್ಲೀಂ ಲೀಗ್‌ನ ಮುದ್ರೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಕಾಂಗ್ರೆಸ್‌ ಕಟುವಾಗಿ ತಿರುಗೇಟು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚರಿತ್ರೆಯ ಬಗ್ಗೆ ಅರಿವಿಲ್ಲ. ೧೯೪೦ರ ದೇಶಕದಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರೇ ಬಂಗಾಳದಲ್ಲಿ ಮುಸ್ಲೀಂ ಲೀಗ್‌ ಜೊತೆ ಸಮ್ಮಿಶ್ರ ಸರ್ಕಾರದ ಭಾಗವಾಗಿತ್ತು ಎಂದು ಹೇಳಿ ಬಿಜೆಪಿ ಹಾಗೂ ಮೋದಿ ವಿರುದ್ಧ ಟೀಕೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ಸಿಂಧ್‌ ಹಾಗೂ ವಾಯುವ್ಯ ಪ್ರದೇಶದಲ್ಲಿ ಮುಸ್ಲೀಂ ಲೀಗ್‌ ಜೊತೆ ಹಿಂದೂ ಮಹಾಸಭಾ ಹೊಂದಾಣಿಕೆ ರಾಜಕೀಯ ಮಾಡಿದ ಇತಿಹಾಸವಿದೆ. ಪ್ರಧಾನಿ ಮೋದಿ ಅವರಿಗೆ ಇತಿಹಾಸ ಗೊತ್ತಿಲ್ಲ. ಅವರಿಗೆ ಚರಿತ್ರೆಯ ಅರಿವು ಕಡಿಮೆ ಇದೆ. ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಮುಖರ್ಜಿ ಬಂಗಾಳದಲ್ಲಿ ಮುಸ್ಲೀಂ ಲೀಗ್‌ ಜೊತೆಗಿನ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು ಎಂದು ತಿರುಗುಬಾಣ ಬಿಟ್ಟಿದ್ದಾರೆ. ಮಾತ್ರವಲ್ಲದೇ ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!