spot_img
Wednesday, December 4, 2024
spot_img

ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಾಳಿಗೆ ಪ್ರಕರಣ : ಏಪ್ರಿಲ್ 11ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್‌ !

ಜನಪ್ರತಿನಿಧಿ (ವಾರಣಾಸಿ)  : ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಾಳಿಗೆ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 11ರಂದು ನಡೆಸುವುದಾಗಿ ವಾರಣಾಸಿ ಕೋರ್ಟ್ ಇಂದು (ಮಂಗವಾರ) ಹೇಳಿದೆ.

ವಾರಣಾಸಿ ಜಿಲ್ಲಾ ನ್ಯಾಯಾಲಯವು ಇತ್ತೀಚಿಗೆ ಹಿಂದೂ ಪ್ರಾರ್ಥನೆಗೆ ಅನುಮತಿ ನೀಡಿದ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯ ಮೇಲೆ ಮುಸ್ಲಿಂ ಭಕ್ತರ ಓಡಾಟಕ್ಕೆ ತಡೆ ಕೋರಿ ಸಲ್ಲಿಸಿಕೆ ಮಾಡಿರುವ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 11 ರಂದು ನಿಗದಿಗೊಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್, ಮುಸ್ಲಿಂ ಕಡೆಯವರು ರಂಜಾನ್ ತಿಂಗಳಾಗಿರುವುದರಿಂದ ಉಪವಾಸ ಮಾಡುತ್ತಿದ್ದೇವೆ ಎಂದು ಮಂಗಳವಾರ ಜಿಲ್ಲಾ ಉಸ್ತುವಾರಿ ನ್ಯಾಯಾಧೀಶ ಅನಿಲ್ ಕುಮಾರ್ ಅವರ ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾಗಿ ಅವರ ಪರ ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದರು. ಈ ಕುರಿತು ನ್ಯಾಯಾಲಯವು ಏಪ್ರಿಲ್ 11 ರಂದು ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ ಎಂದು ಅವರು ಹೇಳಿದ್ದಾರೆ.

ಸೆಲ್ಲಾರ್‌ನ ಮೇಲ್ಛಾವಣಿ ತುಂಬಾ ಹಳೆಯದು ಹಾಗೂ ದುರ್ಬಲವಾಗಿದೆ ಎಂದು ಹಿಂದೂ ಕಡೆಯವರು ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ‘ವ್ಯಾಸ್ ತೆಹ್ಖಾನಾ’ ಎಂದೂ ಕರೆಯಲ್ಪಡುವ ಈ ನೆಲಮಾಳಿಗೆಯ ಕಂಬಗಳಿಗೆ ದುರಸ್ತಿ ಅಗತ್ಯವಿದೆ ಎಂದು ಹೇಳಿದೆ.

ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯ ಮನವಿಯನ್ನು ವಜಾಗೊಳಿಸುವಾಗ, ಜ್ಞಾನವಾಪಿ ಮಸೀದಿಯ ‘ವ್ಯಾಸ್ ತೆಹ್ಖಾನಾ’ದಲ್ಲಿ ಹಿಂದೂ ಪ್ರಾರ್ಥನೆಗಳು ಮುಂದುವರಿಯುತ್ತವೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ ಕೆಲವು ದಿನಗಳ ನಂತರ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!