Saturday, September 14, 2024

ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ತೆಂಕೂರು: ಪುನರ್ ಪ್ರತಿಷ್ಠಾಪನೆ-ಅಷ್ಟಬಂಧ ಬ್ರಹ್ಮಕಲಶೋತ್ಸವ, ಜಾತ್ರೆ

ಕುಂದಾಪುರ: ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ತೆಂಕೂರು ಮಾರಣಕಟ್ಟೆ ಇಲ್ಲಿ ಪುನರ್ ಪ್ರತಿಷ್ಠಾಪನೆ-ಅಷ್ಟಬಂಧ ಬ್ರಹ್ಮಕಲಶೋತ್ಸವ, ಜಾತ್ರೆ ಎಪ್ರಿಲ್ 3ರಿಂದ ಎ.5ರ ತನಕ ನಡೆಯಲಿದೆ.

ವೇ.ಮೂ. ದಿನಕರ ಉಡುಪರು ಹರವರಿ ಮತ್ತು ಶಂಕರ್ ಭಟ್ ಮಾರಣಕಟ್ಟೆ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಎ.3ರಂದು ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದೆ. ಎ.4ರಂದು ಬೆಳಿಗ್ಗೆ 10-05ರಂದು ವೃಷಭ ಲಗ್ನದಲ್ಲಿ ಪುನರ್ ಪ್ರತಿಷ್ಠೆ ನಡೆಯಲಿದೆ. ಎ.5ರಂದು ಬ್ರಹ್ಮಕಲಶೋತ್ಸವ ಜಾತ್ರೆ ಮತ್ತು ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7 ಗಂಟೆಗೆ ಮಂದಾರ್ತಿ ಮೇಳದವರಿಂದ ಯಕ್ಷಗಾನ ಬಯಲಾಟ, ರಾತ್ರಿ 7.30ಕ್ಕೆ ರಂಗಪೂಜೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!