spot_img
Tuesday, March 31, 2026
spot_img

ನೀರಿಗಾಗಿ ಮೂಕ ಜೀವಿಗಳ ಪರದಾಟ : ʼಪಕ್ಷಿಗಾಗಿ ನೀರುʼ ವಿನೂತನ ಕಾರ್ಯಕ್ರಮ

ಜನಪ್ರತಿನಿಧಿ (ಕುಂದಾಪುರ) : ಬಿಸಿಲಿನ ತಾಪದಿಂದಾಗಿ ಮನುಷ್ಯನಿಗಷ್ಟಲ್ಲದೇ  ಪಕ್ಷಿಗಳಿಗೂ ನೀರಿನ ಕೊರತೆ ಉಂಟಾಗಿದೆ. ಈ ಬಿಸಿಲಿನ ತಾಪದಿಂದಾಗಿ ಅನೇಕ  ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿದೆ. ಇದನ್ನು ಗಮನಿಸಿ ಕುಂದಾಪುರದ ಸಾಮಾಜಿಕ ಹೋರಾಟಗಾರರಾದ ಶಿವ ಕುಮಾರ್ ಮೆಂಡನ್ ನೇತೃತ್ವದಲ್ಲಿ,  ಬೆಳಿಗ್ಗೆ  6.00 ಗಂಟೆಯಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ  “ಪಕ್ಷಿಗಾಗಿ ನೀರು”  ಎನ್ನುವ  ಕಾರ್ಯಕ್ರಮದ  ಮೂಲಕ ಕುಂದಾಪುರ ಪುರಸಭಾ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಪಕ್ಷಿಗಳಿಗೆ  ಪೋಟ್(ಮಡಿಕೆ) ಮೂಲಕ ನೀರಿಡುವ ವ್ಯವಸ್ಥೆ ಮಾಡಲಾಯಿತು.

ಈ ಕಾರ್ಯಕ್ರಮ ಕ್ಕೆ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅದ್ಯಕ್ಷರಾದ ಕಿಶೋರ್ ಕುಮಾರ್ ಚಾಲನೆ ನೀಡಿ ಮಾತನಾಡಿ, ನೀರನ್ನು ಮಿತವಾಗಿ ಬಳಸುವುದು ಮತ್ತು ದುರ್ಬಳಕೆ ಮಾಡಬಾರದು . ಬೇಸಿಗೆಯಲ್ಲಿಪ್ರಾಣಿ,  ಪಕ್ಷಿಗಳು ನೀರಿಲ್ಲದೆ ಬಳಲುತ್ತಿರುವುದು ನಾವು ನೋಡುತ್ತಿದ್ದೇವೆ. ಸಾರ್ವಜನಿಕರಲ್ಲಿ ನನ್ನ ವಿನಂತಿ ಇಷ್ಡೆ ತಮ್ಮ ತಮ್ಮ ಮನೆಗಳ ಎದುರು, ಮನೆಯ ಮೇಲ್ಗಡೆ  ಪ್ರತೀ ನಿತ್ಯವೂ ಒಂದು ಬಕೆಟ್ ನೀರು ಇಟ್ಟು, ಪಕ್ಷಿಗಳು ಕುಡಿಯಲಿ  ಇದರಿಂದ ಪಕ್ಷಿಗಳನ್ನು ರಕ್ಷಿಸೋಣ  ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟ ಗಾರ ರಘುವೀರ್ ನಗರ್ಕರ್, ರಾಜೇಶ್ ಕಾವೇರಿ, ಪ್ರಭಾಕರ್ ವಿ,ಜೋಯ್ ಕರ್ವೆಲ್ಲೊ, ರಾಜು ಪೂಜಾರಿ,ಸೀತಾರಾಮ್, ಮಠದ ಬೆಟ್ಟ ರಾಜು,ಸ್ವಾಮಿ ಪ್ರಸಾದ್, ವಿಕಾಸ್ ಹೆಗಡೆ , ಗಣೇಶ್ ಮೆಂಡನ್, ಮಹೇಶ್ ಶೆಟ್ಟಿ, ಪುರಸಭೆ ಸದ್ಯಸ ಶ್ರೀಕಾಂತ್, ಸ್ವಾಮಿ ಪ್ರಸಾದ್, ಪ್ರಮೋದ್  ಶ್ರೀಯಾನ್, ಚಂದ್ರ ಬೂದ,  ಅನಿಲ್ ಉಪ್ಪೂರ್ ಮತ್ತಿತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!