Saturday, September 14, 2024

ಕೋಡಿ: ಶ್ರೀ ಕೋದಂಡರಾಮ, ಆಂಜನೇಯ ದತ್ತಪಾದ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಸಂಪನ್ನ

ಕುಂದಾಪುರ: ಎ.4: ಕೋಟೆಗಾರ್ ರಾಮಕೃತ್ರೀಯ ಸಂಘ ಶ್ರೀರಾಮ ಮಂದಿರ ಕೋಡಿ ಕುಂದಾಪುರ, ಕೋಡಿಯಲ್ಲಿ ನಿರ್ಮಿಸಿರುವ ಶಿಲಾಮಯ ದೇಗುಲದಲ್ಲಿ ಶ್ರೀ ಕೋದಂಡರಾಮ, ಆಂಜನೇಯ ದತ್ತಪಾದ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.

ಗುರುವಾರ ಬೆಳಿಗ್ಗೆ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಠ ಬಾಳೆಕುದ್ರು ಇಲ್ಲಿನ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ  ಆಶೀರ್ವಚನ ನೀಡಿ, ಶಾಲೆ ವಿದ್ಯಾಭ್ಯಾಸ ನೀಡಿದರೆ ದೇವಸ್ಥಾನಗಳು ವ್ಯಕ್ತಿಯ ವ್ಯಕ್ತಿತ್ವಕ್ಕೆ ಉತ್ತಮ ಸಂಸ್ಕಾರ ನೀಡುತ್ತವೆ. ದೇವಸ್ಥಾನದಲ್ಲಿ ವಿಗ್ರಹದ ಪ್ರತಿಷ್ಠಾಪನೆ, ಷಡಾಧರ ಪೂರ್ವಕವಾಗಿ ನಡೆಯುವ ಪ್ರತಿಷ್ಠಾಂಗ ಸಹಿತ ವಿಧಿವಿಧಾನಗಳು ಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟಿವೆ. ದೇವಸ್ಥಾನಗಳಿಂದ ಆಧ್ಯಾತ್ಮಿಕವಾಗಿ ಮನಸ್ಸಿಗೆ ಮನಶಾಂತಿ ದೊರಕುತ್ತದೆ. ಹಾಗಾಗಿ ಊರಿಗೆ ದೇವಸ್ಥಾನಗಳು ಪ್ರಮುಖವಾಗುತ್ತದೆ ಎಂದರು.

ನಿರಂತರವಾದ ಭಜನೆ, ದೇವರ ಆರಾಧನೆ, ನಿತ್ಯಾನುಷ್ಠಾನ, ಅನ್ನದಾನ, ಉತ್ಸವ ಇತ್ಯಾದಿಗಳಿಂದ ದೇವಸ್ಥಾನ ಬಹುಬೇಗ ಅಭಿವೃದ್ಧಿಯಾಗುತ್ತದೆ. ಊರಿಗೆ ಒಳ್ಳೆದಾಗುತ್ತದೆ. ಅರ್ಚಕರು ಪ್ರತಿದಿನ ದೇವರ ಪೂಜೆ ಮಾಡುವ ಲೋಕಕಲ್ಯಾಣವಾಗಲಿ ಎಂದು ಹಾರೈಸುತ್ತಾರೆ. ಲೋಕಕ್ಕೆ ಒಳ್ಳೆದಾಗಲಿ ಎನ್ನುವುದು ಭಗವಂತನ ಆರಾಧನೆಯ ಆಶಯವಾಗಿದೆ ಎಂದರು.

ಭಜನೆಯ ಮೂಲಕ ನಮ್ಮ ಹಿರಿಯರು ಭಗವಂತನ ಭಜಿಸುವ ಆರಾಧನೆಯನ್ನು ಮುನ್ನೆಡೆಸಿಕೊಂಡು ಬಂದರು. ಭಜನೆಯ ಮೂಲಕ ಭಗವಂತನ ಅನುಗ್ರಹ ಸಾಧ್ಯ. ಸಂಸ್ಕೃತಿ, ಸಂಸ್ಕಾರ ಉಳಿಯಲು ಭಜನೆ ಸಾಧ್ಯವಾಗುತ್ತದೆ. ದೇವಸ್ಥಾನಗಳಿಂದ ಊರಿಗೇ ಒಳ್ಳೆದಾಗುತ್ತದೆ. ಎಲ್ಲರೂ ಧಾರ್ಮಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಅವಧೂತ ಶ್ರೀ ವಿನಯ ಗುರೂಜಿ ದತ್ತಪೀಠ ಶ್ರೀ ಕ್ಷೇತ್ರ ಗೌರಿಗದ್ದೆ ಧಾರ್ಮಿಕ ಪ್ರವಚನ ನೀಡಿ, ಕರಾವಳಿಯ ನಂಬಿಕೆಗಳು ವಿಶಿಷ್ಟವಾಗಿದೆ. ಇಲ್ಲಿನ ದೈವಗಳ ಆರಾಧನೆ, ನಾಗರಾಧನೆಯ ಪರಿಣಾಮ ವೃದ್ಧಾಶ್ರಮಗಳು ಬೇರೆ ಭಾಗಗಳಿಗೆ ಹೋಲಿಸಿದರೆ ಘಟ್ಟದ ಕೆಳಭಾಗದಲ್ಲಿ ಕಡಿಮೆ. ಕುಟುಂಬದ ಹಿರಿಯರಿಗೆ ಮಾನ್ಯತೆ ಇದೆ. ಅಂಥಹ ನಂಬಿಕೆಗಳು ಇಲ್ಲಿ ಉಳಿದುಕೊಂಡಿವೆ ಎಂದರು.

ಈ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಅಧ್ಯಕ್ಷರಾದ ಕೆ.ವಿ ಭಾಸ್ಕರ ಕೋಟೆ, ಕಾರ್ಯಾಧ್ಯಕ್ಷರಾದ ಕೋಟೆ ಪ್ರಭಾಕರ, ಕಾರ್ಯದರ್ಶಿ ಕೆ.ಎಚ್.ರತ್ನಾಕರ್ ಸರ್ವ ಸದಸ್ಯರು, ಕೋಟೆಗಾರ್ ರಾಮಕ್ಷತ್ರೀಯ ಸಂಘ ರಿ, ಶ್ರೀರಾಮ ಮಂದಿರ ಕೋಡಿ ಕುಂದಾಪುರ, ರಾಮಕ್ಷತ್ರೀಯ ಯುವಕ ಮಂಡಳಿ ಅಧ್ಯಕ್ಷ ಕೆ.ಎಚ್. ಅಶೋಕ್ ಕಾವೇರಿ, ಕಾರ್ಯದರ್ಶಿ ಗಿರೀಶ್ ಎಸ್ ನಾಯ್ಕ್, ರಾಮಕ್ಷತ್ರೀಯ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಇಂದಿರಾ ಸದಾಶಿವ, ಕಾರ್ಯದರ್ಶಿ ಶ್ರೀಮತಿ ವಿದ್ಯಾ , ಆಡಳಿತ ಮಂಡಳಿ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಗೌರವ ಸಲಹೆಗಾರರು ಉಪಸ್ಥಿತರಿದ್ದರು.ರತ್ನಾಕರ ಕಾರ್ಯಕ್ರಮ ನಿರ್ವಹಿಸಿದರು.

ಎ.2ರಂದು ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಸಂಜೆ 4ಕ್ಕೆ ಶ್ರೀ ದೇವರ ವಿಗ್ರಹವನ್ನು ಶ್ರೀರಾಮ ಮಂದಿರಕ್ಕೆ ಪೂರ್ಣಕುಂಭ ಮೆರವಣಿಗೆಯೊಂದಿಗೆ ತರಲಾಯಿತು. ಎ.3ರಂದು ಬುಧವಾರ ಬೆಳಿಗ್ಗೆ 9.45ಕ್ಕೆ ಶ್ರೀ ಕೋದಂಡರಾಮ, ಆಂಜನೇಯ, ದತ್ತ ಪಾದುಕೆ ಪ್ರತಿಷ್ಠೆ ಜರುಗಿತು. ಶ್ರೀ ದೇವರ ಪ್ರತಿಷ್ಠಾ ಮಹೋತ್ಸವ ನಡೆಯಿತು. ಬೆಳಿಗ್ಗೆ 11 ಘಂಟೆಗೆ ಶ್ರೀಗಳಿಂದ ಆಶೀರ್ವಚನ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 5ಕ್ಕೆ ಬ್ರಹ್ಮಕಲಶಸ್ಥಾಪನೆ, ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ, ಎ.4ರಂದು ಬೆಳಿಗ್ಗೆ 9.45ಕ್ಕೆ ಅಧಿವಾಸ ಹೋಮ, ಮಧ್ಯಾಹ್ನ 12 ಘಂಟೆಗೆ ವಿನಯ ಗುರೂಜಿ ಮತ್ತು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಡೊಳ್ಳು ಕುಣಿತ ಕಾರ್ಯಕ್ರಮ ನಡೆಯಿತು.  ಪುತ್ತೂರು ಜಗದೀಶ್ ಆಚಾರ್ಯ ಮತು ಬಳಗದವರಿಂದ ಸಂಗೀತ ಗಾನ ಸಂಭ್ರಮ ದೊಂದಿಗೆ ಸಂಪನ್ನಗೊಂಡವು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!