Sunday, September 8, 2024

ಮತ್ತೊಮ್ಮೆ ಮೋದಿಯವರ ಪಟ್ಟಾಭಿಷೇಕಕ್ಕೆ ನಾವೆಲ್ಲರೂ ದುಡಿಯಬೇಕಿದೆ : ಬಿ.ವೈ ರಾಘವೇಂದ್ರ

ಜನಪ್ರತಿನಿಧಿ (ಬೈಂದೂರು ) : ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ಆಗಿದೆ. ಈಗ ಮತ್ತೊಮ್ಮೆ ನರೇಂದ್ರ ಮೋದಿಯವರು ದೆಹಲಿಯಲ್ಲಿ ಪ್ರಧಾನಿಯಾಗಿ ಪಟ್ಟಾಭಿಷೇಕ ಆಗುವಲ್ಲಿ ನಾವೆಲ್ಲರೂ ದುಡಿಯಬೇಕಿದೆ. ಸಂಕಷ್ಟದಲ್ಲಿರುವ ದೇಶವನ್ನು ಪಾರುಗೊಳಿಸುವ ಚುನಾವಣೆ ಇದು ಎಂದು ಭಾವಿಸಿ ತಾವೆಲ್ಲರೂ ಮತ ಚಲಾಯಿಸುವ ಜವಾಬ್ದಾರಿ ಮೆರೆಯಬೇಕಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ ಹೇಳಿದರು.

ಇಂದು(ಮಂಗಳವಾರ) ಜೆಎನ್ಆರ್ ಕಲಾಮಂದಿರ ಬೈಂದೂರು ಇಲ್ಲಿ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದಿಂದ ನಡೆದ  ಬೈಂದೂರು ಪಟ್ಟಣ ಪಂಚಾಯತ್, ಕೊಲ್ಲೂರು ಮಹಾಶಕ್ತಿ ಕೇಂದ್ರ, ಶಿರೂರು ಮಹಾಶಕ್ತಿ ಕೇಂದ್ರ, ಕಾರ್ಯಕರ್ತರು ಹಾಗೂ ಮತದಾರರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಸಮರ್ಥ ನಾಯಕ ಎಂದು ಗುರುತಿಸಿಕೊಂಡ ದೇಶದ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರು. ಆರ್ಟಿಕಲ್ 370, ಪೌರತ್ವ ತಿದ್ದುಪಡಿ ಕಾಯ್ದೆ, ಶ್ರೀರಾಮ ಮಂದಿರ, ಮಹಿಳಾ ಮೀಸಲಾತಿ, ಮನೆಮನೆಯಲ್ಲೂ ವಿಕಾಸ, ಕೃಷಿ ಸಮ್ಮಾನ್ ಯೋಜನೆ ಮತ್ತು ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮೀ ಅಂತಹ  ಅನೇಕ ಯೋಜನೆಗಳನ್ನು ಬಿಜೆಪಿ ಈ ದೇಶದ, ನಾಡಿನ ಜನರಿಗೆ ಕೊಟ್ಟಿದೆ ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾ ಚುನಾವಣಾ ವ್ಯಾಪ್ತಿಗೆ ಬರುವ ಬೈಂದೂರು ಕ್ಷೇತ್ರದ ಭಾಗದಲ್ಲಿ ಆದ್ಯತೆಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದಿದ್ದಲ್ಲದೇ, ಬೈಂದೂರು ಭಾಗದಿಂದ ಬಹು ಅಂತರದಲ್ಲಿ ಕಾರ್ಯಕರ್ತರು, ಮತದಾರರು ಗೆಲ್ಲಿಸಿಕೊಡುತ್ತಾರೆ ಎಂಬ ನಂಬಿಕೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎ. 18 ರಂದು ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ತಮ್ಮೆಲ್ಲರ ಮತಗಳು ನಿಮ್ಮ ಅಭ್ಯರ್ಥಿಗೆ ಆಶೀರ್ವಾದವಾಗಿ ಪರಿವರ್ತನೆಯಾಗಲಿದೆ ಎಂಬ ನಂಬಿಕೆಯಿದೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ, ಗುರುರಾಜ್ ಗಂಟಿಹೊಳೆ ಮಾತನಾಡಿ, ನಿಜವಾದ ಪ್ರಜಾಪ್ರಭುತ್ವ ಇರುವುದೇ ಬೈಂದೂರಿನಲ್ಲಿ. ಪ್ರಭುತ್ವ ಮತದಾರರು ಮತ್ತು ಕಾರ್ಯಕರ್ತರಿರುವ ಕ್ಷೇತ್ರ ಬೈಂದೂರು. ಬಿ. ವೈ ರಾಘವೇಂದ್ರ ಅವರು ಸಂಸದರಾದ ಮೇಲೆ ಬೈಂದೂರು ಸಂಪೂರ್ಣ ಅಭಿವೃದ್ಧಿ ಹೊಂದಿದೆ. ಈ ಬಾರಿಯೂ ಅವರೇ ಸಂಸದರಾಗಿ ಆಯ್ಕೆ ಆಗುತ್ತಾರೆ ಎನ್ನುವ ಪೂರ್ಣ ವಿಶ್ವಾಸವಿದೆ ಎಂದರು.

ಬೈಂದೂರು ಬಿಜೆಪಿ ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಸುರೇಶ್ ಬಟವಾಡಿ, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಗಳು ಸೇರಿ ಇತರರು ಉಪಸ್ಥಿತರಿದ್ದರು.

https://www.facebook.com/share/v/a7Nnnp7AbmeuUGVa/?mibextid=qi2Omg

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!