Saturday, October 12, 2024

ʼಭಾರತ ರತ್ನʼಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ !

ಜನಪ್ರತಿನಿಧಿ (ನವ ದೆಹಲಿ) : ಮಾಜಿ ಪ್ರಧಾನಿಗಳಾದ ಚೌಧರಿ ಚರಣ್‌ ಸಿಂಗ್, ಪಿ.ವಿ ನರಸಿಂಹ ರಾವ್‌, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌, ಕೃಷಿ ವಿಜ್ಙಾನಿ ಡಾ.ಎಂ.ಎಸ್‌ ಸ್ವಾಮಿನಾಥನ್‌ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ʼಭಾರತ ರತ್ನʼವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು. ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.‌ ಕೆ ಅಡ್ವಾಣಿ ಅವರಿಗೂ ʼಭಾರತ ರತ್ನʼವನ್ನು ಪ್ರಧಾನ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಆದರೇ ಅಡ್ವಾಣಿ ಅವರು ಅನಾರೋಗ್ಯದ ಕಾರಣದಿಂದಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನಾಳೆ ಅವರ ಮನೆಯಲ್ಲೇ ರಾಷ್ಟ್ರಪತಿಗಳು ʼಭಾರತ ರತ್ನʼ ಪ್ರಶಸ್ತಿ ನೀಡಿ ಗೌರವಿಸುತ್ತಾರೆ ಎಂಬ ಮಾಹಿತಿ ಇದೆ. ಇನ್ನು, ʼಭಾರತ ರತ್ನʼ ಪ್ರಶಸ್ತಿ ಪುರಸ್ಕೃತರಿಗೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು.

ದೇಶಕ್ಕಾಗಿ ಪಿ.ಚಿ ನರಸಿಂಹ ರಾವ್‌ ನೀಡಿದ ಕೊಡುಗಡಯನ್ನು ಪ್ರತಿ ಭಾರತೀಯನೂ ಗೌರವಿಸುತ್ತಾನೆ. ಅವರಿಗೆ ಭಾರತ ರತ್ನ ನೀಡಿದ್ದಕ್ಕಾಗಿ ದೇಶದ ಪ್ರತಿಯೊಬ್ಬನೂ ಹೆಮ್ಮೆ ಪಡುತ್ತಾರೆ. ವಿದ್ವಾಂಸರಾಗಿ, ಚಿಂತಕರಾಗಿ ದೇಶದ ಪ್ರಗತಿ ಹಾಗೂ ಆಧುನೀಕರಣಕ್ಕೆ ಹಗಲಿರುಳು ಶ್ರಮ ವಹಿಸಿದ್ದಾರೆ. ಅವರ ಆದರ್ಶಗಳನ್ನು ಎಂದಿಗೂ ಪಾಲಿಸುವಂತದ್ದು ಎಂದು ಪ್ರಧಾನಿ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

https://x.com/narendramodi/status/1773990788780708004?s=20

ದೇಶದ ಅಭಿವೃದ್ಧಿಗೆ , ವಿಶೇಷವಾಗಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಚರಣ್‌ ಸಿಂಗ್‌ ನೀಡಿದ ಕೊಡುಗೆ ಅಪಾರವಾದದ್ದು.  ಅವರು ಪ್ರತಿಪಾದಿಸಿದ ಪರಿಶ್ರಮ, ಸಮರ್ಪಣೆ ಹಾಗೂ ಸಾರ್ವಜನಿಕ ಸೇವೆಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಭವಿಷ್ಯದ ಪೀಳಿಗೆಗೆ ಈ ಗೌರವ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.

https://x.com/narendramodi/status/1773992040394596858?s=20

ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಾಗಿ ತಮ್ಮ ಇಡೀ ಜೀವಮಾನವನ್ನೇ ಮುಡಿಪಾಗಿಟ್‌ ಕರ್ಪೂರಿ ಠಾಕೂರ್‌ ಅವರಿಗೆ ʼಭಾರತ ರತ್ನʼ ಅರ್ಹ ಗೌರವವಾಗಿದೆ, ದೀನದಲಿತರ ಹೋರಾಟಗಾರ ಎಂದು ಕರೆಸಿಕೊಂಡು ಖ್ಯಾತರಾಗಿರುವ ಠಾಕೂರ್‌ ಅವರು ಹಿಂದುಳಿದವರ ಉನ್ನತಿಗೆ ನೀಡಿದ ಕೊಡುಗೆಗಳು ಭಾರತೀಯ ಸಮಾಜದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.

https://x.com/narendramodi/status/1773993279912120370?s=20

ಕೃಷಿ ವಿಜ್ಙಾನಿ ಎಂ.ಎಸ್‌ ಸ್ವಾಮಿನಾಥನ್‌ ಅವರನ್ನು ಉಲ್ಲೇಖಿಸಿದ ಮೋದಿ, ಕೃಷಿ ಜಗತ್ತಿನಲ್ಲಿ ಸ್ವಾಮಿನಾಥನ್‌ ಪೂಜನೀಯ ವ್ಯಕ್ತಿ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಅವರ ಪ್ರಯತ್ನದ ಫಲವಾಗಿ ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆಯತ್ತ ಸಾಗಿದೆ. ಅವರಿಗೆ ನೀಡಲಾದ ಭಾರತ ರತ್ನವು ಕೃಷಿ ಹಾಗೂ ಆಹಾರ ಭದ್ರತೆಯಲ್ಲಿ ಸಂಶೋಧನೆ ಮಾಡಲು ಹೆಚ್ಚಿನ ಜನರನ್ನು ಪ್ರೇರೇಪಿಸಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

https://x.com/narendramodi/status/1773992714607935557?s=20

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!