spot_img
Wednesday, February 19, 2025
spot_img

ಬಿಜೆಪಿ ʼತೆರಿಗೆ ಭಯೋತ್ಪಾದನೆʼಯಲ್ಲಿ ತೊಡಗಿದೆ : ಕಾಂಗ್ರೆಸ್‌ ಆರೋಪ

ಜನಪ್ರತಿನಿಧಿ (ನವ ದೆಹಲಿ ) : ಕಾಂಗ್ರೆಸ್ ಪಕ್ಷವು 1,800 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ನೋಟಿಸ್ ಸ್ವೀಕರಿಸಿದ ನಂತರ “ಕಳೆದ ರಾತ್ರಿ” ಆದಾಯ ತೆರಿಗೆ ಇಲಾಖೆಯಿಂದ ಮತ್ತೆ ಎರಡು ನೋಟಿಸ್‌ಗಳು ಸ್ವೀಕರಿಸಿದೆ ಎಂದು ಕಾಂಗ್ರೆಸ್ ಇಂದು(ಶನಿವಾರ) ಹೇಳಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ನಿನ್ನೆ ರಾತ್ರಿ ನಮಗೆ ಮತ್ತೆರಡು ನೋಟಿಸ್ ಗಳನ್ನು ಆದಾಯ ತೆರಿಗೆ ಇಲಾಖೆ ಕಳುಹಿಸಿದೆ. ಕಾಂಗ್ರೆಸ್ ʼತೆರಿಗೆ ಭಯೋತ್ಪಾದನೆʼಗೆ ಗುರಿಯಾಗಿದೆ ಎಂದು ರಮೇಶ್ ಪುನರುಚ್ಚರಿಸಿದ್ದಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ನಿಷ್ಕ್ರಿಯಗೊಳಿಸಲು ಈ ರೀತಿಯಾಗಿ ಅನ್ಯ ಮಾರ್ಗಗಳಿಂದ ಪ್ರಯತ್ನ ಮಾಡುತ್ತಿದ್ದಾರೆ ” ಎಂದು ಆರೋಪಿಸಿದರು.

ಏತನ್ಮಧ್ಯೆ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆದಿದ್ದಾರೆ ಎಂದು ಹೇಳಿದ್ದಾರೆ.

“ಆದಾಯ ತೆರಿಗೆ ಇಲಾಖೆಯಿಂದ ನಿನ್ನೆ ರಾತ್ರಿ ನನಗೆ ನೋಟಿಸ್ ಬಂದಿದೆ. ನಾನು ಆಘಾತಕ್ಕೊಳಗಾಗಿದ್ದೇನೆ. ವಿಷಯ ಈಗಾಗಲೇ ಮುಚ್ಚಿಹೋಗಿದೆ. ಅವರು (ಬಿಜೆಪಿ) ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್‌ಗೆ ಹೆದರುತ್ತಿದ್ದಾರೆ” ಎನ್ನುವುದು ಇದರಿಂದ ತಿಳಿಯುತ್ತದೆ ಎನ್ನುವುದು ತಿಳಿಯುತ್ತದೆ ಅವರು ಹೇಳಿದರು.

ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆಯಿಂದ ಡಿಮ್ಯಾಂಡ್‌ ನೋಟೀಸ್ :

ನಿನ್ನೆ(ಶುಕ್ರವಾರ), ಆದಾಯ ತೆರಿಗೆ ಇಲಾಖೆಯಿಂದ ಹೊಸದಾಗಿ ನೋಟಿಸ್‌ಗಳು ಬಂದಿವೆ ಎಂದು ಕಾಂಗ್ರೆಸ್ ಹೇಳಿದೆ, ಸುಮಾರು 1,823 ಕೋಟಿ ರೂ. ತೆರಿಗೆ ರಿ-ಅಸೆಸ್‌ಮೆಂಟ್ ಪ್ರಕ್ರಿಯೆಗಳ ವಿರುದ್ಧ ಪಕ್ಷದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ನಂತರ ಈ ನೋಟೀಸ್‌ ಬಂದಿದೆ.

2017-18 ಮತ್ತು 2020-21 ರ ಅಸೆಸ್‌ಮೆಂಟ್‌ ಈಯರ್‌ ಗೆ ನೋಟಿಸ್ ನೀಡಲಾಗಿದೆ ಮತ್ತು ದಂಡ ಮತ್ತು ಬಡ್ಡಿಯನ್ನು ಒಳಗೊಂಡಿದೆ.  ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆಗೆ ಮುನ್ನ ಆರ್ಥಿಕವಾಗಿ ದುರ್ಬಲಗೊಳಿಸಲು “ತೆರಿಗೆ ಭಯೋತ್ಪಾದನೆ” ಯಲ್ಲಿ ಬಿಜೆಪಿ ತೊಡಗಿದೆ ಎಂದು ರಾಷ್ಟ್ರೀಯ  ಕಾಂಗ್ರೆಸ್ ಪಕ್ಷವು ಆರೋಪಿಸಿದೆ.

ಗುರುವಾರ, ದೆಹಲಿ ಹೈಕೋರ್ಟ್ ತನ್ನ ವಿರುದ್ಧ ತೆರಿಗೆ ಅಧಿಕಾರಿಗಳು ನಾಲ್ಕು ವರ್ಷಗಳ ಅವಧಿಗೆ ತೆರಿಗೆ ರಿ-ಅಸೆಸ್‌ಮೆಂಟ್ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿತು.

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!