spot_img
Wednesday, April 1, 2026
spot_img

ಸ್ವತಃ ಕೇಂದ್ರ ಸಚಿವರ ಪತಿಯೇ ಚುನಾವಣಾ ಬಾಂಡ್ ಹಗರಣವು ವಿಶ್ವದ ಅತಿ ದೊಡ್ಡ ಹಗರಣ ಎಂದಿದ್ದಾರೆ : ಕಾಂಗ್ರೆಸ್‌

ಜನಪ್ರತಿನಿಧಿ (ಬೆಂಗಳೂರು) : ಸ್ವತಃ ಕೇಂದ್ರ ಸಚಿವರ ಪತಿಯೇ ಚುನಾವಣಾ ಬಾಂಡ್ ಹಗರಣವು ವಿಶ್ವದ ಅತಿ ದೊಡ್ಡ ಹಗರಣ ಎಂದಿದ್ದಾರೆ, ಈಗ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿ ನಡೆಸಿ ವಾಗ್ದಾಳಿ ನಡೆಸುವುದಿಲ್ಲವೇಕೆ? ಎಂದು ರಾಜ್ಯ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ತನ್ನ ಅಧಿಕೃತ ಎಕ್ಸ್‌ ಖಾತೆಯ ಮೂಲಕ ಬಿಜೆಪಿಯನ್ನು ಪ್ರಶ್ನಿಸಿದ ಕಾಂಗ್ರೆಸ್‌, ಚುನಾವಣಾ ಬಾಂಡ್ ಹಗರಣದ ಬಗ್ಗೆ ನರೇಂದ್ರ ಮೋದಿ ಅವರು ತುಟಿ ಬಿಚ್ಚುವುದಿಲ್ಲವೇಕೆ? ಇಷ್ಟು ದೊಡ್ಡ ಹಗರಣವೊಂದು ನಡೆದಿದ್ದರೂ ಐಟಿ, ಇಡಿ, ಸಿಬಿಐಗಳು ಕಣ್ಮುಚ್ಚಿ ಕುಳಿತಿರುವುದೇಕೆ? ರಾಜ್ಯ ಬಿಜೆಪಿ ಈ ಬಗ್ಗೆ ಉತ್ತರಿಸುವುದೇ? ಎಂದು ಪ್ರಶ್ನೆ ಮಾಡಿದೆ.

ಇನ್ನು, ಚುನಾವಣಾ ಬಾಂಡ್‌ ಹಗರಣವು ಭಾರತದ ಅತಿ ದೊಡ್ಡ ಹಗರಣ ಮಾತ್ರವಲ್ಲ, ಜಗತ್ತಿನಲ್ಲೇ ಅತಿ ದೊಡ್ಡ ಹಗರಣವಾಗಿದೆ” ಎಂದು ಚಿಂತಕ, ಖ್ಯಾತ ರಾಜಕೀಯ ವಿಶ್ಲೇಷಕ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿ ಹಾಗೂ ಖ್ಯಾತ ಭಾರತೀಯ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್‌ ಹೇಳಿದ್ದಾರೆ.

ಅವರು ಮಲಯಾಳಂ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚುನಾವಣಾ ಬಾಂಡ್ ಒಂದು ಗಂಭೀರ ವಿಚಾರ. ಚುನಾವಣಾ ಬಾಂಡ್‌ ಕಾರಣದಿಂದಲೇ ಈ ಬಾರಿಯ ಚುನಾವಣೆ ಬಿಜೆಪಿ ಹಾಗೂ ಇತರ ಪಕ್ಷಗಳ ನಡುವಿನ ಹೋರಾಟವಾಗಿರದೆ, ಬಿಜೆಪಿ ಮತ್ತು ಭಾರತೀಯರ ನಡುವಿನ ಹೋರಾಟವಾಗಲಿದೆ ಎಂದು ಹೇಳಿದ್ದಾರೆ.

ಬಿಜೆಪಿಯ ನಿರೀಕ್ಷೆಗೂ ಮೀರಿ ಈ ವಿಚಾರ ಅದರ ಕೈತಪ್ಪಿ ಹೋಗಿದೆ. ಚುನಾವಣಾ ಬಾಂಡ್ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈಗೀಗ ಈ ಹಗರಣದ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ ಎಂದಿದ್ದಾರೆ.

https://x.com/Advaidism/status/1772836348216705122?t=v14pLIinWdSOgEaYFPNW-w&s=08

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!