Sunday, September 8, 2024

ಇಡಿ ವಶಪಡಿಸಿಕೊಂಡ ಸುಮಾರು 3000 ಕೋಟಿ ರೂ. ವಿವಿಧ ಯೋಜನೆಗಳ ಮೂಲಕ ಬಡವರಿಗೆ ನೀಡಲಾಗುತ್ತದೆ : ಮೋದಿ

ಜನಪ್ರತಿನಿಧಿ (ನವದೆಹಲಿ) : ನಿನ್ನೆ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಸಂದೇಶ್​ಖಾಲಿ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು(ಬುಧವಾರ) ಬಂಗಾಳದ ಕೃಷ್ಣನಗರ ಬಿಜೆಪಿ ಅಭ್ಯರ್ಥಿ ರಾಜಮಾತಾ ಅಮೃತಾ ರಾಯ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ.

ದೇಶಾದ್ಯಂತ ನಡೆದ ವಿವಿಧ ದಾಳಿಗಳಲ್ಲಿ ಇಡಿ ವಶಪಡಿಸಿಕೊಂಡ ಸುಮಾರು 3000 ಕೋಟಿ ರೂ. ಅನ್ನು ವಿವಿಧ ಯೋಜನೆಗಳ ಮೂಲಕ ಬಡ ಜನರಿಗೆ ನೀಡುವುದಾಗಿ ರಾಜ್ಯದ ಜನತೆಗೆ ತಿಳಿಸುವಂತೆ ಅಮೃತಾ ರಾಯ್ ಅವರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಕೃಷ್ಣನಗರ ಕ್ಷೇತ್ರದಲ್ಲಿ ಟಿಎಂಸಿ ನಾಯಕ ಹಾಗೂ ಮಾಜಿ ಸಂಸದ ಮಹುವಾ ಮೊಯಿತ್ರಾ ವಿರುದ್ಧ ರಾಜಮಾತಾ ಅಮೃತಾ ರಾಯ್ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಅಭ್ಯರ್ಥಿಯೊಂದಿಗಿನ ದೂರವಾಣಿ ಸಂಪರ್ಕ ಮಾಡಿ ಸಂಭಾಷಣೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಿದ ನಂತರ ಇಡಿಯಿಂದ ಪಡೆದ ಹಣವನ್ನು ಬಡ ಜನರಿಗೆ ನೀಡಲು ಕಾನೂನು ರೂಪಿಸುವ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಪ್ರತಿಪಕ್ಷಗಳು ಏನು ಹೇಳುತ್ತವೆ ಎನ್ನುವುದರ ಕುರಿತಾಗಿ ಭ್ರಮನಿರಸನಗೊಳ್ಳುವುದು ಅಗತ್ಯವಿಲ್ಲ ಎಂದು ಸಲಹೆ ನೀಡಿದ ಪ್ರಧಾನಿ, ರಾಜಕೀಯವನ್ನು ಈಗ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ – ಒಂದು ಬಿಜೆಪಿ ನೇತೃತ್ವದಲ್ಲಿ, ಇದು ದೇಶದಲ್ಲಿ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕಲು ಬದ್ಧವಾಗಿದೆ ಹಾಗೂ ಇನ್ನೊಂದು ಭ್ರಷ್ಟರನ್ನು ಬೆಂಬಲಿಸುವ ಇಂಡಿಯಾ ಮೈತ್ರಿಕೂಟ ಮತ್ತು ಟಿಎಂಸಿ ಎಂದು ಪ್ರಧಾನಿ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!