spot_img
Wednesday, December 4, 2024
spot_img

ಮುಂಬೈ ಇಂಡಿಯನ್ಸ್‌ ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯ ವರ್ತನೆಗೆ ಹಿಟ್‌ ಮ್ಯಾನ್‌ ಫ್ಯಾನ್ಸ್‌ ಆಕ್ರೋಶ !

ಜನಪ್ರತಿನಿಧಿ (ನವ ದೆಹಲಿ) : ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಗೆಲುವು ದಾಖಲಿಸಿದೆ. 169 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಗುಜರಾತ್ ತಂಡದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರಿಂದ ಮುಂಬೈ ಸೋಲನುಭವಿಸಬೇಕಾಗಿ ಬಂತು.

ಐಪಿಎಲ್‌ ಟೂರ್ನಮೆಂಟ್‌ನ ಹಾಟ್‌ ಫೇವರೇಟ್‌ ಟೀಮ್‌ಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್‌ನ ಮಾಜಿ ಕ್ಯಾಪ್ಟನ್‌ ಹಾಗೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಈ ಪಂದ್ಯದಲ್ಲಿ ತೀವ್ರ ಮುಖಭಂಗವಾಗಿದೆ ಎನ್ನುವುದು ಹಿಟ್‌ ಮ್ಯಾನ್‌ ರೋಹಿತ್ ಅಭಿಮಾನಿಗಳ ಅಭಿಪ್ರಾಯ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹಾರ್ದಿಕ್ ಇದೀಗ ರೋಹಿತ್ ಶರ್ಮಾಗೆ ತೋರಿದ ರೀತಿ ರೋಹಿತ್‌ ಹಾಗೂ ಟೀಂ ಇಂಡಿಯಾ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಅವರ ಫೀಲ್ಡಿಂಗ್ ಸ್ಥಾನವನ್ನು ಪದೇ ಪದೇ ಬದಲಾಯಿಸಿದರು. ಸಾಮಾನ್ಯವಾಗಿ 30 ಯಾರ್ಡ್ ವೃತ್ತದಲ್ಲಿರುವ ರೋಹಿತ್ ಈ ಪಂದ್ಯದಲ್ಲಿ ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಕೊನೆಯ ಓವರ್ ನಲ್ಲಿ ಹಾರ್ದಿಕ್ ಸೀನಿಯರ್‌ ಎನ್ನುವ ಸಣ್ಣ ಸೌಜನ್ಯವನ್ನೂ ತೋರಿಸದೇ ರೋಹಿತ್ ಅವರನ್ನು ನಡೆಸಿಕೊಂಡಿರುವುದು ಇಂಡಿಯಾ ಕ್ರಿಕೇಟ್‌ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.

ಗುಜರಾತ್ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಜೆರಾಲ್ಡ್ ಕೋಟ್ಜಿ ಅವರ ಬೌಲಿಂಗ್‌ನಲ್ಲಿ ಮಿಡ್ ಆನ್‌ನಲ್ಲಿ ಮೊದಲು ಫೀಲ್ಡಿಂಗ್ ಮಾಡಲು ರೋಹಿತ್‌ಗೆ ಹಾರ್ದಿಕ್ ಸೂಚಿಸಿದ್ದರು. ಬಳಿಕ ಬೌಲರ್‌ನೊಂದಿಗೆ ಮಾತನಾಡಿ ಹಾರ್ದಿಕ್ ತಕ್ಷಣ ರೋಹಿತ್‌ಗೆ ಮತ್ತೆ ಲಾಂಗ್-ಆನ್ ಸ್ಥಾನಕ್ಕೆ ತೆರಳಲು ಸೂಚಿಸಿದರು. ಮತ್ತೆ ರೋಹಿತ್‌ ನಾನು ಹೋಗಬೇಕಾ ಅಂತ ಕೇಳಿದ್ದಾರೆ. ಕೈಸನ್ನೇ ಮೂಲಕ ಕೇಳಿದ್ದರು, ಅದಕ್ಕೆ ಹಾರ್ದಿಕ್‌ ಹೌದು ಹೋಗು ಅಂತ ಬೆರಳು ತೋರಿಸಿದ್ದಾರೆ. ಒಬ್ಬ ಟೀಂ ಇಂಡಿಯಾದ ಸೀನಿಯರ್‌ ಕ್ರಿಕೇಟಿಗ ಹಾಗೂ ಕ್ಯಾಪ್ಟನ್‌ ಗೆ ತೋರಿದ ಹಾರ್ದಿಕ್‌ ಪಾಂಡ್ಯ ವರ್ತನೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಹಾರ್ದಿಕ್ ಅವರ ನಿರ್ಧಾರದಿಂದ ರೋಹಿತ್ ಫೀಲ್ಡ್‌ ನಲ್ಲಿ ಅತ್ತಿಂದಿತ್ತ ಓಡಾಡುವಂತಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಹೀಗೆಲ್ಲಾ ವರ್ತಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನೀವು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್‌ ಆಗಿರಬಹುದು, ರೋಹಿತ್ ಶರ್ಮಾ ಟೀಂ ಇಂಡಿಯಾ ಕ್ಯಾಪ್ಟನ್ ಎಂದು ನೆನಪಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಫೀಲ್ಡ್ ಸೆಟ್ ಮಾಡುವಾಗ ರೋಹಿತ್ ಶರ್ಮಾ ಅವರನ್ನು ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡಲು ಕಳುಹಿಸಿದರು, ಇದರಿಂದ ರೋಹಿತ್ ಶರ್ಮಾ ದಿಗ್ಭ್ರಮೆಗೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನುಭವಿ ರೋಹಿತ್‌ರನ್ನು ಅವಮಾನಿಸಿದ್ದಕ್ಕಾಗಿ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!