spot_img
Friday, March 27, 2026
spot_img

ಬಿಜೆಪಿ ಜೆಡಿಎಸ್  ಪಕ್ಷವನ್ನು ಯೋಜಿತವಾಗಿ ಮುಗಿಸುವ ಕೆಲಸ ಮಾಡುತ್ತಿದೆ : ಸಚಿವ ದಿನೇಶ್‌ ಗುಂಡೂರಾವ್‌

ಜನಪ್ರತಿನಿಧಿ (ಬೆಂಗಳೂರು) : ಲೋಕಸಭಾ ಚುನಾವಣೆಗಾಗಿ  ಬಿಜೆಪಿಯೊಂದಿಗೆ ಜೆಡಿಎಸ್‌ ಮೈತ್ರಿಯ ಸೀಟು ಹಂಚಿಕೆಯ ವಿಚಾರದಲ್ಲಿ ಜೆಡಿಎಸ್‌ ನಾಯಕರ ಅಸಮಾಧಾನದ  ಬಗ್ಗೆ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವ ಗುಂಡೂರಾವ್, ಬಿಜೆಪಿಯು ಜೆಡಿಎಸ್  ಪಕ್ಷವನ್ನು ಯೋಜಿತವಾಗಿ ಮುಗಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರ ಕೈಯಲ್ಲಿ ಈಗ ಜೆಡಿಎಸ್  ಸಿಕ್ಕಿಹಾಕಿಕೊಂಡಿದೆ. ಹೊರಗೆ ಬರುವುದು ಕೂಡ ಈಗ ಜೆಡಿಎಸ್ ಗೆ ಕಷ್ಟವಾಗಿದೆ. ಜೆಡಿಎಸ್ ನವರು ಮಾತ್ರ ದೆಹಲಿಗೆ ಹೋಗಬೇಕು ಆದರೆ ಮೋದಿ ಬಂದಾಗ ವೇದಿಕೆಗೆ ಕುಮಾರಸ್ವಾಮಿ ಅವರನ್ನು ಕರೆಯಲ್ಲ. ಕುಮಾರಸ್ವಾಮಿಗೆ ಈಗ ತಮ್ಮ ತಪ್ಪು ಅರಿವಾಗುತ್ತಿರುಬಹುದು ಆದರೇ ಇದು ಬಹಳ ತಡವಾಗಿಬಟ್ಟಿದೆ ಎಂದು ಅವರು ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

ಇನ್ನು, ನಗರ್ತಪೇಟೆ ಗಲಾಟೆಗೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಆರೋಪಕ್ಕೆ ದಿನೇಶ್‌ ಗುಂಡೂರಾವ್‌ ತಿರುಗೇಟು ನೀಡಿದ್ದಾರೆ. ತೇಜಸ್ವಿ ಸೂರ್ಯ ಎಂದಿನಂತೆ ದ್ವೇಷ ಹರಡಲು ಪ್ರಯತ್ನಿಸುತ್ತಿದ್ದಾರೆ. ಹಿಂದೂ ಹಾಗೂ ಮುಸ್ಲೀಂ ಹುಡುಗರು ಒಟ್ಟಾಗಿ ಹಲ್ಲೆ ನಡೆಸಿದ್ದಾರೆ.

ಆಜಾನ್ ವಿಚಾರವಾಗಿಯೇ ಹಲ್ಲೆ ನಡೆದಿದ್ದರೆ, ಹಿಂದೂ ಅಂಗಡಿಯವನ ಮೇಲೆ ಹಿಂದೂಗಳು ಏಕೆ ದಾಳಿ ಮಾಡುತ್ತಾರೆ..? ಇನ್ನು ಹನುಮಾನ್ ಚಾಲೀಸಾ ಹಾಕಲಾಗಿತ್ತು ಎಂದು ಯಾರು ಹೇಳಿದರು? ಇದು ಆಜಾನ್ Vs ಭಜನೆ ಜಗಳ ಎಂಬ ತೀರ್ಮಾನಕ್ಕೆ ಹೇಗೆ ಬರುತ್ತೀರಿ..? ಪ್ರಕರಣ ಏನೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಆದರೆ ಬಿಜೆಪಿಯ ಈ ಯುವ ನಾಯಕ ಕೆಳಮಟ್ಟದ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!