Sunday, September 8, 2024

ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗು ಸಾತ್ವಿಕ್‌ನ ರಕ್ಷಣೆ

ವಿಜಯಪುರ: ಎ.4: ವಿಜಯಪುರದ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಕೊಳವೆ ಬಾವಿಗೆ ಬಿದ್ದ 14ತಿಂಗಳ ಮಗು ಸಾತ್ವಿಕ್ ನನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಮತ್ತು ಪೊಲೀಸರ ಸತತ 21 ಗಂಟೆಗಳ ಕಾರ್ಯಚರಣೆಯ ಬಳಿಕ ಮದ್ಯಾಹ್ನ ೧.೪೪ಕ್ಕೆ ಮಗುವನ್ನು ಕೊಳವೆ ಬಾವಿಯಿಂದ ಜೀವಂತ ವಾಗಿ ಹೊರ ತಗೆದಿದ್ದಾರೆ. ಕೊಳವೆಬಾವಿಯಿಂದ ಹೊರ ತಗೆದ ಮಗುವನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಎ.3ರಂದು ಬುಧವಾರ ಸಂಜೆ 6 ಗಂಟೆಗೆ ಮಗು ಸಾತ್ವಿಕ್ ತೆರೆದ ಕೊಳವೆಬಾವಿಗೆ ಬಿದ್ದಿದ್ದ. ತಕ್ಷಣ ರಕ್ಷಣಾ ಕಾರ್ಯ ಆರಂಭವಾಗಿತ್ತು. 16 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಮಗುವಿನ ರಕ್ಷಣೆಗೆ ಕೊಳವೆ ಬಾವಿಗೆ ಸಮನಾಂತರವಾಗಿ 20 ಅಡಿ ದೂರದಿಂದ ಸುರಂಗ ಕೊರೆದು ಮಗುವನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯಚರಣೆ ನಡೆದಿತು. ಆದರೆ ಕಲ್ಲು ಕಾರ್ಯಚರಣೆಗೆ ಅಡ್ಡಿ‌ಆಗಿತ್ತು. ಆದರೂ ಪಟ್ಟು ಬಿಡದೆ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಲಾಗಿದೆ. ಪವಾಡಸದೃಶ ರೀತಿಯಲ್ಲಿ ಸಾತ್ವಿಕ್ ಪುನರ್ ಜನ್ಮ ಪಡೆದಿದ್ದಾನೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!